ನೀಡ್‌ಬೇಸ್ ಇಂಡಿಯಾ ಸಂಸ್ಥೆಯು ಅನಾಥ ಮಕ್ಕಳಿಗೆ ಆಶ್ರಯ ನೀಡಿ ಅವರಿಗೆ ವಸತಿ ಸಹಿತ ತರಬೇತಿ ನೀಡಿ ಬದುಕು ಕಟ್ಟಿಕೊಳ್ಳುವ, ಸ್ವಾವಲಂಬಿಗಳಾಗಿ ಬದುಕುವ ಮಾರ್ಗಕ್ಕೆ ಹಚ್ಚುತ್ತಿದೆ.
ಹನುಮಸಾಗರ: ಮಹಿಳೆಯರು ಸ್ವಂತ ಉದ್ಯೋಗದಿಂದ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ನೀಡ್ ಬೇಸ್ ಇಂಡಿಯಾ ಸಂಸ್ಥೆ ಸಹಕಾರಿಯಾಗಿರುವುದು ಶ್ಲಾಘನೀಯ ಎಂದು ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಹೇಳಿದರು.
ಇಲ್ಲಿಯ ಅಂಬಾಭವಾನಿ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿದ್ದ ನೀಡ್ ಬೆಸ್ ಇಂಡಿಯಾ ಸಂಸ್ಥೆ, ಗ್ರಾಪಂ ಹನುಮಸಾಗರ ಹಾಗೂ ಬ್ರಾಡ್‌ರೀಜ್ ಕಂಪನಿಯಿಂದ ಉಚಿತವಾಗಿ ನಡೆಸಲಾಗಿದ್ದ ಟೇಲರಿಂಗ್ ತರಬೇತಿ ತರಗತಿಗಳ ಪದವಿ ಪ್ರದಾನ, ಪ್ರಮಾಣಪತ್ರ ವಿತರಣೆ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಸಂಸ್ಥೆಯ ಮಲ್ಲಿಕಾರ್ಜುನ ಬಡಿಗೇರ ಮಾತನಾಡಿ, ನೀಡ್‌ಬೇಸ್ ಇಂಡಿಯಾ ಸಂಸ್ಥೆಯು ಅನಾಥ ಮಕ್ಕಳಿಗೆ ಆಶ್ರಯ ನೀಡಿ ಅವರಿಗೆ ವಸತಿ ಸಹಿತ ತರಬೇತಿ ನೀಡಿ ಬದುಕು ಕಟ್ಟಿಕೊಳ್ಳುವ, ಸ್ವಾವಲಂಬಿಗಳಾಗಿ ಬದುಕುವ ಮಾರ್ಗಕ್ಕೆ ಹಚ್ಚುತ್ತಿದೆ. ಎಂದರು.ನಿಸರ್ಗ ಸಂಸ್ಥೆಯ ಅಧ್ಯಕ್ಷ ಮಲ್ಲಯ್ಯ ಕೋಮಾರಿ, ಜಂಪ್‌ರೋಪ್ ಸಂಸ್ಥೆಯ ಅಬ್ದುಲ್‌ರಜಾಕ್ ಟೇಲರ್, ನೀಡ್‌ಬೇಸ್ ಸಂಸ್ಥೆಯ ನಿರ್ದೇಶಕ ರಹೀಂ ಶೇಖ್, ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ಭಗೀರಥಸಾ ಪಾಟೀಲ ಮತ್ತಿತರರು ಮಾತನಾಡಿದರು.ಇದೇ ಸಂದರ್ಭದಲ್ಲಿ ಟೇಲರಿಂಗ್ ತರಬೇತಿ ಪಡೆದ ತರಬೇತುದಾರರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಮಕ್ಕಳಿಂದ ಹಾಗೂ ಕಲಾವಿದರಿಂದ ವಿವಿಧ ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.ಭಗೀರಥಸಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಿಶ್ವನಾಥ ಯಾಳಗಿ, ನಾಗರಾಜ ಕಂದಗಲ್, ಗಾಯತ್ರಿ ಮಿಸ್ಕಿನ್, ಅನ್ನಪೂರ್ಣಾ ಮಡಿವಾಳರ, ರೇಣುಕಾ ಪುರದ, ಸರ್ದಾರ್ ಬಷೀರ್, ಹನುಮಂತಪ್ಪ ಬಡಿಗೇರ, ಎಸ್.ಕೆ.ಪಾಟೀಲ, ಸುನಿಲ ಬಸೂದೆ ಮಹಾದೇವ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.