ಸಹಕಾರ ರಂಗದಲ್ಲಿ ಕೆಲಸ ಮಾಡುವವರಲ್ಲಿ ಸಹಕಾರ ಇರಲಿ: ದೊಡ್ಡನಗೌಡ ಪಾಟೀಲ

KannadaprabhaNewsNetwork | Published : Nov 18, 2024 12:06 AM

ಸಾರಾಂಶ

ಸಹಕಾರ ಸಂಘದಲ್ಲಿನ ಆಡಳಿತ ಮಂಡಳಿ ಸದಸ್ಯರು ಅವಶ್ಯಕತೆ ಇದ್ದವರಿಗೆ ಮಾತ್ರ ಸಾಲ ಕೊಡುವ ಕೆಲಸ ಮಾಡಬೇಕು.

ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿದ ಶಾಸಕ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಸಹಕಾರ ಸಂಘದಲ್ಲಿನ ಆಡಳಿತ ಮಂಡಳಿ ಸದಸ್ಯರು ಅವಶ್ಯಕತೆ ಇದ್ದವರಿಗೆ ಮಾತ್ರ ಸಾಲ ಕೊಡುವ ಕೆಲಸ ಮಾಡಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ತಾಲೂಕಿನ ಹಿರೇಮನ್ನಾಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ನಿ. ಕೊಪ್ಪಳ, ಆರ್‌ಕೆಡಿಸಿಸಿ ಬ್ಯಾಂಕ್ ರಾಯಚೂರು, ಸಹಕಾರ ಇಲಾಖೆ ಕೊಪ್ಪಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಸಂಘಗಳ ಅಭಿವೃದ್ಧಿಯ ಸಲುವಾಗಿ ಸರ್ಕಾರ 2021ರಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಮೂಲಕ ಸಹಕಾರ ಸಂಘಗಳ ಬೆಳವಣಿಗೆ ಅನೂಕೂಲ ಕಲ್ಪಿಸಿದೆ. ಸಹಕಾರ ರಂಗದಲ್ಲಿ ಕೆಲಸ ಮಾಡುವವರು ಪರಸ್ಪರ ಸಹಕಾರದಿಂದ ಇರಬೇಕು. ಸಂಘದಲ್ಲಿ ಸಾಲವನ್ನು ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು. ಸಕಾಲಕ್ಕೆ ಮರುಪಾವತಿ ಮಾಡಬೇಕು ಎಂದರು.

ಸಂಘದಲ್ಲಿನ ಸೌಲಭ್ಯಗಳು ಎಲ್ಲರಿಗೂ ದೊರಕುವಂತೆ ಮಾಡಬೇಕು. ಅಭಿವೃದ್ಧಿಯಲ್ಲಿ ನಮ್ಮನ್ನು ನಾವೇ ತೊಡಗಿಸಿಕೊಳ್ಳಬೇಕು. ನಾವೆಲ್ಲರೂ ಸಹಕಾರಿಯಾಗಿ ಕೆಲಸ ಮಾಡಬೇಕು. ಸಹಕಾರಿ ಪಿತಾಮಹ ಸಿದ್ದನಗೌಡರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು.

ಸಹಾಯಕ ನಿಬಂಧಕ ಪ್ರಕಾಶ ಸಜ್ಜನ ಮಾತನಾ,ಡಿ ಸಹಕಾರ ಕ್ಷೇತ್ರ ಬಲಪಡಿಸಲು ಈ ಸಪ್ತಾಹ ಆಯೋಜನೆ ಮಾಡಿದೆ. ರಾಜ್ಯ ಮತ್ತು ಕೇಂದ್ರ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ ಎಂದು ಹೇಳಿದರು.

ಸಿಡಿಒ ಬಸಪ್ಪ ಗಾಳಿ ಮಾತನಾಡಿ, ಸಹಕಾರ ವ್ಯವಸ್ಥೆ ಮನೆಯಿಂದ ಪ್ರಾರಂಭಗೊಂಡಿತು. ಈ ವ್ಯವಸ್ಥೆ ವಿಫಲವಾಗದೆ ಸಫಲವಾಗಬೇಕು. ಯಶಸ್ವಿನಿ ಯೋಜನೆಯಡಿ ತಾಲೂಕಿನಲ್ಲಿ ೧೧೦೦೦ ನೋಂದಣಿ ಮಾಡಲಾಗಿದೆ. ೨೧೨೮ ಕಾಯಿಲೆಗಳಿಗೆ ಈ ಯೋಜನೆಯಡಿ ಚಿಕಿತ್ಸೆ ನೀಡಲಾಗುತ್ತದೆ. ಈ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ಶೇಖರಗೌಡ ಮಾಲೀಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರ್.ಕೆ.ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಶಿವಶಂಕರಗೌಡ ಪಾಟೀಲ ಕಡೂರು ಸಿದ್ದನಗೌಡ ಪಾಟೀಲ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಧ್ವಜಾರೋಹಣವನ್ನು ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ ಪುರದ ನೆರವೇರಿಸಿದರು.

ಈ ಸಂದರ್ಭ ಹಿರೇಮನ್ನಾಪುರ ಗ್ರಾಪಂ ಅಧ್ಯಕ್ಷೆ ಅಕ್ಕಮಹಾದೇವಿ ಪೊಲೀಸ್‌ಪಾಟೀಲ್, ಆರ್.ಜಿ.ಬಿ ಇಪ್ಕೋ ಸಂಸ್ಥೆ ಸದಸ್ಯ ಸೋಮಪ್ಪ ಮುಳ್ಳೂರು, ಪಿಕಾರ್ಡ್‌ ಬ್ಯಾಂಕ್ ಅಧ್ಯಕ್ಷ ಮಹಾಲಿಂಗಪ್ಪ ದೋಟಿಹಾಳ, ಬುಡ್ನೇಸಾಬ್ ಕಲಾದಗಿ, ವೆಂಕಟೇಶ ಡಿ. ಶೆಟ್ಟರ, ಮಹಾಂತೇಶ ಎಸ್. ಸಜ್ಜನ, ರಾಘವೇಂದ್ರ ಸುಬೇದಾರ, ಶಶಿಧರ ಶೆಟ್ಟರ್, ದಸ್ತಗೀರ ಅಲಿ, ಮಲ್ಲಿಕಾರ್ಜುನ, ಚಿನ್ನಪ್ಪ ವಜ್ರಮಟ್ಟಿ, ಸವಿತಾ ಜೋಶಿ, ಅಲ್ಲಮಪ್ರಭು ಡಾಣಿ, ಚಿನ್ಮಯಿ ಪಾಟೀಲ್, ಅಕ್ಷಯ ಕುಮಾರ, ಗುರುಸ್ವಾಮಿ ಕಾಡಗಿಮಠ, ದೊಡ್ಡ ಬಸಯ್ಯ ಹಿರೇಮಠ, ರಾಜಶೇಖರ ಹೊಸಮನಿ, ಶಿವರುದ್ರಯ್ಯ ಹಿರೇಮಠ ಸೇರಿದಂತೆ ಅನೇಕರು ಇದ್ದರು.

Share this article