ಶಿಗ್ಗಾಂವಿ: ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಆಗುವಲ್ಲಿ ಪುಸ್ತಕಗಳ ಪಾತ್ರ ಮಹತ್ವದ್ದಾಗಿದೆ ಎಂದು ನಗರದ ಶ್ರೀಮತಿ ಜಿ.ಬಿ. ಅಂಕಲಕೋಟಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಎ.ಸಿ. ವಾಲಿ ತಿಳಿಸಿದರು.ಕಾಲೇಜಿನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತೀಯ ಗ್ರಂಥಾಲಯ ವಿಜ್ಞಾನ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಗ್ರಂಥಾಲಯಗಳು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಡಿಪಾಯವಾಗಿದ್ದು, ಅಪಾರ ಮಾಹಿತಿ ಸಂಪನ್ಮೂಲಗಳೊಂದಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಕಲಿಕೆ, ಸಂಶೋಧನೆ ಮತ್ತು ಸಾಮಾಜಿಕ ಅಭಿವೃದ್ಧಿಯ ಕೇಂದ್ರಗಳಾಗಿವೆ. ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ನೀಡುವ ನಿರಂತರ ಕೊಡುಗೆಗಳಿಂದಾಗಿ ಗ್ರಂಥಾಲಯಗಳು ಸದಾ ಬೆಂಬಲ ಮತ್ತು ಮನ್ನಣೆಗೆ ಅರ್ಹವಾಗಿವೆ ಎಂದರು. ಇದೇ ಸಂದರ್ಭದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕೇಂದ್ರದಿಂದ ಹೊರತಂದ ಗ್ರಂಥಾಲಯ ಕೈಪಿಡಿ ೨೦೨೬ ಅನ್ನು ಬಿಡುಗಡೆಗೊಳಿಸಲಾಯಿತು. ಪ್ರೊ. ಡಿ.ಎಸ್. ಭಟ್, ಪ್ರೊ. ಡಿ.ಎಸ್. ಸೊಗಲದ್, ಡಾ. ಶೈಲಜಾ ಹುದ್ದಾರ್, ಡಾ. ಪ್ರಬಲ ರೊಡ್ಡಣ್ಣವರ್, ಡಾ. ಲತಾ ಕೊಪರ್ಡೆ, ಪ್ರೊ. ವಿನಯ್ ಕುಲಕರ್ಣಿ, ಪ್ರೊ. ಶುಭಾ ಹಿರೇಮಠ, ಪ್ರೊ. ಇಮ್ತಿಯಾಜ್ ಖಾನ್, ಡಾ. ಸುರೇಶ ವಾಲ್ಮೀಕಿ, ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು. ಡಾ. ಆನಂದ ಇಂದೂರ ನಿರೂಪಿಸಿದರು. ಗ್ರಂಥಪಾಲಕರಾದ ಡಾ. ಮಂಜುನಾಥ್ ಅಂಗಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜನತಾ ಶಿಕ್ಷಣ ಸಂಘದ ಸದಸ್ಯತ್ವಕ್ಕೆ ಅರ್ಜಿ