ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದಲ್ಲಿ ನಡೆಯುತ್ತಿರುವ ರಂಭಾಪುರಿ ಪೀಠದ ಶರನ್ನವರಾತ್ರಿ ದಸರಾ ಧರ್ಮಸಮ್ಮೇಳನದಲ್ಲಿ ಗುರುವಾರ ಅವರು ಮಾತನಾಡಿದರು. ಪರಿಸರದೊಂದಿಗೆ ಜೂಜಾಡುವ ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಸಮಸ್ಯೆಗೆ ಸ್ವಂದಿಸಬೇಕಾದ ಅವಶ್ಯಕತೆ ಇದೆ ಎಂದರು.
ರೈತ ಪಕ್ಷಾತೀತ. ಆದರೆ ಎಲ್ಲ ರಾಜಕೀಯ ಪಕ್ಷಗಳು ರೈತರಿಗೆ ಸೇರಿವೆ. ಆದ್ದರಿಂದ ರೈತರ ಸಂಕಷ್ಟ ನಿವಾರಣೆಗೆ ಮಾದರಿ ಪ್ರಯತ್ನವಾಗಬೇಕು. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವ ಕೆಲಸವಾಗಬೇಕು ಎಂದ ಅವರು, ಆಲಮಟ್ಟಿ ಜಲಾಶಯದಲ್ಲಿ ನೀರಿನ ಸಂಗ್ರಹ ಕುಸಿಯುತ್ತಿದ್ದು ಸರ್ಕಾರ ಇಂದಿನಿಂದಲೇ ಮಹಾರಾಷ್ಟ್ರದಿಂದ ನೀರು ಬಿಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.ನಿಜವಾದ ಧರ್ಮದ ಪರಿಕಲ್ಪನೆ, ಮಾನವೀಯತೆ. ವೈಚಾರಿಕತೆ ಇಲ್ಲದ ಕಾರಣ ಭಯೋತ್ಪಾದನೆ ನಡೆಯುತ್ತಿದ್ದು ವಿಶ್ವದ 55 ರಾಷ್ಟ್ರಗಳಲ್ಲಿ ಅಶಾಂತಿ ಮೂಡಿದೆ. ಧರ್ಮದ ಹೆಸರಿನಲ್ಲಿ ದ್ವೇಷ, ಅಸೂಯೆಗಳು ತಾಂಡವವಾಡುತ್ತಿವೆ. ಅತಿಯಾದ ಮೊಬೈಲ್ ಗೀಳಿನಿಂದಾಗಿ ಪರಿವಾರಗಳು ದೂರವಾಗುತ್ತಿವೆ ಎಂದು ಬೇಸರಿಸಿದ ಅವರು, ಪರಿವಾರಕ್ಕೆ ಸಮಯ ನೀಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದೇವೆ. ಸನಾತನ ಸಂಸ್ಕೃತಿ ಧರ್ಮಾಚರಣೆ ಅವಶ್ಯಕವಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಸಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಬಸವತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಬೀಳಗಿಯ ಗುರುಪಾದ ಶಿವಾಚಾರ್ಯರು, ಸವದತ್ತಿಯ ಮಲ್ಲಿಕಾರ್ಜುನ ಶಿವಾಚಾರ್ಯ, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಶಿವಮೊಗ್ಗದ ಕೆ.ಎಂ.ಸತೀಶಗೌಡ, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು, ದಯಾನಂದ ಶಿರಗಾರ, ಪತ್ರಕರ್ತ ಮಲ್ಲೇಶ ಆಗಳಿ, ಮುರಳಿ ಸಾಂಡಾ, ಸಾಬು ಉಪ್ಪಾರ ಇತರರು ವೇದಿಕೆಯಲ್ಲಿದ್ದರು. ಯೋಧ ಮತ್ತು ರೈತ ದೇಶದ ಬೆನ್ನೆಲುಬು ಎಂಬ ವಿಷಯದ ಕುರಿತು ಎಮ್ಮಿಗನೂರಿನ ವಾಮದೇವ ಮಹಾಂತ ಸ್ವಾಮಿಗಳು ಉಪನ್ಯಾಸ ನೀಡಿದರು. ನಜರ ಸಮರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಿವಮೊಗ್ಗದ ಶಾಂತಾ ಆನಂದ ಕಾರ್ಯಕ್ರಮ ನಿರೂಪಿಸಿದರು.