ನೂತನ ಕೋರ್ಟ್‌ ಕಟ್ಟಡಕ್ಕೆ ಸರ್ಕಾರಕ್ಕೆ ಪತ್ರ

KannadaprabhaNewsNetwork | Published : Aug 12, 2024 1:05 AM

ಸಾರಾಂಶ

ಕಲಬುರಗಿ ಜಿಲ್ಲೆಯ ಅಫಜಲ್ಪುರ, ಜೇವರ್ಗಿ, ಆಳಂದ ತಾಲೂಕಿನ ನ್ಯಾಯಾಲಯಗಳಿಗೆ ಭೇಟಿ ನೀಡಿ ನ್ಯಾಯಾಲಯ ಕಟ್ಟಡಗಳ ಸ್ಥಿತಿಗತಿಯನ್ನು ಪರಿಶೀಲನೆ ಮಾಡಿದ್ದೇನೆ. ಆದರೆ, ಕಟ್ಟಡಗಳು ಬಹಳಷ್ಟು ದುಸ್ಥಿತಿಯಲ್ಲಿವೆ. ಚಿಂಚೋಳಿ ನ್ಯಾಯಾಲಯ ಕಟ್ಟಡದಲ್ಲಿ ಅನೇಕ ಕಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಹೊಸದಾಗಿ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕಾಗಿ ಸರಕಾರಕ್ಕೆ ಪತ್ರ ಬರೆಯಲಾಗುವುದು. ನ್ಯಾಯಾಲಯ ನಿರ್ಮಾಣ ಕುರಿತು ವರದಿಯನ್ನು ಪಡೆದುಕೊಂಡು ಅತೀ ಶೀಘ್ರವಾಗಿ ಕಟ್ಟಡವನ್ನು ನಿರ್ಮಿಸಲಾಗುವುದು ಎಂದು ಕಲಬುರಗಿ ಆಡಳಿತಾತ್ಮಕ ನ್ಯಾಯಾಧೀಶ ಕೆ. ನಟರಾಜನ್ ಭರವಸೆ ನೀಡಿದರು.

ಪಟ್ಟಣದ ನ್ಯಾಯಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ವಕೀಲರ ಸಂಘದಿಂದ ನೀಡಿದ ಮನವಿ ಸ್ವೀಕರಿಸಿ ಮಾತನಾಡಿದ ನ್ಯಾಯಾಧೀಶರು, ಕಲಬುರಗಿ ಜಿಲ್ಲೆಯ ಅಫಜಲ್ಪುರ, ಜೇವರ್ಗಿ, ಆಳಂದ ತಾಲೂಕಿನ ನ್ಯಾಯಾಲಯಗಳಿಗೆ ಭೇಟಿ ನೀಡಿ ನ್ಯಾಯಾಲಯ ಕಟ್ಟಡಗಳ ಸ್ಥಿತಿಗತಿಯನ್ನು ಪರಿಶೀಲನೆ ಮಾಡಿದ್ದೇನೆ. ಆದರೆ, ಕಟ್ಟಡಗಳು ಬಹಳಷ್ಟು ದುಸ್ಥಿತಿಯಲ್ಲಿವೆ. ಚಿಂಚೋಳಿ ನ್ಯಾಯಾಲಯ ಕಟ್ಟಡದಲ್ಲಿ ಅನೇಕ ಕಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಹೊಸ ಕಟ್ಟಡಕ್ಕಾಗಿ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಕೆಲವು ತಾಲೂಕಿನಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣದ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ನ್ಯಾಯಾಲಯ ಕಟ್ಟಡಗಳ ಅವಶ್ಯಕತೆ ಇದೆ. ಚಿಂಚೋಳಿ ನ್ಯಾಯಾಲಯವು ಕಲಬುರಗಿ ಜಿಲ್ಲೆಯಿಂದ ಅತೀ ದೂರವಾಗಿದ್ದರಿಂದ ಜಿಲ್ಲಾ ನ್ಯಾಯಾಧೀಶರು ಚಿಂಚೋಳಿಗೆ ಹೋಗಿ ಬರುವುದು ಕಷ್ಟದಾಯಕವಾಗಿದೆ. ವಕೀಲರ ಸಂಘದ ಬೇಡಿಕೆಗಳನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.

ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶೆ ನಾಗಶ್ರೀ, ಹಿರಿಯಶ್ರೇಣಿ ನ್ಯಾಯಾಧೀಶೆ ಜ್ಯೋತಿ ಕಾಳೆ, ಪ್ರಧಾನ ಸಿವಿಲ ನ್ಯಾಯಾಧೀಶ ದತ್ತುಕುಮಾರ ಜವಳಕರ, ತಹಸೀಲ್ದಾರ ಸುಬ್ಬಣ್ಣ ಜಮಖಂಡಿ, ಅಧಿಕಾರಿಗಳಾದ ಡಿ.ಎಲ್. ಗಾಜರೆ, ಎಇಇ ಬಸವರಾಜ ಬೈನೂರ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಶಾಂತಕುಮಾರ, ಪಿಎಸ್‌ಐ ಗಂಗಮ್ಮ, ಕಂದಾಯ ನಿರಿಕ್ಷಕ ರವಿ ಪಾಟೀಲ, ಕೇಶವ ಕುಲಕರ್ಣಿ, ವಕೀಲರಾದ ಚಂದ್ರಶೆಟ್ಟಿಮ ಜಾಧವ್, ಶ್ರೀನಿವಾಸ ಬಂಡಿ, ವಿಜಯಕುಮಾರ ರಾಠೋಡ, ರಾಜೇಂದ್ರ ವರ್ಮಾ, ಶಾಮರಾವ ದೇಲಗಮಡಿ, ಗುಂಡಪ್ಪ ಗೋಖಲೆ, ಸುದರ್ಶನ ಬೀರಾದಾರ ಇನ್ನಿತರರಿದ್ದರು.

Share this article