ಕನಕಪುರ: ಪೂರ್ವಜರು ಕಟ್ಟಿ ಬೆಳೆಸಿದ ಜನಪದ ಕಲೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕಾದರೆ ಇಂದಿನ ಮಕ್ಕಳಿಗೆ ಜಾನಪದ ಕಲೆಯ ಅರಿವು ಮೂಡಿಸಬೇಕಾಗಿದೆ ಎಂದು ಆಕಾಶವಾಣಿ ಕಲಾವಿದ ಬಾನಂದೂರು ಕೆಂಪಯ್ಯ ತಿಳಿಸಿದರು. ತಾಲೂಕಿನ ಬರಡನಹಳ್ಳಿ ಬಳಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಜಾನಪದ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪೂರ್ವಿಕರು ಬಾಯಿಂದ ಬಾಯಿಗೆ ಬಂದ ಕಲೆಯೇ ಜನಪದ ಕಲೆ. ಪರಂಪರಾಗತವಾಗಿ ಬಂದಿರುವ ಜನಪದ ಕಲೆ ಅವಸಾನದ ಅಂಚಿನಲ್ಲಿದ್ದು, ಇಂದಿನ ಯುವ ಪೀಳಿಗೆಗೆ ಜನಪದ ಕಲೆಗಳ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಪ್ರಾಂಶುಪಾಲ ಎಸ್.ಬಸವರಾಜು ಮಾತನಾಡಿ, ಜನಪದ ಕಲೆ ನಮ್ಮ ಪೂರ್ವಿಕರಿಂದ ಬಂದಿರುವ ಕೊಡುಗೆ. ಸಾಕಷ್ಟು ಕಲಾವಿದರು ಈ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಜನಪದ ಕಲೆಯನ್ನ ಉಳಿಸಿ ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಪೂಜಾ ಕುಣಿತ, ಚಿಲಿಪಿಲಿ ಗೊಂಬೆ ಕುಣಿತ, ವೀರಗಾಸೆ, ತಮಟೆ ವಾದನ ಕಲಾತಂಡಗಳ ಉತ್ಸವ ಅದ್ಧೂರಿಯಾಗಿ ನಡೆಯಿತು.ಕಾರ್ಯಕ್ರಮಕ್ಕೆ ಜನಪದ ಕಲಾತಂಡಗಳ ಉತ್ಸವಕ್ಕೆ ಗೀತಾ ಮಲ್ಲಿಕಾರ್ಜುನ್ ಚಾಲನೆ ನೀಡಿದರು. ಜವಾಹರ್ ನವೋದಯ ವಿದ್ಯಾಲಯದ ಸಹಶಿಕ್ಷಕರಾದ ರಾಕೇಶ್ ನಾಡಕರ್ಣಿ, ಅರುಳ್ ಧನಸಿಂಹ, ವಕೀಲ ಸುರೇಶ್, ಸಾಹಿತಿ ಕೂ ಗಿ ಗಿರಿಯಪ್ಪ, ಜಿಲ್ಲಾ ಜಾಗೃತಿ ವೇದಿಕೆ ಸಮಿತಿ ಸದಸ್ಯ ಚನ್ನಪಟ್ಟಣ ಕುಮಾರ್, ಹರೀಶ್, ಕಾಳಯ್ಯ, ನಿಂಗರಾಜು, ಗೀತಾ ಮಲ್ಲಿಕಾರ್ಜುನ್, ಶಿವಮಾದು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕನಕಪುರ ತಾಲೂಕಿನ ಬರಡನಹಳ್ಳಿ ಬಳಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಧಮ್ಮ ದೀವಿಗೆ ಟ್ರಸ್ಟ್ ಆಯೋಜಿಸಿದ್ದ ಜನಪದ ಉತ್ಸವದಲ್ಲಿ ವಿವಿಧ ಕಲಾತಂಡಗಳು ಜನಪದ ಕಲೆ ಪ್ರದರ್ಶನ ಮಾಡಿದರು.
ಕೆ ಕೆ ಪಿ ಸುದ್ದಿ 01(2) :