ತರೀಕೆರೆಯಲ್ಲಿ ಶ್ರೀ ಭಗೀರಥ ಜಯಂತಿ-2026 ಕಾರ್ಯಕ್ರಮ
ಸಮಾಜ ಬಂಧುಗಳು ಒಗ್ಗಟ್ಟಾಗಿ ಸಮುದಾಯದ ಒಳಿತು, ಶ್ರೇಯೋಭಿವೃದ್ಧಿಗೆ ಶ್ರಮಿಸೋಣ. ಭಗೀರಥರ
ಆದರ್ಶ ಪಾಲಿಸಬೇಕಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಆರ್.ಅನಂತಪ್ಪ ಹೇಳಿದ್ದಾರೆ.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಅಡಳಿತ ಮತ್ತು ತರೀಕೆರೆ ತಾಲೂಕು ಶ್ರೀ ಭಗೀರಥ ಉಪ್ಪಾರ ಸಂಘದ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಭಗೀರಥ ಜಯಂತಿಯಲ್ಲಿ ಮಾತನಾಡಿದರು. ಉಪ್ಪಾರ ಸಮುದಾಯ ರಾಜ್ಯದಲ್ಲಿ ಸುಮಾರು 40 ಲಕ್ಷ ಜನಸಂಖ್ಯೆ ಇದ್ದರೂ ಸಮುದಾಯದಿಂದ ಕೇವಲ ಒಬ್ಬರು ಶಾಸಕರಾಗಿರುವುದು ವಿಪರ್ಯಾಸ. ಉಪ್ಪಾರ ಸಮುದಾಯ ರಾಜಕೀಯವಾಗಿ ಪ್ರಬಲವಾಗಬೇಕಿದೆ ಎಂದು ಹೇಳಿದರು.ಪುರಸಭೆ ಮುಖ್ಯಾಧಿಕಾರಿ ಸಿ.ಎಸ್.ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಭಗೀರಥ ಪ್ರಯತ್ನ ಎಂದರೆ ಕಠಿಣ ಶ್ರಮದ ಪ್ರಯತ್ನವಾಗಿದೆ. ಶ್ರೀ ಭಗೀರಥರ ಆದರ್ಶ ಆಧ್ಯಾತ್ಮಿಕ ಚಿಂತನೆ ಮತ್ತು ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.ಶಿಕ್ಷಕ ಚೇತನ್ ಗೌಡ ಉಪನ್ಯಾಸ ನೀಡಿ ಶ್ರೀ ಭಗೀರಥರು ಇಡೀ ಉತ್ತರ ಭಾರತದ ಶಕ್ತಿ. ದೇವ ಗಂಗೆಯನ್ನು ಭೂಮಿಗೆ ತಂದು ಕೊಟ್ಟಿರುವ ಶ್ರಮ ಅವರದ್ದು ಸಮಾಜದ ಮಹತ್ವವನ್ನು ಸಮುದಾಯದ ಹಿರಿ ಕಿರಿಯರಿಗೆ ಮಹಿಳೆಯರಿಗೆ ಯುವಕರಿಗೆ ತಿಳಿಸಬೇಕಾದ ಅಗತ್ಯವಿದೆ. ನಮ್ಮ ಕುಲಕಸುಬು ಉಳಿಸಿಕೊಳ್ಳಲು ಮತ್ತು ಈ ನೆಲದ ರಕ್ಷಣೆ ಮಾಡಲು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದವರಲ್ಲಿ ಉಪ್ಪಾರ ಸಮೂದಾಯದವರು ಮೊದಲಿಗರು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ತರೀಕೆರೆ ತಾಲೂಕು ಶ್ರೀ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಟಿ.ಎಸ್.ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಆರ್.ವಿರೂಪಾಕ್ಷ, ಮುಖಂಡ ಟಿ.ಹನುಮಂತಪ್ಪ, ಭಗೀರಥ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಹರೀಶ್, ಸಂಘದ ಉಪಾಧ್ಯಕ್ಷ ರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರಣೇಶ್, ಆರ್. ಶಿವಮೂರ್ತಿ, ನವೀನ್, ಸೀನಪ್ಪ, ಮಂಜುನಾಥ್, ಜಯಣ್ಣ ಮತ್ತಿತರರು ಭಾಗವಹಿಸಿದ್ದರು.-
ತರೀಕೆರೆಯಲ್ಲಿ ತಾಲೂಕು ಆಡಳಿತ ಮತ್ತು ತರೀಕೆರೆ ತಾಲೂಕು ಶ್ರೀ ಭಗೀರಥ ಉಪ್ಪಾರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಶ್ರೀ ಭಗೀರಥ ಜಯಂತಿಯಲ್ಲಿ ಪುರಸಭೆ ಸದಸ್ಯ ತರೀಕೆರೆ ತಾಲೂಕು ಶ್ರೀ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಟಿ.ಎಸ್.ಬಸವರಾಜು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಆರ್.ಅನಂತಪ್ಪ, ಪುರಸಭೆ ಮುಖ್ಯಾಧಿಕಾರಿ ಸಿ.ಎಸ್.ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.