ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಸಮೀಪದ ಪರ್ವತಿ ಗ್ರಾಮದಲ್ಲಿ ರಾಜಋಷಿ ಭಗೀರಥ ಉಪ್ಪಾರರ ಸಂಘದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಭಗೀರಥ ಮಹಾಋಷಿ ಜಯಂತ್ಯೋತ್ಸವ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಾಮೂಹಿಕ ಮದುವೆಗಳು ಬಡವರಿಗೆ ವರದಾನವಾಗಿದ್ದು, ಇವು ಭಾಗ್ಯವಂತರ ಮದುವೆಗಳು. ಸಮಾಜದಲ್ಲಿ ಸಾಮೂಹಿಕ ಮದುವೆಗಳು ಹೆಚ್ಚುಹೆಚ್ಚು ನಡೆಯಬೇಕು. ನವದಂಪತಿಗಳು ದಾಂಪತ್ಯ ಜೀವನದಲ್ಲಿ ಪರಸ್ಪರ ಅರಿತುಕೊಂಡು ಕಷ್ಟ, ಸುಖಗಳನ್ನು ಸಮಾನವಾಗಿ ಸ್ವೀಕರಿಸಿ, ಬದುಕು ಸಾಗಿಸಬೇಕು. ಉಪ್ಪಾರ ಸಮಾಜ ಬಾಂಧವರು ಸಾಮೂಹಿಕ ಮದುವೆ ಸಮಾರಂಭ ಹಮ್ಮಿಕೊಂಡು ಬಡವರಿಗೆ ನೆರವಾಗಿದ್ದು ಶ್ಲಾಘನೀಯ. ರಾಜಋಷಿ ಭಗೀರಥ ಮಹರ್ಷಿಗಳ ಜಯಂತಿಯಂದು ನವದಾಂಪತ್ಯಕ್ಕೆ ಕಾಲಿಟ್ಟ ನೀವು,ಶರಣರ ಆಚಾರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಂತೋಷದಿಂದ ಜೀವನ ನಡೆಸಿರಿ ಎಂದು ಹಾರೈಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ನವದಾಂಪತ್ಯಕ್ಕೆ ಕಾಲಿಟ್ಟಿರುವ ನವದಂಪತಿಗಳು ಒಂದಾಗಿ, ಹಿರಿಯ ಮಾರ್ಗದರ್ಶನದಲ್ಲಿ ಸುಂದರವಾದ ಬದುಕು ಕಟ್ಟಿಕೊಳ್ಳಬೇಕು. ಉತ್ತಮ ಸಂಸ್ಕಾರವಂತರಾಗಿ ಸಮಾಜದಲ್ಲಿ ಬದುಕಿಬಾಳಬೇಕು. ನಿಮ್ಮ ಜೀವನ ಸುಖಕರವಾಗಿ ಬೆಳಯಲಿ ಎಂದು ಹಾರೈಸಿದರು.ಐದು ಜೋಡಿ ವಧುವರರು ನವಜೀವನಕ್ಕೆ ಕಾಲಿಟ್ಟರು. ಗುರುಸಿದ್ದೇಶ್ವರ ಮಠದ ಗುರುಸಿದ್ಧ ಪಟ್ಟದಾರ್ಯ ಶ್ರೀಗಳು, ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶ್ರೀಗಳು, ಹೊಸೂರಿನ ಗುರುಸಿದ್ದೇಶ್ವರ ಶ್ರೀಗಳು ಸಾನಿಧ್ಯ ವಹಿಸಿದ್ದರು. ರಮೇಶ ಬೂದಿಹಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.