ಆಹಾರ ಸಾಮಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಮಕ್ಕಳನ್ನು ಒಳ್ಳೆಯ ಮಾರ್ಗದಲ್ಲಿ ನಡೆಸಬೇಕು, ನಮ್ಮ ದೇಶಕ್ಕಾಗಿ ವಾವೆಲ್ಲರೂ ಒಟ್ಟಾಗಿ ದುಡಿಯೋಣ ಎಂದು ವಿಕಸನ ಸಂಸ್ಥೆ ಸಂಸ್ಥಾಪಕ ವರ್ಗೀಸ್ ಕ್ಲೀಟಸ್ ಹೇಳಿದ್ದಾರೆ.
ವಿಕಸನ ಸಂಸ್ಥೆ ಸಾಮಾಜಿಕ ಹಾಗೂ ಶೈಕ್ಷಣಿಕಾಭಿವೃದ್ಧಿ ಮಾನವ ಸಂಪನ್ಮೂಲ ಕೇಂದ್ರ, ಆಶಾ ಫಾರ್ ಎಜುಕೇಷನ್ ಸಿಯೋಟಲ್ ಸಹಯೋಜನೆಯೊಂದಿಗೆ 78ನೇ ಸ್ವಾತಂತ್ರೋತ್ಸವ ಅಂಗವಾಗಿ ಪಟ್ಟಣದ ಗಾಳೀಹಳ್ಳಿಯಲ್ಲಿರುವ ಕೋರೋನ ವೈರಸ್, ಡೆಂಘೀ ಹಾಗೂ ಸಾಂಕ್ರಾಮಿಕ ರೋಗಗಳು, ಸಂಕಷ್ಟದಲ್ಲಿರುವ ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರು ವಿಧವೆಯರು, ಸ್ವಸಹಾಯ ಸಂಘದ ಬಡ ಮಹಿಳೆಯರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದರ ಉಪಯೋಗ ಸರಿಯಾದ ರೀತಿಯಲ್ಲಿ ಆಗಲಿ ಎಂದು ತಿಳಿಸಿದರು.ವಕೀಲ ತೇಜುಮೂರ್ತಿ ಮಾತನಾಡಿ, ತಾವು ಸುಮಾರು 35 ವರ್ಷಗಳಿಂದ ವಿಕಸನ ಸಂಸ್ಥೆ ಸಾಮಾಜಿಕ ಚಟುವಟಿಕೆಗಳನ್ನು ಗಮನಿಸುತ್ತಿದ್ದು ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಮಾಡುತ್ತಿದೆ. ರೈತರಿಗೆ ಮಾಹಿತಿ ನೀಡುವಲ್ಲಿ ಉತ್ತಮ ವಾಗಿ ಕಾರ್ಯ ನಿರ್ವಹಿಸುತ್ತಿದೆ. ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವನ್ನು ವಿಕಸನ ಸಂಸ್ಥೆಯಿಂದ ಪಡೆದು ಕೊಳ್ಳಬೇಕು ಹಾಗೂ ನಮ್ಮ ದೇಶಕ್ಕಾಗಿ ಹಲವಾರು ಗಣ್ಯವ್ಯಕ್ತಿಗಳ ಹೋರಾಟದ ಫಲವಾಗಿ ಇಂದು ನಮಗೆ ಸ್ವಾತಂತ್ರ ದೊರಕಿದೆ ಎಂದು ತಿಳಿಸಿದರು. ಕಾರ್ಪೋರೇಷನ್ ಬ್ಯಾಕ್‌ನ ಎನ್ ಎಸ್ ಜಯಣ್ಣ ಮಾತನಾಡಿ ಸ್ವಾತಂತ್ರವನ್ನು ಹಬ್ಬದ ರೀತಿ ಆಚರಿಸಬೇಕು. ಪ್ರತಿ ಯೊಬ್ಬರೂ ಜಾಗೃತರಾಗಿ ಸಹಬಾಳ್ವೆ ನಡೆಸಬೇಕು, ಎಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ನಾವು ಭಾರತೀಯರೆಂಬ ಸ್ವಾಭಿಮಾನ ನಮಗಿರಬೇಕು ಎಂದರು. ನಿವೃತ್ತ ಯೋಗ ಶಿಕ್ಷಕ ನಿಂಗಪ್ಪ ಮಾತನಾಡಿ ವರ್ಗೀಸ್ ದಂಪತಿಯಿಂದ ಆರಂಭವಾದ ವಿಕಸನ ಸಂಸ್ಥೆ ಹಲವಾರು ರೀತಿ ಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಾಮಾಜಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುತ್ತಿದೆ ಎಂದು ಹೇಳಿದರು. ಸುಗ್ರಾಮ ತಾಲೂಕು ಸಂಘದ ಅಧ್ಯಕ್ಷೆ ಪುಷ್ಪಾ ಮಾತನಾಡಿ ಎ.ರಂಗಾಪುರ ಗ್ರಾಮದಲ್ಲಿ ಬಿದಿರು ಕಾರ್ಮಿಕರು ವಿಕಸನ ಸಂಸ್ಥೆ ಮೂಲಕ ಪಡೆದ ಸೌಲಭ್ಯ ವಿವರಿಸಿ, ಮಹಿಳೆಯರು ವಿಕಸನ ಸಂಸ್ಥೆಯಿಂದ ದೊರಕುವ ಸೌಲಭ್ಯ ಪಡೆಯಲು ತಿಳಿಸಿ, ಸಂಘಟನೆ ಮೂಲಕ ಮಾತ್ರ ನಾವು ಎಂತಹ ಪರಿಸ್ಥಿತಿಯನ್ನು ಎದುರಿಸಬಹುದು. ವಿಕಸನ ಸಂಸ್ಥೆ ಕಾರ್ಯಕ್ರಮದಿಂದ ಪಂಚಾಯಿತಿ ಚುನಾಯಿತ ಮಹಿಳೆಯರಿಗೆ ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮನದಟ್ಟು ಮಾಡಿಕೊಟ್ಟಿರುತ್ತಾರೆ. ಇದರಿಂದ ಗ್ರಾಪಂನಲ್ಲಿ ಉತ್ತಮ ಸೇವೆ ಸಲ್ಲಿಸಲು ವಿಕಸನ ಸಂಸ್ಥೆ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡಿರುತ್ತಾರೆ ಎಂದು ತಿಳಿಸಿದರು.ವಿವಿಧ ಫಲಾನುಭವಿಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಣೆ ಮಾಡಲಾಯಿತು.
ನಿವತ್ತ ಶಿಕ್ಷಕ ರುದ್ರಯ್ಯ, ಕೆಇಬಿ ನಿವೃತ್ತ ಇಂಜಿನಿಯರ್ ರಾಮಪ್ಪ, ಶ್ರೀನಿವಾಸ್, ಕ್ರಿಸ್ತ ದಯಾಕುಮಾರ್, ಪ್ರಭಾವತಿ, ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.25ಕೆಟಿಆರ್.ಕೆ.1ಃತರೀಕೆರೆಯಲ್ಲಿ ವಿಕಸನ ಸಂಸ್ಥೆ ಸಾಮಾಜಿಕ ಹಾಗೂ ಶೈಕ್ಷಣಿಕಾಭಿವೃದ್ಧಿ ಮಾನವ ಸಂಪನ್ಮೂಲ ಕೇಂದ್ರ, ಆಶಾ ಫಾರ್ ಎಜುಕೇಷನ್ ಸಿಯೋಟಲ್ ಸಹಯೋಜನೆಯೊಂದಿಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಕಸನ ಸಂಸ್ಥೆ ಸಂಸ್ಥಾಪಕ ವರ್ಗೀಸ್ ಕ್ಲೀಟಸ್ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಿದರು. ಕಾರ್ಪೊರೇಷನ್ ಬ್ಯಾಂಕ್ ನ ಎನ್.ಎಸ್. ಜಯಣ್ಣ ಮತ್ತಿತರರು ಇದ್ದರು.