ಕನ್ನಡಪ್ರಭ ವಾರ್ತೆ ಮುಧೋಳ
ಡ್ರಗ್ಸ್ (ಮಾದಕ ವಸ್ತು) ಮಾರಾಟ ಮತ್ತು ಸೇವನೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಸಚಿವರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡ್ರಗ್ಸ್ ಸೇವನೆ ನಡೆಯುತ್ತಿದೆ. ಇದರಿಂದ ಯುವ ಜನತೆಯ ಭವಿಷ್ಯ ಹಾಳಾಗುತ್ತದೆ ಎಂದು ವಿಷಾದಿಸಿದ ವ್ಯಕ್ತಪಡಿಸಿದರು.
ರಾತ್ರಿ ವೇಳೆ ನಡೆಯುವ ಕಳ್ಳತನಗಳನ್ನು ತಡೆಗಟ್ಟಲು ವಿಶೇಷ ದಳವನ್ನು ನಿರ್ಮಿಸಿ, ನಿರಂತರ ರಾತ್ರಿ ಗಸ್ತು ತಿರುಗಿಸಬೇಕು. ಆದಷ್ಟು ಬೇಗ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಐಟಿಎಂಎಸ್ ಎ.ಐ. ಕ್ಯಾಮೆರಾ ಅಳವಡಿಸುವುದರಿಂದ ಅಪರಾಧ ತಡೆಗಟ್ಟಲು ಮತ್ತು ಅಪರಾಧಿ ಗಳನ್ನು ಪತ್ತೆಹಚ್ಚಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಸಿಇಒ ಶಶಿಧರ್ ಕುರೇರ, ಜಿಲ್ಲಾ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಜಮಖಂಡಿ ಎಸಿ ಶ್ವೇತಾ ಭೀಡಕರ, ಡಿವೈಎಸ್ಪಿ ಸೈಯದ್ ರೋಷನ್ ಜಮೀರ್, ಸಿಪಿಐ ಮಹದೇವ ಶಿರಹಟ್ಟಿ, ಪಿಎಸ್ಐ ಅಜಿತ್ ಹೊಸಮನಿ ಹಾಗೂ ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.
ಸಿಸಿ ಕ್ಯಾಮೆರಾ ನೀಡಲು ಸಮ್ಮತಿ:ಮುಧೋಳ ನಗರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಅರಳಿಕಟ್ಟಿ ಫೌಂಡೇಶನ್ ನಿಂದ ಹತ್ತು ಕ್ಯಾಮೆರಾ ನೀಡುವುದಾಗಿ ಅರಳಿಕಟ್ಟಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಡಾ ತಿಮ್ಮಣ್ಣ ಅರಳಿಕಟ್ಟಿ ಘೋಷಣೆ ಮಾಡಿದರು.