ಹನುಮಪ್ಪನ ದೇವಸ್ಥಾನದಲ್ಲಿ ಗ್ರಂಥಾಲಯ ಸ್ಥಾಪನೆ

KannadaprabhaNewsNetwork |  
Published : Apr 16, 2025, 12:45 AM IST
15ಕೆಪಿಎಲ್23 ಕೊಪ್ಪಳ ನಗರದ 12 ನೇ ವಾರ್ಡಿನಲ್ಲಿರುವ ಬಸವೇಶ್ವರ ಓಣಿಯಲ್ಲಿರುವ ಹನುಮಪ್ಪ ದೇವಸ್ಥಾನವನ್ನು ಗುಡಿ ಗ್ರಂಥಾಲಯ ಪ್ರಾರಂಭಿಸಲಾಯಿತು. | Kannada Prabha

ಸಾರಾಂಶ

ಸದ್ಯ ಗ್ರಂಥಾಲಯದಲ್ಲಿ ದಿನಪತ್ರಿಕೆ ಇಟ್ಟಿದ್ದು ಮುಂದಿನ ದಿನಗಳಲ್ಲಿ ಪುಸ್ತಕ, ನಿಯತಕಾಲಿಕೆ ದೊರಯಲಿವೆ. ಕನ್ನಡಪ್ರಭ ಸೇರಿದಂತೆ ಎಲ್ಲ ಪತ್ರಿಕೆಯನ್ನು ದೇವಸ್ಥಾನದ ಆವರಣದಲ್ಲಿಯೇ ಓದಲು ಅವಕಾಶ ಕಲ್ಪಿಸಲಾಗಿದೆ.

ಕೊಪ್ಪಳ:

ನಗರದ 12ನೇ ವಾರ್ಡಿನಲ್ಲಿರುವ ಬಸವೇಶ್ವರ ಓಣಿಯ ಹನುಮಪ್ಪನ ದೇವಸ್ಥಾನದಲ್ಲಿ ಗ್ರಂಥಾಲಯ ಪ್ರಾರಂಭಿಸಿದ್ದು ಓದುವ ಹವ್ಯಾಸ ಬೆಳೆಸಲು ನಾಂದಿ ಹಾಡಲಾಗಿದೆ.

ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಅಂಬೇಡ್ಕರ್‌ ಹಾಗೂ ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನರಾಮ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗ್ರಂಥಾಲಯಕ್ಕೆ ಚಾಲನೆ ನೀಡಲಾಗಿದೆ.

ಮಾರುತಿ ಕಟ್ಟಿಮನಿ ಮಾತನಾಡಿ, ಸದ್ಯ ಗ್ರಂಥಾಲಯದಲ್ಲಿ ದಿನಪತ್ರಿಕೆ ಇಟ್ಟಿದ್ದು ಮುಂದಿನ ದಿನಗಳಲ್ಲಿ ಪುಸ್ತಕ, ನಿಯತಕಾಲಿಕೆ ದೊರಯಲಿವೆ. ಕನ್ನಡಪ್ರಭ ಸೇರಿದಂತೆ ಎಲ್ಲ ಪತ್ರಿಕೆಯನ್ನು ದೇವಸ್ಥಾನದ ಆವರಣದಲ್ಲಿಯೇ ಓದಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಅಂಬೇಡ್ಕರ್‌ ಪುಸ್ತಕ ಪ್ರಿಯರಾಗಿದ್ದು ಓದುವ ಆಸಕ್ತಿ ಬೆಳೆಸುವ ಈ ಕಾರ್ಯಕ್ಕೆ ಅವರ ಜಯಂತಿ ದಿನವೇ ಚಾಲನೆ ನೀಡಲಾಗಿದೆ. ಈ ಮೂಲಕ ಅಕ್ಷರದ ದೀಪ ಹಚ್ಚುವ ಕೆಲಸಕ್ಕೆ ಚಾಲನೆ ಸಿಕ್ಕಂತಾಗಿರುವುದು ಖುಷಿ ತಂದಿದೆ ಎಂದು ಹೇಳಿದರು.

ಬಿಇಒ ಟಿ.ಎಸ್. ಶಂಕರಯ್ಯ ಮಾತನಾಡಿ, ಯುವಕರು ದೇವಸ್ಥಾನ ಶುಚಿಯಾಗಿ ಇಡುವ ಜತೆಗೆ ಬರುವ ಭಕ್ತರಿಗೆ ಓದಿನತ್ತ ಆಸಕ್ತ ಬೆಳೆಸಲು ಗ್ರಂಥಾಲಯ ಸ್ಥಾಪಿಸಿರುವುದು ಖುಷಿಯ ಸಂಗತಿ. ಯಾವ ಸಮಾಜ ಒಂದು ಕಾಲದಲ್ಲಿ ಶಿಕ್ಷಣದಿಂದ ವಂಚಿತವಾಗಿತ್ತೋ ಆ ಸಮಾಜದ ಯುವ ಬಳಗ ಇಂದು ಓದಿಸುವ ಮಹತ್ವದ ಕಾರ್ಯಕ್ಕೆ ಮುಂದಾಗಿದೆ ಎಂದರು.

ಡಾ. ಸಿದ್ಧಲಿಂಗಪ್ಪ ಕೊಟ್ನೇಕಲ್‌, ಮಹಾಲಕ್ಷ್ಮೀ ಕಂದಾರಿ, ನಗರಸಭೆ ಮಾಜಿ ಸದಸ್ಯ ರಮೇಶ ಗಿಣಗೇರಿ, ಈಶಪ್ಪ ದೊಡ್ಡಮನಿ. ಶ್ರವಣಕುಮಾರ ಶರ್ಮಾ, ಪರಶುರಾಮ ಕಿಡದಾಳ, ಗವಿಸಿದ್ಧಪ್ಪ ಗಿಣಗೇರಿ, ಶಿವಪುತ್ರಪ್ಪ ಬಂಗಾರಿ, ದೇವಪ್ಪ ಗಿಣಗೇರಿ, ವಿನಾಯಕ ಕಿಡದಾಳ, ಗವಿರಾಜ ದೊಡ್ಡಮನಿ, ಮಂಜುನಾಥ ಹಳ್ಳಿಕೇರಿ, ವೈಭವ ಪೂಜಾರ, ಮಾರುತಿ ಕಿರುಬಂಡಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''