ಮನುಷ್ಯ ದಾನ, ಧರ್ಮ, ಪರೋಪಕಾರ ಮಾಡುವಾಗ ಭಯ, ಭಕ್ತಿಯಿಂದ ಮಾಡಬೇಕು ಎಂದು ಇಂಚಲ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ನುಡಿದರು.
ರಾಣಿಬೆನ್ನೂರು: ಮನುಷ್ಯ ದಾನ, ಧರ್ಮ, ಪರೋಪಕಾರ ಮಾಡುವಾಗ ಭಯ, ಭಕ್ತಿಯಿಂದ ಮಾಡಬೇಕು ಎಂದು ಇಂಚಲ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ನುಡಿದರು.
ತಾಲೂಕಿನ ಖಂಡೇರಾಯನಹಳ್ಳಿಯ ಶ್ರೀ ಸಿದ್ಧಾರೂಢ ಮಠದಲ್ಲಿ ಬುಧವಾರ 32ನೇ ವೇದಾಂತ ಪರಿಷತ್ತು ಅಂಗವಾಗಿ ಏರ್ಪಡಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.ದಾನದಿಂದ ಸಂಪತ್ತು ವೃದ್ಧಿಯಾಗುತ್ತದೆ. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಜೀವನದಲ್ಲಿ ಯಶಸ್ಸು ಸಾಧಿಸಲು ಅನುಕೂಲವಾಗುತ್ತದೆ ಎಂದರು.
ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ಸಿದ್ಧಾರೂಢರ ಕೃಪಾರ್ಶೀವಾದದಿಂದ ಮನುಷ್ಯನ ಇಷ್ಟಾರ್ಥಗಳು ನೆರವೇರುತ್ತವೆ. ಈ ಹಿಂದೆ ಸಚಿವರಾಗುವುದನ್ನು ಇಂಚಲಶ್ರೀಗಳು ಸೂಚ್ಯವಾಗಿ ತಿಳಿಸಿದ್ದರು. ಅದು ಮುಂದೆ ನಿಜವಾಗಿ ನಾನು ಮುಜರಾಯಿ ಖಾತೆ ಸಚಿವನಾಗಿ ಮತ್ತಷ್ಟು ದೇವರ ಕೆಲಸಗಳನ್ನು ಮಾಡಲು ಕಾರಣವಾಯಿತು ಎಂದರು.
ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಂಜನಗೌಡ ಪಾಟೀಲ ಅತಿಥಿಗಳಾಗಿ ಆಗಮಿಸಿದ್ದರು.
ಶ್ರೀಮಠದ ಪೀಠಾಧಿಪತಿ ಗುರು ನಾಗರಾಜಾನಂದ ಸ್ವಾಮೀಜಿ, ಮಲ್ಲಾಪುರ ಗಾಳೇಶ್ವರ ಮಠದ ಚಿದಾನಂದ ಮಹಾಸ್ವಾಮಿಗಳು, ಮಣಕೂರು ಸಿದ್ಧಾರೂಢಸ್ವಾಮಿ ಗುರುದೇವ ಆಶ್ರಮದ ಚನ್ನಬಸಮ್ಮ ತಾಯಿಯವರು, ದಾವಣಗೆರೆ ಜಡೆಸಿದ್ಧೇಶ್ವರಸ್ವಾಮಿ ಮಠದ ಡಾ. ಶಿವಾನಂದ ಸ್ವಾಮಿಗಳು ಹಡಗಿನಹಾಳ ಸುಜ್ಞಾನ ಕುಟೀರದ ಮಲ್ಲೇಶ್ವರ ಶರಣರು, ಇಂಚಲದ ಪೂರ್ಣಾನಂದಭಾರತಿ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು.
ಮಧ್ಯಾಹ್ನ 3ರ ಸುಮಾರು ನೂತನವಾಗಿ ನಿರ್ಮಿಸಲಾದ ಶ್ರೀ ಮಠದ ರಥದ ಮಹಾರಥೋತ್ಸವ ಜರುಗಿತು.
ಮನುಷ್ಯ ದಾನ, ಧರ್ಮ, ಪರೋಪಕಾರ ಮಾಡುವಾಗ ಭಯ, ಭಕ್ತಿಯಿಂದ ಮಾಡಬೇಕು ಎಂದು ಇಂಚಲ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ನುಡಿದರು.
ತಾಲೂಕಿನ ಖಂಡೇರಾಯನಹಳ್ಳಿಯ ಶ್ರೀ ಸಿದ್ಧಾರೂಢ ಮಠದಲ್ಲಿ ಬುಧವಾರ 32ನೇ ವೇದಾಂತ ಪರಿಷತ್ತು ಅಂಗವಾಗಿ ಏರ್ಪಡಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.ದಾನದಿಂದ ಸಂಪತ್ತು ವೃದ್ಧಿಯಾಗುತ್ತದೆ. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಜೀವನದಲ್ಲಿ ಯಶಸ್ಸು ಸಾಧಿಸಲು ಅನುಕೂಲವಾಗುತ್ತದೆ ಎಂದರು.
ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ಸಿದ್ಧಾರೂಢರ ಕೃಪಾರ್ಶೀವಾದದಿಂದ ಮನುಷ್ಯನ ಇಷ್ಟಾರ್ಥಗಳು ನೆರವೇರುತ್ತವೆ. ಈ ಹಿಂದೆ ಸಚಿವರಾಗುವುದನ್ನು ಇಂಚಲಶ್ರೀಗಳು ಸೂಚ್ಯವಾಗಿ ತಿಳಿಸಿದ್ದರು. ಅದು ಮುಂದೆ ನಿಜವಾಗಿ ನಾನು ಮುಜರಾಯಿ ಖಾತೆ ಸಚಿವನಾಗಿ ಮತ್ತಷ್ಟು ದೇವರ ಕೆಲಸಗಳನ್ನು ಮಾಡಲು ಕಾರಣವಾಯಿತು ಎಂದರು.
ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಂಜನಗೌಡ ಪಾಟೀಲ ಅತಿಥಿಗಳಾಗಿ ಆಗಮಿಸಿದ್ದರು.
ಶ್ರೀಮಠದ ಪೀಠಾಧಿಪತಿ ಗುರು ನಾಗರಾಜಾನಂದ ಸ್ವಾಮೀಜಿ, ಮಲ್ಲಾಪುರ ಗಾಳೇಶ್ವರ ಮಠದ ಚಿದಾನಂದ ಮಹಾಸ್ವಾಮಿಗಳು, ಮಣಕೂರು ಸಿದ್ಧಾರೂಢಸ್ವಾಮಿ ಗುರುದೇವ ಆಶ್ರಮದ ಚನ್ನಬಸಮ್ಮ ತಾಯಿಯವರು, ದಾವಣಗೆರೆ ಜಡೆಸಿದ್ಧೇಶ್ವರಸ್ವಾಮಿ ಮಠದ ಡಾ. ಶಿವಾನಂದ ಸ್ವಾಮಿಗಳು ಹಡಗಿನಹಾಳ ಸುಜ್ಞಾನ ಕುಟೀರದ ಮಲ್ಲೇಶ್ವರ ಶರಣರು, ಇಂಚಲದ ಪೂರ್ಣಾನಂದಭಾರತಿ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.