ಹುಬ್ಬಳ್ಳಿ: ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಚಲಿತ ಸಮಸ್ಯೆಗಳಾದ ರೈತರ ಸಾವು, ಅವನ ಬದುಕಿನ ಕುರಿತು ಸಮಗ್ರ ಚರ್ಚೆಯಾಗಿ ಸಮರ್ಪಕ ಪರಿಹಾರ ಕಂಡುಕೊಳ್ಳಬೇಕು ಎಂದು ಕರ್ನಾಟಕ ಜಾನಪದ ವಿವಿ ಕುಲಪತಿ ಡಾ.ಟಿ.ಎಂ. ಭಾಸ್ಕರ ಹೇಳಿದರು.
ರೈತನ ನೆಮ್ಮದಿಗಾಗಿ ನಾವೆಲ್ಲ ಇಂತಹ ಚರ್ಚೆಗಳನ್ನು ಮುನ್ನೆಲೆಗೆ ತರಬೇಕು. ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಂಡಿರುವ ಬಸವೇಶ್ವರರು ಹಾಗೂ ಬುದ್ಧ ಹೇಳಿರುವ ತತ್ವಗಳ ಪಾಲನೆ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಾಗಿದೆ ಎಂದರು.
ರುದ್ರಾಮಠದ ಶ್ರೀ ಬಸವಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಡಾ. ಗೋವಿಂದ ಮಣ್ಣೂರ ಅಧ್ಯಕ್ಷತೆ ವಹಿಸಿದ್ದರು. ಸರ್ವಾಧ್ಯಕ್ಷ ಪ್ರೊ. ಕೆ.ಎಸ್. ಕೌಜಲಗಿ, ಜಾನಪದ ಪರಿಷತ್ ಅಧ್ಯಕ್ಷ ಡಾ. ಎಸ್. ಬಾಲಾಜಿ, ಮಲ್ಲಿಕಾರ್ಜುನ ಸಾವಕಾರ, ಪ್ರೊ. ಜಿ.ಬಿ. ಹಳ್ಳಾಳ, ಡಾ.ಎಚ್.ವಿ. ಬೆಳಗಲಿ ಸೇರಿದಂತೆ ಹಲವರಿದ್ದರು.ಸಮ್ಮೇಳನದ ನಿರ್ಣಯಗಳು: ಸಮ್ಮೇಳನದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಭಾಷೆಯನ್ನು ಚೆನ್ನಾಗಿ ಕಲಿಸುವುದಕ್ಕೆ ಒತ್ತು ಕೊಡುವುದು. ಸಾಮಾಜಿಕ ಜಾಲತಾಣಗಳಲ್ಲಿ ಭಾಷಾ ಶುದ್ಧತೆಗೆ ಗಮನ ಕೊಡುವುದರ ಕುರಿತು ನಿರ್ಣಯ ಕೈಗೊಳ್ಳಲಾಯಿತು.