ಕನ್ನಡಪ್ರಭ ವಾರ್ತೆ ಶಿರಾ
ಅವರು ಭಾನುವಾರ ನಗರದ ಕುಂಚಿಟಿಗರ ಸಂಘದ ಆವರಣದಲ್ಲಿ ದಿ. ಎನ್. ಎಸ್. ಕೆಂಗರಾಮಯ್ಯನವರ ವೇದಿಕೆಯಲ್ಲಿ ನಡೆದ ಕುಂಚಿಟಿಗರ ಸಂಘದ ನೂತನ ಕುಂಚಶ್ರೀ ಪ್ಯಾಲೇಸ್ ಕಟ್ಟಡ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ರಾಜ್ಯದಲ್ಲಿಯೇ ಲೋಪದೋಷವಿಲ್ಲದ ಅತ್ಯಂತ ಬೃಹತ್ ಸಮುದಾಯ ಯಾವುದಾದರು ಇದ್ದರೆ ಅದು ಶಿರಾ ಕುಂಚಿಟಿಗ ಸಮುದಾಯ, ಎಲ್ಲಾ ಜಾತಿ, ಧರ್ಮಗಳನ್ನು ಒಟ್ಟಿಗೆ ಕೊಂಡೊಯ್ಯುವ ಏಕೈಕ ಸಮುದಾಯವೆಂದರೆ ಅದು ಕುಂಚಿಟಿಗ ಸಮುದಾಯ, ಇಂತಹ ಸಮುದಾಯಕ್ಕೆ ಯಾರೂ ಕೂಡ ದ್ರೋಹ ಬಗೆಯಬಾರದು. ನಮ್ಮ ಸಮಾಜ ನಮ್ಮ ಹೆಮ್ಮೆ. ನಮ್ಮ ಮುಂದಿನ ಪೀಳಿಗೆಯವರು ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ನಾವೆಲ್ಲ ಒಗ್ಗಟ್ಟಾಗಿ ಸಾಗೋಣ ಎಂದರು.
ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ, ಕುಂಚಿಟಿಗರ ಸಂಘದಡಿ ನಡೆಯುತ್ತಿರುವ ಶಾಲೆಯ ಅಭಿವೃದ್ಧಿಗೆ ವಿಧಾನಪರಿಷತ್ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ೫೦ ಲಕ್ಷ ರು. ಹಾಗೂ ನನ್ನ ವೈಯಕ್ತಿಕವಾಗಿ ೫೦ ಲಕ್ಷ ರು. ಅನುದಾನ ನೀಡುವುದಾಗಿ ತಿಳಿಸಿದರು.ಕಾಂಗ್ರೆಸ್ ಮುಖಂಡ ಸಂಜಯ್ ಜಯಚಂದ್ರ ಮಾತನಾಡಿ, ಸಮುದಾಯದ ಜನ, ಮಕ್ಕಳು ಎಲ್ಲಾ ರಂಗದಲ್ಲೂ ಸಾಕಷ್ಟು ಹೆಸರು ಮಾಡುತ್ತಿದ್ದಾರೆ, ಶಿಕ್ಷಣದಿಂದ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ, ಕುಂಚಶ್ರೀ ಪ್ಯಾಲೇಸ್ ಉದ್ಘಾಟನೆ ಜೊತೆ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನಡೆಸುತ್ತಿರುವುದು ಸ್ವಾಗತಾರ್ಹ ಎಂದರು.
ಮಾಜಿ ಶಾಸಕ ಡಾ. ಸಿ ಎಂ ರಾಜೇಶ್ ಗೌಡ ಮಾತನಾಡಿ ಸಮುದಾಯದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಕುಂಚಿಟಿಗ ಸಮುದಾಯಕ್ಕೆ ಶತಮಾನಗಳ ಇತಿಹಾಸ ಇದೆ. ಸಾಂಸ್ಕೃತಿಕ, ವ್ಯಾಪಾರ, ಶಿಕ್ಷಣಕ್ಕೆ ಕುಂಚಿಟಿಗ ಸಮುದಾಯ ತಮ್ಮದೇ ಆದ ಕೊಡುಗೆ ನೀಡಿದೆ. ರಾಜ ಮಹಾರಾಜರ ಆಸ್ಥಾನದಲ್ಲಿ ಕುಂಚಿಟಿಗರು ಸೇವೆ ಸಲ್ಲಿಸಿದ್ದಾರೆ. ನಮ್ಮ ಪೂರ್ವಜರು ನಡೆದು ಬಂದ ದಾರಿಯಲ್ಲಿ ಸಾಗಬೇಕಿದೆ. ಸಮುದಾಯದ ಅಭಿವೃದ್ಧಿಗೆ ಒಟ್ಟಗೋಣ ಎಂದರು.ಈ ವೇಳೆ ತಾಲೂಕು ಕುಂಚಿಟಿಗ ಸಂಘದ ಅಧ್ಯಕ್ಷ ಮುಕುಂದಪ್ಪ, ಸೂಡಾ ಅಧ್ಯಕ್ಷ ಪಿ.ಆರ್. ಮಂಜುನಾಥ್, ಬೆಂಗಳೂರು ಮಹಾನಗರ ಪಾಲಿಗೆ ಆಯುಕ್ತ ರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ರವಿಕುಮಾರ್, ಗೃಹ ಸಚಿವರ ವಿಶೇಷ ಆಪ್ತ ಕಾರ್ಯದರ್ಶಿ ಡಾ. ನಾಗಣ್ಣ, ನಗರಸಭೆ ಸದಸ್ಯರಾದ ಆರ್.ರಾಮು, ಉಮಾ ವಿಜಯರಾಜ್, ಮುಖಂಡರಾದ ಆರ್.ರಾಘವೇಂದ್ರ, ಜೀನಿ ಸಂಸ್ಥಾಪಕ ದಿಲೀಪ್ ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಆರ್. ಶಶಿಧರ್ ಗೌಡ, ಭೂವನಹಳ್ಳಿ ನರೇಶ್ ಗೌಡ, ಕುಂಚಿಟಿಗರ ಸಂಘದ ಶಿಕ್ಷಣ ಸಮಿತಿ ಅಧ್ಯಕ್ಷ ಎಂ.ರಂಗನಾಥ್, ಮದ್ದೇವಳ್ಳಿ ರಾಮಕೃಷ್ಣ, ಹಾಲಗುಂಡೇ ಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಧಾನ್ ನಾಗರಾಜಪ್ಪ, ರಾಧಾಕೃಷ್ಣ, ವಿಜಯರಾಜ್, ಎಸ್.ಮಹಲಿಂಗಪ್ಪ, ಡಿ.ಸಿ.ಅಶೋಕ್, ಬಿ.ಆರ್.ಧಮೇಂದ್ರ ಸೇರಿದಂತೆ ಹಲವರು ಹಾಜರಿದ್ದರು.