ಕನ್ನಡಪ್ರಭ ವಾರ್ತೆ ಬೈಲಹೊಂಗಲಕಳಸಾ-ಬಂಡೂರಿ ನಾಲಾ ಜೋಡಣೆ ಯೋಜನೆ ಜಾರಿಗೆ ಸರ್ಕಾರಗಳು ಪ್ರಾಮಾಣಿಕವಾಗಿ ಕ್ರಮಕೈಗೊಳ್ಳಬೇಕು. ರೈತರ ಜೀವನದೊಂದಿಗೆ ಯಾವುದೇ ಸರ್ಕಾರಗಳು ಚೆಲ್ಲಾಟವಾಡಬಾರದು ಎಂದು ನೇಗಿಲ ಯೋಗಿ ರೈತ ಪರಿಶ್ರಮ ಸೇವಾ ಸಂಘದ ರಾಜ್ಯಾಧ್ಯಕ್ಷ ಶಂಕರ ಬೋಳನ್ನವರ ಆಗ್ರಹಿಸಿದರು.
ಸರ್ಕಾರಗಳು ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ರೈತರ ಹಿತ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ರೈತರಿಗಾಗಿ ಹೋರಾಡಿ ಹುತಾತ್ಮರಾದವರ ತ್ಯಾಗವನ್ನು ಮರೆಯಬಾರದು ಎಂದರು.ಕರುನಾಡ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕ ರೈತ ಘಟಕದ ರಾಜ್ಯಾಧ್ಯಕ್ಷ ಅಪ್ಪಾಸಾಹೇಬ ಲಕ್ಕುಂಡಿ, ಜಿಲ್ಲಾ ಸಂಚಾಲಕ ಆನಂದಗೌಡ ಪಾಟೀಲ ಮಾತನಾಡಿದರು. ಪತ್ರಕರ್ತ ಮಹಾಂತೇಶ ತುರಮರಿ, ಮಲ್ಲಿಕಾರ್ಜುನ ಮರಕುಂಬಿ, ನೀಲಾಂಬಿಕಾ ಪಾಟೀಲ, ಮಂಜುನಾಥ ಜಲ್ಲಿ, ವಕೀಲರಾದ ಬಿ.ಬಿ.ಹುಲಮನಿ, ಈರಣಗೌಡ ಪಾಟೀಲ, ಮುಖಂಡರಾದ ನಿಂಗಪ್ಪ ಪೋತಲಿ, ಹನಮಂತ ದೊಡ್ಡನವರ, ಈರಯ್ಯ ಪೂಜೇರಿ, ವಿಠ್ಠಲ ಬಂಡಿವಡ್ಡರ, ಪರೀದಾ ನದಾಫ, ಬಸವರಾಜ ನುಗ್ಗಾನಟ್ಟಿ, ಗಾಯತ್ರಿ ಸುಲದಾಳ, ಸದಾಶಿವ ನಾವಿ, ಬಸವರಾಜ ಹೋಟಕರ, ಅಶೋಕ ಮತ್ತಿಕೊಪ್ಪ, ಪುಂಡಲೀಲ ಹೋಟಿ, ಜುಂಜಪ್ಪ ಪೂಜೇರಿ, ಮಹಾಂತೇಶ ಗುಂಡ್ಲೂರ, ಶ್ರೀಕಾಂತ ಶಿರಹಟ್ಟಿ, ರಾಜು ಸಂಗೊಳ್ಳಿ ಸೇರಿ ಹಲವರು ಇದ್ದರು.ಪ್ರಥಮ ಬಾರಿಗೆ ಕಣ್ಣಿನ ತಪಾಸಣೆ, ಬಿ.ಪಿ, ಶುಗರ್ ಉಚಿತ ಶಿಬಿರದಲ್ಲಿ 202 ಜನ ಕಣ್ಣು, 204 ಬಿಪಿ, ಶುಗರ್ ಮತ್ತು 26 ಜನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದರು.