ಅಮೀನಗಡ: ಜಗಜ್ಯೋತಿ ಬಸವಣ್ಣನವರು, ಸ್ವಾಮಿ ವಿವೇಕಾನಂದರ ತತ್ವಾದರ್ಶ, ಅನುಭವಾಮೃತಗಳನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡರೆ ಸುಂದರ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಬೆಂಗಳೂರಿನ ನಿವೃತ್ತ ಸಹಾಯಕ ಆಯುಕ್ತ ಕೆ.ಎನ್.ಬಸವರಾಜ ಹೇಳಿದರು.
ಅಮೀನಗಡ: ಜಗಜ್ಯೋತಿ ಬಸವಣ್ಣನವರು, ಸ್ವಾಮಿ ವಿವೇಕಾನಂದರ ತತ್ವಾದರ್ಶ, ಅನುಭವಾಮೃತಗಳನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡರೆ ಸುಂದರ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಬೆಂಗಳೂರಿನ ನಿವೃತ್ತ ಸಹಾಯಕ ಆಯುಕ್ತ ಕೆ.ಎನ್.ಬಸವರಾಜ ಹೇಳಿದರು.
ಸಮೀಪದ ಗುಡೂರ(ಎಸ್.ಸಿ) ಗ್ರಾಮದಲ್ಲಿ ವೀರಶೈವ ಲಿಂಗಾಯತ ಸಮಾಜ, ಶಿವಾನುಭವ ಸಂಪದ ಹಾಗೂ ಅಕ್ಕನ ಬಳಗದ ಸಹಯೋಗದಲ್ಲಿ ನಡೆದ 3ನೇ ಶಿವಾನುಭವ ಸಂಪದ ಕಾರ್ಯಕ್ರಮದಲ್ಲಿ ಜೀವನ ಶಾಲೆ ಪಾಠಗಳು ವಿಷಯ ಕುರಿತು ಉಪನ್ಯಾಸ ನೀಡಿ, ಮಹನೀಯರ ತತ್ವಾದರ್ಶಗಳನ್ನು ಶಾಲೆಯ ಪಠ್ಯಕ್ರಮದಲ್ಲಿ ಅಳವಡಿಸುವ ಮೂಲಕ ಇಂದಿನ ಜನಾಂಗಕ್ಕೆ ಧರ್ಮ ನೀತಿ ಹಾದಿಯಲ್ಲಿ ಸಾಗುವ ಮಾರ್ಗದರ್ಶನವಾಗಬೇಕು. ಇಂಥಹ ಶಿವಾನುಭವಗಳ ಮೂಲಕ ಆತ್ಮಜಾಗೃತಿಯಾಗಬೇಕು ಎಂದರು.ವೀರಶೈವ ಸಮಾಜದ ಚೇರಮನ್ ಬಸವರಾಜ ರೋಣದ ಅಧ್ಯಕ್ಷತೆ ವಹಿಸಿದ್ದರು. ಪ್ರಭುಲಿಂಗಯ್ಯ ವಸ್ತ್ರದ, ಸಮಾಜದ ಹಿರಿಯರಾದ ಚಂದ್ರಕಾಂತಪ್ಪ ರಾಜೂರ (ಕಾಂತಪ್ಪ ರಾಜೂರ), ಅಗ್ರಿಟೆಕ್ ಎಂ.ಎಡಿ.ಅಶೋಕ ರೊಟ್ಟಿ, ಡಾ.ರಾಜಶೇಖರ ಪಾಟೀಲ, ಶಿವು ಗಂಜೀಹಾಳ ವೇದಿಕೆಯಲ್ಲಿದ್ದರು. ಮಹಾಂತೇಶ ವಸ್ತ್ರದ ಮಾತನಾಡಿದರು. ವಿರೂಪಾಕ್ಷಯ್ಯ ಯಾವಗಲ್‌ಮಠ ನಿರೂಪಿಸಿ, ಕಲಾವಿದ ವೆಂಕಟೇಶ ದೇಸಾಯಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.