ಹುಬ್ಬಳ್ಳಿ:
ಭಾರತೀಯ ಸಂಪ್ರದಾಯದಲ್ಲಿ ಸಂಕ್ರಾಂತಿಗೆ ವಿಶೇಷ ಸ್ಥಾನಮಾನವಿದೆ. ಅದನ್ನು ಉಳಿಸಿ-ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಇಲ್ಲಿನ ದಿ ಸಿಲ್ವರ್ ಓಕ್ ಫಾರ್ಮ್‌ನಲ್ಲಿ ಹು-ಧಾ, ವಿಜಯಪುರ ಗೆಳೆಯರ ಬಳಗದಿಂದ ಹಮ್ಮಿಕೊಳ್ಳಲಾಗಿದ್ದ ಸಂಕ್ರಾಂತಿ ಸಂಭ್ರಮ 20ನೇ ವರ್ಷದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಎಲ್ಲೆಡೆ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ವಿಜಯಪುರ ಗೆಳೆಯರ ಬಳಗವು ಸಾಂಪ್ರದಾಯಿಕ ಶೈಲಿಯಲ್ಲಿ ಸಂಕ್ರಾಂತಿ ಹಬ್ಬ ಆಚರಿಸುತ್ತಿರುವುದು ಖುಷಿಯ ಸಂಗತಿ ಎಂದರು.ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, ವಿಜಯಪುರದ ಜನರು ಯಾವುದೇ ಜಿಲ್ಲೆ ಅಥವಾ ರಾಜ್ಯಕ್ಕೆ ಹೋದರು ಅಲ್ಲಿನ ಸ್ಥಳೀಯರ ಜತೆ ಬೆರೆಯುವ ಗುಣ ಹೊಂದಿರುವುದು ಅವರಲ್ಲಿನ ವಿಶೇಷತೆಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿಜಯಪುರ ಗೆಳೆಯರ ಬಳಗದ ಅಧ್ಯಕ್ಷ ಸಿ.ಜಿ. ಝಳಕಿ ಹಾಗೂ ಕಾರ್ಯದರ್ಶಿ ಡಾ. ಮೋಹನ ನುಚ್ಚಿ ಮಾತನಾಡಿದರು.ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬಳಗದ ಸದಸ್ಯರು ಸಾಂಪ್ರದಾಯಕ ಉಡುಪು ಧರಿಸಿ ಭೂಮಿಪೂಜೆ ಹಾಗೂ ಗೋ ಪೂಜೆ ನೆರವೇರಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಎಂ.ಎಂ. ಜೋಶಿ, ವಿಪ ಸದಸ್ಯ ಪ್ರದೀಶ ಶೆಟ್ಟರ, ಮೇಜರ್ ಸಿದ್ದಲಿಂಗ ಹಿರೇಮಠ, ಅನುರಾಧ ವಸ್ತ್ರದ, ನಿಂಗಣ್ಣ ಬಿರಾದಾರ, ಬಾಳಾಸಾಹೇಬ ಪಾಟೀಲ, ರಮೇಶ ಯಾದವಾಡ, ಶಿವರಾಯ ಹಳಗುಣಕಿ, ಚಂದ್ರಶೇಖರ ಢವಳಗಿ, ಪ್ರಭುಲಿಂಗ ನಾಟಿಕಾರ, ಮಲ್ಲಿಕಾರ್ಜುನ ಹಿರೊಳ್ಳಿ, ದೇಶಭೂಷನ್ ಜಗಶೆಟ್ಟಿ, ಶಾಂತೇಶ ದೇಸಾಯಿ, ಸುರೇಶ ಪಿ, ಕೇದಾರ ಎಸ್, ಡಾ. ಸೋಮಶೇಖರ ಹುದ್ದಾರ, ನಿರ್ಮಲಾ ಜಳಕಿ, ಡಾ. ರಾಜೇಶ್ವರಿ ಪತ್ತಾರ ಸೇರಿದಂತೆ ಹಲವರಿದ್ದರು.