ಸೂಲಿಬೆಲೆ: ಸಮಾಜದಲ್ಲಿರುವ ಸ್ತ್ರೀ, ಪುರುಷ ಎಂಬ ಭೇದಭಾವವನ್ನು ತೊಳದು ಹಾಕುವ ಕೆಲಸವನ್ನು 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಪ್ರಾರಂಭಿಸಿದರು. ಇದನ್ನು ಪಾಲಿಸುವ ಕೆಲಸವಾಗಬೇಕು ಎಂದು ಸಿದ್ಧಗಂಗಾ ಮಠದ ಮಠಾಧೀಶರಾದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಸೂಲಿಬೆಲೆ ಘಟಕದ ಅಧ್ಯಕ್ಷರಾದ ಎಸ್.ಸಿ.ರವಿಕುಮಾರ್ ಮಾತನಾಡಿ, ಸಮುದಾಯದ ಏಳಿಗೆಗೆ ಶ್ರಮಿಸಲಾಗುವುದು ಶೈಕ್ಷಣಿಕ ಕ್ಷೇತ್ರದಲ್ಲಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ ಜಾರಿ ಮಾಡಲಾಗುವುದು ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್, ರಾಜ್ಯ ಘಟಕದ ಆಧ್ಯಕ್ಷ ಪ್ರಕಾಶ್, ವಾಗ್ಮಿ ಸುಚೇಂದ್ರಪ್ರಸಾದ್, ಮಾಜಿ ಅಧ್ಯಕ್ಷ ಬಸವರಾಜ್, ಗೌ.ಕಾರ್ಯದರ್ಶಿ ಕೃಷ್ಣಮೂರ್ತಿ, ಖಜಾಂಚಿ ಶಂಕರ್, ಜಯಕುಮಾರ್, ಅಂಬಿಕಾ, ಇಂದಿರಾ, ಶೋಭಾ, ಉದಯಶಂಕರ್, ಗಿರೀಶ್, ಶಿವರುದ್ರಪ್ಪ, ಜುಂಜಪ್ಪ, ರವಿಕುಮಾರ್, ನೇತ್ರಾನಾಗರಾಜ್, ಸೂ.ಚಿ.ಬಸವರಾಜ್, ಇತರರು ಇದ್ದರು.