ಜನಪದ ರೂಢಿಸಿಕೊಂಡರೆ ಬದುಕು ಸದೃಢ: ಶಶಿಕಾಂತ ಬಂಡರಗಲ್ಲ

KannadaprabhaNewsNetwork |  
Published : Nov 24, 2025, 03:30 AM IST
೨೩ ಇಳಕಲ್ಲ ೧  | Kannada Prabha

ಸಾರಾಂಶ

ಎಲ್ಲ ಸಾಹಿತ್ಯಗಳ ಮೂಲ ಜನಪದ. ಜನಪದದಲ್ಲಿರುವ ಗಟ್ಟಿತನ ರೂಢಿಸಿಕೊಂಡರೆ ಬದುಕು ರೋಗರಹಿತ ಮತ್ತು ಸದೃಢವಾಗಿರುತ್ತದೆ ಎಂದು ಪ್ರಗತಿಪರ ರೈತ ಶಶಿಕಾಂತ ಬಂಡರಗಲ್ಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಎಲ್ಲ ಸಾಹಿತ್ಯಗಳ ಮೂಲ ಜನಪದ. ಜನಪದದಲ್ಲಿರುವ ಗಟ್ಟಿತನ ರೂಢಿಸಿಕೊಂಡರೆ ಬದುಕು ರೋಗರಹಿತ ಮತ್ತು ಸದೃಢವಾಗಿರುತ್ತದೆ ಎಂದು ಪ್ರಗತಿಪರ ರೈತ ಶಶಿಕಾಂತ ಬಂಡರಗಲ್ಲ ಹೇಳಿದರು. ಕನ್ನಡ ಜಾನಪದ ಪರಿಷತ್ತು ಇಳಕಲ್ಲ ತಾಲೂಕು ಘಟಕ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡೆದ ಜಾನಪದ ರಾಜ್ಯೋತ್ಸವ, ವಿಶ್ವ ಬುಡಕಟ್ಟು ಮತ್ತು ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಷ್ಟೇ ಪ್ರಗತಿ ಸಾಧಿಸಿದರೂ ಅದು ಮೂಲ ಪರಂಪರೆಯ ಆಧಾರದ ಮೇಲಿರುತ್ತದೆ ಎನ್ನುವುದನ್ನು ನಾವು ಮರೆಯಬಾರದು ಎಂದು ಅಭಿಪ್ರಾಯಪಟ್ಟರು.ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಆರೀಫ್ ರಾಜಾ ಮಾತನಾಡಿ, ಜನಪದ ಕಲೆಗೆ ಕೊಡುವಷ್ಟು ಗೌರವವನ್ನು ಕಲಾವಿದರಿಗೂ ಕೊಟ್ಟರೆ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಕಾಳಜಿ ವ್ಯಕ್ತಪಡಿಸಿದರು.

ಗೌರವಾಧ್ಯಕ್ಷತೆ ವಹಿಸಿದ್ದ ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಚನ್ನಬಸಪ್ಪ ಲೆಕ್ಕಿಹಾಳ ಮಾತನಾಡಿ, ಬುಡಕಟ್ಟು ಕಲೆ ಉಳಿಯಬೇಕಾದರೆ ಮೂಲ ಕಲಾವಿದರು ಮುನ್ನಲೆಗೆ ಬರಬೇಕು ಎಂದು ಹೇಳಿದರು. ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷೆ ಅರುಂದತಿ ಎಂ, ಬಾಬುರಾವ್ ಕುಲಕರ್ಣಿ ಮಾತನಾಡಿದರು.

ಮಿಮಿಕ್ರಿಯ ಏಕನಾಥ ರಜೊಳ್ಳಿ, ಪ್ರಿಯಾಂಕ ಹಿರೇಮಠ ಜನಪದ ಹಾಡಿನ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರರು. ಇದೇ ವೇಳೆ ಹಿರಿಯ ಪತ್ರಕರ್ತ ಬಾಬುರಾವ್ ಕುಲಕರ್ಣಿ, ಸೈಯದ್‌ಸಿರಾಜ್‌ ಖಾಜಿ ಅವರನ್ನು ಸನ್ಮಾನಿಸಲಾಯಿತು. ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಮಹಾಂತೇಶ ಜೀವಣ್ಣವರ ಪ್ರಾಸ್ತಾವಿಕ ನುಡಿ ಹೇಳಿದರು.

ಹಿರಿಯ ಲೇಖಕ ರಾಜಶೇಖರ ಕಲ್ಮಠ, ಉಪನ್ಯಾಸಕಿ ಗಾಯತ್ರಿ ದಾದ್ಮಿ, ಎಂ.ಎಸ್. ಇಂಜನಗೇರಿ, ಸವಿತಾ ಪಟ್ಟಣಶೆಟ್ಟಿ, ಶ್ರೀದೇವಿ ಕಡಿವಾಲ ಡಾ.ಜಂಬಯ್ಯ ನಾಯಕ, ಮಾರ್ತಂಡರಾವ್ ದೇಸಾಯಿ, ಬಸವರಾಜ ಬಾದವಾಡಗಿ, ಮೋತಿಲಾಲ ಕಾಂಬಳೇಕರ, ಗುರು ಗಾಣಿಗೇರ, ಶಖಿಲ್ ನಾಗನೂರ, ಗಂಗಾಧರ ಕುರುಗೋಡ, ಆನಂದ ದೇವಗಿರಿಕರ, ಸಿಬ್ಬಂದಿ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಬಸು ಬಾದವಾಡಗಿ ಪ್ರಾರ್ಥಿಸಿದರು. ಎಚ್.ಬಿ. ಕಂಬಳಿ ನಿರೂಪಿಸಿದರು. ಮಂಜು ಡಿ. ವಂದಿಸಿದರು.

PREV

Recommended Stories

ನಿವೃತ್ತಿ ಜೀವನ ಬವಣೆ ರಹಿತ ಉತ್ಸಾಹದಾಯಕವಾಗಿರಲಿ: ಡಾ.ಸಿದ್ದು ದಿವಾನ
ಪ್ರಿಯದರ್ಶಿನಿ ಕೋ-ಆಪರೇಟಿವ್‌ ಸೊಸೈಟಿ ಸಹಕಾರ ಸಪ್ತಾಹ ಸಮಾರೋಪ