ಹುಬ್ಬಳ್ಳಿ:
ತಾಲೂಕಿನ ಮಂಟೂರು ಗ್ರಾಮದ ಶ್ರೀಅಡವಿ ಸಿದ್ಧೇಶ್ವರ ಮಠದ ಆವರಣದಲ್ಲಿ ಸೋಮವಾರ ನಡೆದ ಲಿಂ. ಶಿವಲಿಂಗೇಶ್ವರ ಶ್ರೀಗಳ ಪ್ರಥಮ ಪುಣ್ಯಸ್ಮರಣೋತ್ಸವದಲ್ಲಿ ಮಾತನಾಡಿದ ಅವರು, ಮೃಧು ಸ್ವಭಾವದ ಸಂಸ್ಕಾರ ಭರಿತ ಶಿವಲಿಂಗೇಶ್ವರ ಶ್ರೀಗಳು ತೋರಿದ ದಾರಿಯಲ್ಲಿ ನಾವೆಲ್ಲ ನಡಬೇಕು ಎಂದರು.
ಶ್ರೀಗಳು ನೇಮಿಸಿದ ಉತ್ತರಾಧಿಕಾರಿ ಇಂದುಧರ ದೇವರ ಪಟ್ಟಾಧಿಕಾರ ಮಹೋತ್ಸವವನ್ನು ಶೀಘ್ರದಲೇ ವಿಜೃಂಭಣೆಯಿಂದ ನೆರವೇರಿಸೋಣ ಎಂದು ಹೇಳಿದರು.ಆಶೀರ್ವಚನ ನೀಡಿದ ಹುಬ್ಬಳ್ಳಿ ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ, ಮಠದಿಂದ ಘಟವಾಗಬಾರದು. ಘಟದಿಂದ ಮಠವಾಗಬೇಕು ಎನ್ನುವ ಹಾನಗಲ್ ಕುಮಾರೇಶ್ವರರ ತತ್ವವನ್ನು ಲಿಂ. ಶಿವಲಿಂಗೇಶ್ವರ ಶ್ರೀಗಳು ಪಾಲಿಸಿದ್ದರು. ಆಧ್ಯಾತ್ಮಿಕ ಕ್ಷೇತ್ರಕ್ಕೆ ಮಾತೃ ಹೃದಯದ ಶ್ರೀಗಳ ಕೊಡುಗೆ ಅಪಾರ ಎಂದರು.
ಇದೇ ಸಂದರ್ಭದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು. ಮಂಟೂರು, ಬಂಡಿವಾಡ, ಶಿರಗುಪ್ಪಿ, ನಾಗರಹಳ್ಳಿ, ಬಮ್ಮಿಗಟ್ಟಿ, ಗೇರಕೊಪ್ಪ, ಬಳ್ಳಿಗಾವಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಇದ್ದರು.