ನೈತಿಕ ಮೌಲ್ಯಗಳಿಂದ ಜೀವನ ಸುಂದರ

KannadaprabhaNewsNetwork |  
Published : Oct 02, 2024, 01:16 AM IST
1 ರೋಣ 1.ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ಘಟಕ ವತಿಯಿಂದ ನೈತಿಕತೆಯೇ ಸ್ವತಂತ್ರ್ಯ  ಅಭಿಯಾನ ಕಾರ್ಯಕ್ರಮ ಜರುಗಿತು. | Kannada Prabha

ಸಾರಾಂಶ

ಪ್ರತಿಯೊಬ್ಬರೂ ಶಾಂತಿಯುತವಾಗಿ ಬದುಕಲು ಮತ್ತು ಸಂಪೂರ್ಣ ಸಾಮರ್ಥ್ಯ ಅಭಿವೃದ್ಧಿಪಡಿಸಲು ಸ್ವಾತಂತ್ರ್ಯವು ಮೂಲಭೂತ ಹಕ್ಕಾಗಿದೆ

ರೋಣ: ನೈತಿಕ ಮೌಲ್ಯಗಳಿಂದ ಜೀವನ ಸುಂದರವಾಗುವುದು. ಆದ್ದರಿಂದ ಪ್ರತಿಯೊಬ್ಬರು ಪರಸ್ಪರ ಪ್ರೀತಿ, ವಿಶ್ವಾಸ, ಗೌರವಿಸುವಿಕೆ, ಸೌಹಾರ್ದತೆ, ಭಾತೃತ್ವತೆ, ಪರೋಪಕಾರ ಗುಣ ಅಳವಡಿಸಿಕೊಳ್ಳಬೇಕು. ನೈತಿಕತೆ ನಿಜವಾದ ಸ್ವಾತಂತ್ರ್ಯದ ತಳಹದಿಯಾಗಿದೆ ಎಂದು ಸ್ಪಂದನಾ ಮಹಿಳಾ ಮಂಡಳ ಅಧ್ಯಕ್ಷೆ ಶಶಿಕಲಾ.ಎಸ್. ಪಾಟೀಲ ಹೇಳಿದರು.

ಅವರು ಪಟ್ಟಣದ ಶಿವಪೇಟಿ 6ನೇ ಬಡಾವಣೆಯಲ್ಲಿರುವ ಮದೀನ ಮಸಜೀದ್ ಆವರಣದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ಘಟಕ ವತಿಯಿಂದ ನೈತಿಕತೆಯೇ ಸ್ವತಂತ್ರ್ಯ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಬ್ಬರೂ ಶಾಂತಿಯುತವಾಗಿ ಬದುಕಲು ಮತ್ತು ಸಂಪೂರ್ಣ ಸಾಮರ್ಥ್ಯ ಅಭಿವೃದ್ಧಿಪಡಿಸಲು ಸ್ವಾತಂತ್ರ್ಯವು ಮೂಲಭೂತ ಹಕ್ಕಾಗಿದೆ. ಇದು ಮನೆ, ಬೀದಿ ಮತ್ತು ಸಂಸ್ಥೆಗಳಲ್ಲಿ ಶಾಂತಿ ವೃದ್ದಿಸುವ ಮೂಲಕ ಅರ್ಥಪೂರ್ಣವಾಗಿ ಬದುಕಲು ಬೇಕಾದ ಮೂಲಭೂತ ಸ್ವಾತಂತ್ರ್ಯ ಕಲ್ಪಿಸುತ್ತದೆ. ಆದ್ದರಿಂದ ನಾವೆಲ್ಲರೂ ನೈತಿಕತೆಯಿಂದ ಬದುಕನ್ನು ಸಾಗಿಸಿದಲ್ಲಿ ಅದುವೇ ನಿಜವಾದ ಸ್ವಾತಂತ್ರ್ಯವಾಗುತ್ತದೆ ಎಂದರು.

ಪುರಸಭೆ ಮಾಜಿ ಸದಸ್ಯೆ ನಾಜಬೇಗಂ ಯಲಿಗಾರ ಮಾತನಾಡಿ, ಸ್ವಾತಂತ್ರ್ಯವೆಂದರೆ ಕೇವಲ ಹಕ್ಕು ಹೊಂದಿರುವುದು ಮಾತ್ರವಲ್ಲ. ಇದು ಇತರರ ಹಕ್ಕುಗಳನ್ನು ಗೌರವಿಸುವ, ನೈತಿಕ ಮೌಲ್ಯಗಳಿಲ್ಲದೆ, ಜನರು ಇತರರ ಹಕ್ಕುಗಳಿಗೆ ಕುರುಡರಾಗುತ್ತಾರೆ ಮತ್ತು ಅವ್ಯವಸ್ಥೆ ಅನುಸರಿಸುತ್ತದೆ ಎಂದರು.

ಮೇಹರುನ್ನಿಸ್ ತರಪದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾಹೇ ಜಬೀನ, ಅಲೀಮಾ ತರಪದಾರ, ಹಪ್ಸಾ ಶೇಖ, ಸುಫೀಯಾ ನದಾಫ್‌,‌ ಸರೀನಾ ಖಾಜಿ, ಶಾಹಿನಾ ಕಲಾದಗಿ, ಮಿಸಬಾ ನದ್ದಿಮುಲ್ಲಾ, ತಹಸೀನ್ ಶೇಖ, ಬಶೀರ ಗುಡಿಸಾಗರ, ಸುನಿತಾ ಗುಡಿಸಾಗರ, ಗಂಗಮ್ಮ ಕುಲಕರ್ಣಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಹಫ್ಸಾ ಶೇಖ ನಿರೂಪಿಸಿ ಕಲೇಗಾರ ತಮರುನ್ನಾ ಕಲೇಗಾರ ಸ್ವಾಗತಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!