ನರೇಗಾ ಕಾರ್ಮಿಕರಿಂದ ಹಕ್ಕೊತ್ತಾಯಗಳ ಈಡೇರಿಕೆಗೆ ಪತ್ರ ಚಳವಳಿ

KannadaprabhaNewsNetwork |  
Published : Apr 11, 2025, 12:36 AM IST

ಸಾರಾಂಶ

ತಾಲೂಕಿನ ವಡ್ಡು ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಅಡಿಯಲ್ಲಿ ತಮ್ಮ ಹಕ್ಕೊತ್ತಾಯಗಳ ಈಡೇರಿಕೆಗೆ ಒತ್ತಾಯಿಸಿ ಬುಧವಾರ ಪತ್ರ ಚಳವಳಿ ನಡೆಸಿ, ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ಪತ್ರ ರವಾನಿಸಿದರು.

ಕನ್ನಡಪ್ರಭ ವಾರ್ತೆ ಸಂಡೂರು

ತಾಲೂಕಿನ ವಡ್ಡು ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಅಡಿಯಲ್ಲಿ ತಮ್ಮ ಹಕ್ಕೊತ್ತಾಯಗಳ ಈಡೇರಿಕೆಗೆ ಒತ್ತಾಯಿಸಿ ಬುಧವಾರ ಪತ್ರ ಚಳವಳಿ ನಡೆಸಿ, ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ಪತ್ರ ರವಾನಿಸಿದರು.

ಬೇಡಿಕೆಗಳು:

ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರುವ ಬಳ್ಳಾರಿ ಜಿಲ್ಲೆಯಲ್ಲಿಯೂ ಬಿಸಿಲಿನ ತಾಪ ಹೆಚ್ಚಿದೆ. ಈ ಭಾಗದಲ್ಲಿ ಉದ್ಯೋಗ ಖಾತ್ರಿಯಲ್ಲಿ ಅಳತೆ ಪ್ರಮಾಣ ಕಡಿಮೆ ಮಾಡಬೇಕು. ಬಳ್ಳಾರಿ ಜಿಲ್ಲೆ ಕೂಲಿ ಆಶ್ರಿತ ಬಡ ಜಿಲ್ಲೆಯಾಗಿದ್ದು, ಉದ್ಯೋಗ ಖಾತ್ರಿ ಕಾರ್ಮಿಕರಿಗೆ ೧೦೦ ಮಾನವ ದಿನಗಳ ಬದಲು ೧೫೦ ಮಾನವ ದಿನಗಳಿಗೆ ಹೆಚ್ಚಿಸಬೇಕು. ಗುದ್ದಲಿ, ಸಲಿಕೆ ವೆಚ್ಚ ₹೫೦ ನೀಡಬೇಕು. ಕೆಲಸದ ಸ್ಥಳದಲ್ಲಿ ಕಾರ್ಮಿಕರ ಮೃತರಾದರೆ ಈಗಿರುವ ₹೨ ಲಕ್ಷ ಪರಿಹಾರವನ್ನು ೫ ಲಕ್ಷಕ್ಕೆ ಹೆಚ್ಚಿಸಬೇಕು. ಬಿಸಿಲಿನ ತಾಪ ಹೆಚ್ಚಿರುವ ಕಾರಣ, ಎನ್‌ಎಂಎಂಎಸ್ ಒಂದು ಬಾರಿ ಹಾಕಲು ಅವಕಾಶ ಮಾಡಿಕೊಡಬೇಕು.

ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಂಚಾಲಕಿ ಅಕ್ಕಮಹಾದೇವಿ, ಅರುಣಾ ಕಂಪ್ಲಿ, ತಾಲೂಕಿನ ಸಂಘಟನೆಯ ಕಾರ್ಯಕರ್ತರು ಹಾಗೂ ಕಾರ್ಮಿಕರಾದ ಹಂಪಕ್ಕ, ರೇಖಾ ವಡ್ಡಟ್ಟಿ, ಮಹೇಶಮ್ಮ, ರುದ್ರಮ್ಮ, ಕಾಮಾಕ್ಷಿ, ಲಕ್ಷ್ಮೀ, ರತ್ನಮ್ಮ, ಚೆನ್ನಮ್ಮ, ಅನಿತಮ್ಮ, ರೇಖಾ, ಶಾರದಮ್ಮ, ಗೀತಾ, ನಾಗಮ್ಮ, ತಿಮ್ಮಕ್ಕ, ಬಸಮ್ಮ, ರೇಷ್ಮಾ, ಉಮೇಶ, ಲಕ್ಷ್ಮೀ, ಎರಿಸ್ವಾಮಿ, ಬಾಣಪ್ಪ, ಸ್ವಾಮಿ, ಕಂಬಾರ ಸ್ವಾಮಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾನೂನಿನ ಜ್ಞಾನ ಪಡೆಯುವುದು ಅರಣ್ಯವಾಸಿಯ ಮೂಲಭೂತ ಕರ್ತವ್ಯ: ರಂಜಿತಾ
ನೋಂದಾಯಿಸಿದ ಎಲ್ಲ ರೈತರ ಮೆಕ್ಕೆಜೋಳ ಖರೀದಿ: ಸೋಮಣ್ಣ ಉಪನಾಳ