ಕನ್ನಡಿಗರ ಹಿರಿಮೆ ಎತ್ತಿ ಹಿಡಿಯುವ ಕೆಲಸವಾಗಲಿ: ಮಂಜುನಾಥ ನಾಯ್ಕ ಮುರುಡೇಶ್ವರ

KannadaprabhaNewsNetwork |  
Published : Nov 03, 2026, 02:30 AM IST
ಭಟ್ಕಳದ ಆಸರಕೇರಿಯ ಭುವನೇಶ್ವರಿ ಕನ್ನಡ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. | Kannada Prabha

ಸಾರಾಂಶ

ಆಸರಕೇರಿಯ ಶ್ರೀ ಭುವವನೇಶ್ವರಿ ಕನ್ನಡ ಸಂಘವು ಕಳೆದ ೨೯ ವರ್ಷಗಳಿಂದ ತಮ್ಮ ಕೈಯಿಂದ ಹಣವನ್ನು ಖರ್ಚು ಮಾಡಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡುತ್ತಿದ್ದಾರೆ.

ಭಟ್ಕಳ: ಕನ್ನಡಿಗರು ಇಂದು ನಮ್ಮ ಇತಿಹಾಸ, ಸಂಸ್ಕೃತಿ, ನಮ್ಮ ಸಂಪ್ರದಾಯವನ್ನು ಮರೆಯುತ್ತಿದ್ದಾರೆ. ಇದು ಸರಿಯಲ್ಲ. ಪ್ರತಿಯೊಬ್ಬರೂ ಕನ್ನಡ ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡಿಗರ ಹಿರಿಮೆಯನ್ನು ಎತ್ತಿ ಹಿಡಿಯುವ ಕೆಲಸ ನಮ್ಮಿಂದಾಗಬೇಕು ಎಂದು ಯುವ ಸಾಹಿತಿ ಮಂಜುನಾಥ ನಾಯ್ಕ ಮುರುಡೇಶ್ವರ ಹೇಳಿದರು.

ಪಟ್ಟಣದ ಆಸರಕೇರಿಯಲ್ಲಿ ಭುವನೇಶ್ವರಿ ಕನ್ನಡ ಸಂಘದ ವತಿಯಿಂದ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಆಸರಕೇರಿಯ ಶ್ರೀ ಭುವವನೇಶ್ವರಿ ಕನ್ನಡ ಸಂಘವು ಕಳೆದ ೨೯ ವರ್ಷಗಳಿಂದ ತಮ್ಮ ಕೈಯಿಂದ ಹಣವನ್ನು ಖರ್ಚು ಮಾಡಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಇದು ಹೆಮ್ಮೆಯ ವಿಷಯ ನಮ್ಮ ಜಿಲ್ಲೆಯಲ್ಲಿಯೆ ಈ ರೀತಿಯ ಕನ್ನಡ ಅಭಿಮಾನಿಗಳು ಸಿಗುವುದು ಅಪರೂಪ ಎಂದ ಅವರು, ಜಿಲ್ಲೆಯ ಕನ್ನಡಿಗರು ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಹೋರಾಟ ಮಾಡಿದ್ದಾರೆ.

ಜಿಲ್ಲೆಯ ಅಂಕೋಲಾದ ಉಪ್ಪಿನ ಸತ್ಯಾಗೃಹದಲ್ಲಿ ನಮ್ಮ ಜಿಲ್ಲೆಯ ಕನ್ನಡಿಗರಲ್ಲದೇ ಬೆಳಗಾವಿ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಿಂದ ಕನ್ನಡಿಗರು ಆಗಮಿಸಿ ಬ್ರಿಟೀಷರ ವಿರುದ್ದ ಸತ್ಯಾಗ್ರಹ ನಡೆಸಿದ್ದಾರೆ. ೪೫ ದಿನಗಳ ವರೆಗೆ ಈ ಸತ್ಯಾಗ್ರಹ ನಡೆಯಿತು. ನಮ್ಮ ಕನ್ನಡಿಗರು ಈ ಸತ್ಯಾಗ್ರಹದಲ್ಲಿ ಭಾಗವಹಿಸಿ ದೇಶದ ಸ್ವಾತಂತ್ರ್ಯತರುವಲ್ಲಿಯೂ ಪಾತ್ರ ವಹಿಸಿದ್ದಾರೆ ಎಂದರು.

ಆಸರಕೇರಿ ಗುರುಮಠದ ಮಾಜಿ ಅಧ್ಯಕ್ಷ ಅರುಣ್ ನಾಯ್ಕ ಮಾತನಾಡಿ, ಪ್ರತಿವರ್ಷ ಭುವನೇಶ್ವರಿ ಕನ್ನಡ ಸಂಘವು ವಿನೂತನ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಆಸರಕೇರಿಯ ನಾಮಧಾರಿ ಗುರುಮಠದ ನೂತನ ಅಧ್ಯಕ್ಷರಾದ ನಾಗೇಂದ್ರ ನಾಯ್ಕ, ಅಧ್ಯಕ್ಷತೆ ವಹಿಸಿದ್ದ ಕನ್ನಡ ಭುವನೇಶ್ವರಿ ಸಂಘದ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಅರ್ಬನ್ ಬ್ಯಾಂಕ್ ನಿರ್ದೇಶಕ ಶ್ರೀಧರ ನಾಯ್ಕ, ಗುರುಮಠದ ಗೌರವಾಧ್ಯಕ್ಷ ಕೃಷ್ಣ ನಾಯ್ಕ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ರಿಕ್ಷಾ ಚಾಲಕ ಮಾಲೀಕ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ,ಪತ್ರಕರ್ತ ಮನಮೋಹನ ನಾಯ್ಕ ಮಾತನಾಡಿದರು.

ವೆಂಕಟೇಶ ಅಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ, ಪ್ರಕಾಶ ನಾಯ್ಕ, ರಮೇಶ ನಾಯ್ಕ ಉದ್ಯಮಿ ತಿಮ್ಮಪ್ಪ ನಾಯ್ಕ, ಅನಿಲ್ ಮಹಾಲೆ, ವಿನಾಯಕ ಶೇಟ್, ಮೋಹನ ಮಡಿವಾಳ ಪಾಂಡುರಂಗ ನಾಯ್ಕ ಇದ್ದರು. ಗುರುಮಠದ ಪ್ರಧಾನ ಅರ್ಚಕ ವಿನಾಯಕ ಭಟ್ ಕನ್ನಡ ಮಾತೆಗೆ ಕನ್ನಡ ಭಾಷೆಯಲ್ಲಿ ಮಂತ್ರ ಪಠಿಸಿ ಪೂಜೆ ಸಲ್ಲಿಸಿದರು. ಪಾಂಡುರಂಗ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ರಾಘು ನಾಯ್ಕ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುಗಿಲೆದ್ದ ಸರ್ಕಾರ ವರ್ಸಸ್‌ ಕುಮಾರಸ್ವಾಮಿ ಸ್ಟಿಂಗ್‌ ಫೈಟ್‌ - ಈಗ ಎಚ್‌ಡಿಕೆ ಚಾರ್ಜ್‌ಶೀಟ್‌
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ - ಇನ್ನೂ 3 ದಿನ ರಾಜ್ಯದೆಲ್ಲೆಡೆ ಮಳೆ