ತುರ್ತು ಸಂದರ್ಭದಲ್ಲಿ ಜೀವರಕ್ಷಕ ತಂತ್ರವಾದ ಸಿಪಿಆರ್ ನ್ನು ಎಲ್ಲರೂ ಕಲಿಯುವುದು ಅಗತ್ಯ. ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್(ಎಇಡಿ) ಹಾಗೂ ಸಿಪಿಆರ್ ಯಾವುದೇ ವಯಸ್ಸಿನ, ಯಾವ ವಿದ್ಯಾರ್ಹತೆಯ ವ್ಯಕ್ತಿಯೂ ಮಾಡಬಹುದಾದ ಒಂದು ಅತ್ಯುತ್ತಮ ವ್ಯವಸ್ಥೆ. ಸಿಪಿಆರ್ ಕೌಶಲ್ಯವನ್ನು ಕಲಿತರೇ ಅಗತ್ಯ ಸಂದರ್ಭದಲ್ಲಿ ಉಪಯೋಗಿಸಿ ಇನ್ನೊಬ್ಬರ ಜೀವ ಉಳಿಸಬಹುದು ಎಂದು ಮಂಗಳೂರಿನ ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಮುಖ್ಯ ಆಡಳಿತ ಅಧಿಕಾರಿ ಡಾ.ರೋಹನ್ ಎಸ್.ಮೋನಿಸ್ ಹೇಳಿದರು.
ಉಡುಪಿ: ತುರ್ತು ಸಂದರ್ಭದಲ್ಲಿ ಜೀವರಕ್ಷಕ ತಂತ್ರವಾದ ಸಿಪಿಆರ್ ನ್ನು ಎಲ್ಲರೂ ಕಲಿಯುವುದು ಅಗತ್ಯ. ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್(ಎಇಡಿ) ಹಾಗೂ ಸಿಪಿಆರ್ ಯಾವುದೇ ವಯಸ್ಸಿನ, ಯಾವ ವಿದ್ಯಾರ್ಹತೆಯ ವ್ಯಕ್ತಿಯೂ ಮಾಡಬಹುದಾದ ಒಂದು ಅತ್ಯುತ್ತಮ ವ್ಯವಸ್ಥೆ. ಸಿಪಿಆರ್ ಕೌಶಲ್ಯವನ್ನು ಕಲಿತರೇ ಅಗತ್ಯ ಸಂದರ್ಭದಲ್ಲಿ ಉಪಯೋಗಿಸಿ ಇನ್ನೊಬ್ಬರ ಜೀವ ಉಳಿಸಬಹುದು ಎಂದು ಮಂಗಳೂರಿನ ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಮುಖ್ಯ ಆಡಳಿತ ಅಧಿಕಾರಿ ಡಾ.ರೋಹನ್ ಎಸ್.ಮೋನಿಸ್ ಹೇಳಿದರು.
ಅವರು ಇಲ್ಲಿನ ಪಡುಬೆಳ್ಳೆಯಲ್ಲಿ ನಡೆಯುತ್ತಿರುವ ಎಂಜಿಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್ ಹಾಗೂ ಕ್ಯಾಥೊಲಿಕ್ ಅಸೋಸಿಯೇಷನ್ ಆಫ್ ಸೌತ್ ಕೆನರಾ(ಕಾಸ್ಕ್) ಸಹಯೋಗದಲ್ಲಿ ನಡೆದ `ಸಿಪಿಆರ್ ಜಾಗೃತಿ ಹಾಗೂ ಪ್ರಾತ್ಯಕ್ಷಿಕೆ'''' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ಶಿಬಿರದ ಎಲ್ಲಾ ಸ್ವಯಂಸೇವಕರು ಸ್ವತಃ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ, ಪೂರ್ಣ ತರಬೇತಿ ಪಡೆದರು. ಕಾಸ್ಕ್ ಅಧ್ಯಕ್ಷ ಡಾ.ಎರಿಕ್ ಲೋಬೋ, ಕಾಸ್ಕ್ ಗವರ್ನಿಂಗ್ ಕೌನ್ಸಿಲ್ ಸದಸ್ಯ ಪೀಟರ್ ಪಿಂಟೋ, ಕಣಚೂರು ಆಸ್ಪತ್ರೆಯ ಎಮರ್ಜೆನ್ಸಿ ಮೆಡಿಸಿನ್ ವಿಭಾಗದ ಡಾ.ರಮೇಶ್ ಕುಮಾರ್ ಹಾಗೂ ಡಾ.ಲೇಖನ್ ಗೌಡ, ಎನ್ಎಸ್‌ಎಸ್ ಘಟಕ 2 ಅಧಿಕಾರಿ ಡಾ.ರೇಖಾ ಎನ್.ಚಂದ್ರ ಉಪಸ್ಥಿತರಿದ್ದರು.
ಎನ್ಎಸ್‌ಎಸ್ ಅಧಿಕಾರಿ ಸುಚಿತ್ ಕೋಟ್ಯಾನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿನಿ ಸುವೀಕ್ಷಾ ಸ್ವಾಗತಿಸಿ, ಧನ್ಯಾ ಪರಿಚಯಿಸಿದರು. ರೀತಿಕಾ ವಂದಿಸಿದರು. ಸೋನಿ ಪ್ರಕಾಶ್ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.