ಭಗವಂತನ ನಾಮಸ್ಮರಣೆಯಿಂದ ಜೀವನ ಸಾರ್ಥಕ- ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಕೆ.ಎಂ. ಬಳಿಗೇರ

KannadaprabhaNewsNetwork |  
Published : Feb 25, 2025, 12:51 AM ISTUpdated : Feb 25, 2025, 11:28 AM IST
ಪೋಟೊ-೨೪ ಎಸ್.ಎಚ್.ಟಿ. ೧ಕೆ-ಜಿಲ್ಲಾ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಕೆ.ಎ. ಬಳಿಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. | Kannada Prabha

ಸಾರಾಂಶ

ದೇವರ ನಾಮಸ್ಮರಣೆಯಿಂದ ಮನುಷ್ಯನ ಬದುಕು ನೆಮ್ಮದಿಯಿಂದ ಇರಲು ಸಾಧ್ಯ. ಇಂದು ಮಾನವ ಜೀವನದ ಅಂತರಂಗ ಬಹಿರಂಗಗಳೆರಡರಲ್ಲೂ ಮಲೀನವಾಗಿವೆ. ಆಗುತ್ತಲೂ ಇವೆ. ಪ್ರಕೃತಿ ಮತ್ತು ದೇವರಲ್ಲಿ ಮಾತ್ರ ಈ ಮಲೀನತೆ ದೂರ ಮಾಡುವ ಸಾಮಥ್ಯವಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.

ಶಿರಹಟ್ಟಿ: ದೇವರ ನಾಮಸ್ಮರಣೆಯಿಂದ ಮನುಷ್ಯನ ಬದುಕು ನೆಮ್ಮದಿಯಿಂದ ಇರಲು ಸಾಧ್ಯ. ಇಂದು ಮಾನವ ಜೀವನದ ಅಂತರಂಗ ಬಹಿರಂಗಗಳೆರಡರಲ್ಲೂ ಮಲೀನವಾಗಿವೆ. ಆಗುತ್ತಲೂ ಇವೆ. ಪ್ರಕೃತಿ ಮತ್ತು ದೇವರಲ್ಲಿ ಮಾತ್ರ ಈ ಮಲೀನತೆ ದೂರ ಮಾಡುವ ಸಾಮಥ್ಯವಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.

ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಏರ್ಪಡಿಸಿದ್ದ 89ನೇ ತ್ರಿಮೂರ್ತಿ ಮಹಾಶಿವರಾತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭೂಮಿಗೆ ಕೊಳೆತು ನಾರುವ ಗೊಬ್ಬರವನ್ನು, ಕೊಳೆಯಾದ ನೀರನ್ನು ಹಾಕಿದರೂ ಅದು ನಮಗೆ ಸುಗಂಧಭರಿತವಾದ ಪುಷ್ಪಗಳನ್ನು, ಸೂ ಮಧುರ ಹಾಗೂ ರಸಭರಿತವಾದ ಫಲಗಳನ್ನು ಕೊಡುತ್ತದೆ. ನಾವು ಇಂಗಾಲದ ಡೈಆಕ್ಸೈಡ್‌ ಕೊಟ್ಟರೂ ಪ್ರಕೃತಿ ನಮಗೆ ಪ್ರಾಣಮಾಯವನ್ನಾಗಿ ಮರಳಿ ಸಮರ್ಪಿಸುತ್ತದೆ ಎಂದರು. ದೇವರ ನಾಮಸ್ಮರಣೆಯಿಂದ ಪಾಪಗಳು ದೂರಾಗಿ ಪುಣ್ಯದ ಸಂಪಾದನೆ ದೊರೆಯುತ್ತದೆ. ಉಪವಾಸದ ನಿಜ ಅರ್ಥವೆಂದರೆ ಊಟವನ್ನು ದೇಹಕ್ಕೆ ತೆಗೆದುಕೊಳ್ಳದೇ ಇರುವದು ಉಪವಾಸವಲ್ಲ. 

ಮನಸ್ಸನ್ನು ದೇವರ ಹತ್ತಿರ ಇರಿಸುವುದಾಗಿದೆ. ಜಾಗರಣೆ ಎಂದರೆ ನಿದ್ರೆಯಿಂದ ದೂರವಿರುವುದಲ್ಲ. ದುಷ್ಟವಿಚಾರಗಳಿಂದ ದೂರವಿರುವುದು ನಿಜವಾದ ಶಿವರಾತ್ರಿಯ ಆಚರಣೆಯ ಉದ್ದೇಶವಾಗಿದೆ. ಇಂತಹ ಸದ್ಗುಣಗಳನ್ನ, ಸದ್ವಿಚಾರಗಳನ್ನು ಬಿತ್ತುವುದಕ್ಕಾಗಿ ನಮ್ಮ ಹಿರಿಯರು ಬಹಳ ಕಾಲದಿಂದಲೂ ಕೂಡ ಶಿವರಾತ್ರಿಯನ್ನು ಆಚರಣೆ ಮಾಡಿಕೊಂಡು ಬಂದಿರುತ್ತಾರೆ ಎಂದರು.

 ಭಗವಂತನ, ಶಿವನ ನಾಮಜಪ ಮಾಡುವುದರಿಂದ ಆತ್ಮ ಸಾಕ್ಷಾತ್ಕಾರ ಹೆಚ್ಚಾಗಿ, ಮನೋಬಲ ಅಧಿಕವಾಗುತ್ತದೆ. ಆದಿ, ಅಂತ್ಯವಿಲ್ಲದ ಪರಮಾತ್ಮನಿಗೆ ಶರಣು ಹೋಗಬೇಕು. ಅವನನ್ನು ನಮ್ಮವನನ್ನಾಗಿ ಮಾಡಿಕೊಳ್ಳಬೇಕು. ಸೃಷ್ಟಿಕರ್ತನ ಅವಶ್ಯಕತೆ ನಮಗಿದೆ ಎಂದು ಹೇಳಿದರು. ದೇವರು ರೂಪ, ಗುಣವಿಲ್ಲದೇ ನಿರಾಕಾರನಾಗಿದ್ದಾನೆ.

 ಮಹಾ ಪುರುಶರು ಅವನನ್ನು ಆಕಾರಕ್ಕೆ ತಂದರು. ಭವಸಾಗರದಿಂದ ಪಾರುಮಾಡುವ ಶಕ್ತಿ ಭಗವಂತನಿಗಿದೆ. ಧರ್ಮವನ್ನು ನಾವು ಕಾಪಾಡಬೇಕಿದೆ. ಅಂದರೆ ಅದು ನಮ್ಮನ್ನು ರಕ್ಷಿಸುತ್ತದೆ. ಭಗವಂತನ ನಾಮಸ್ಮರಣೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುತ್ತದೆ. ಸುಖ, ಸಂಪತ್ತು ಕ್ಷಣಿಕವಾಗಿದ್ದು, ಶಾಶ್ವತವಾದ ಸುಖ ಪಡೆಯಬೇಕಾದರೆ ದೇವರ ನಾಮಸ್ಮರಣೆಯಲ್ಲಿ ತೊಡಗಿಕೊಳ್ಳಬೇಕು. ಪರಮಾತ್ಮನ ಚೈತನ್ಯದಿಂದ ಶರೀರಕ್ಕೆ ಆತ್ಮ ಬಂದಿದೆ ಎಂಬ ಮನೋಭಾವ ಹೊಂದಿದ ಪ್ರತಿಯೊಬ್ಬರೂ ಪ್ರಪಂಚದಲ್ಲಿ ಸುಖಿಯಾಗಿರುತ್ತಾರೆ ಎಂದರು.

 ಸಾಹಿತಿ ಜಿ.ಬಿ. ಹೆಸರೂರ ಮಾತನಾಡಿ, ಶಿವ ಶಿವ ಎಂದರೆ ಭಯವಿಲ್ಲ ಎಂಬುದು ಅಸಂಖ್ಯಾತ ಭಕ್ತರ ನಂಬಿಕೆ. ಎಲ್ಲಾ ಇಷ್ಟಾರ್ಥಗಳನ್ನು ಕರುಣಿಸುವ, ಬದುಕಿನಲ್ಲಿ ಬರುವ ಅಡೆತಡೆಗಳನ್ನು ನಿವಾರಿಸುವ ದೇವರು ಈಶ್ವರ. ಶಿವಪೂಜೆಯಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ದೇಗುಲಗಳಿಗೆ ಭೇಟಿ ನೀಡಿ ಕಷ್ಟಗಳನ್ನು ಕರಗಿಸಿ ಭಕ್ತಿ ಸೂತ್ರ, ಧರ್ಮಸೂತ್ರ ಹಾಗೂ ಬ್ರಹ್ಮಸೂತ್ರಗಳ ಮೂಲಕ ಭಗವಂತನ ನಾಮಸ್ಮರಣೆ ಸಾಧ್ಯ ಎಂದರು. 

ಈ ಜಗತ್ತು ನಾವು ಬರುವ ಮೊದಲೂ ಇದೆ. ನಮ್ಮ ನಂತರವೂ ಇರುತ್ತದೆ. ಭಗವಂತನಿಗೆ ಸೇರಿದ ಈ ಜಗತ್ತಿನಲ್ಲಿ ನಮ್ಮದು ಎನ್ನುವುದು ಯಾವುದೂ ಇಲ್ಲ. ಅಂಥ ಪರಮಾತ್ಮನ ಕಡೆಗೆ ಅಂತರ್‌ಮುಖಿಗಳಾಗಿ ನಾಮಸ್ಮರಣೆ ಮಾಡುವುದು ಮಾತ್ರ ನಮ್ಮ ಕಾಯಕವಾಗಬೇಕು. ಪರಮಾತ್ಮನ ನಾಮಸ್ಮರಣೆಯಿಂದ ಮನುಷ್ಯರು ಪರಿಶುದ್ದರಾಗಬಲ್ಲರು ಎಂದು ತಿಳಿಸಿದರು. ಭಗವಂತನ ಸ್ಮರಣೆಯಿಂದ ಶಕ್ತಿ, ಯುಕ್ತಿ, ಮುಕ್ತಿ, ವಿಶ್ವಾಸ, ಯಶಸ್ಸುಗಳು ನಮಗೆ ದೊರೆಯುತ್ತವೆ.  ಅದೈರ್ಯ, ಅನಾರೋಗ್ಯ ಸಮಸ್ಯೆಗಳು ಹೊರಟು ಹೋಗುತ್ತವೆ. ಭಗವಂತ ನಂಬಿದ ಭಕ್ತರನ್ನು ಎಂದೆAದಿಗೂ ಕೈಬಿಡುವುದೇ ಇಲ್ಲ. ಇಂದಿನ ಯಾಂತ್ರಿಕ ಜಗತ್ತಿನಲ್ಲಿ ಬಿಡುವು ಎಂಬುದೇ ದೊರೆಯುತ್ತಿಲ್ಲವಾದ್ದರಿಂದ ಮನಸ್ಸಿಗೆ ಶಾಂತಿ, ಸಮಾಧಾನ ದೊರೆಯುತ್ತಿಲ್ಲ. ಮನಸ್ಸು ಉಲ್ಲಸಿತವಾಗಿರಲು ದೇವರ ನಾಮಸ್ಮರಣೆ ಅಗತ್ಯವೆಂದರು. 

ಮನೆಯಲ್ಲಿ ದೇವಾನುದೇವತೆಗಳ ಫೋಟೋ ಇಡುವುದು ವಾಡಿಕೆ. ಮನೆಯ ಗೋಡೆಯಲ್ಲಿ ದೇವರ ಚಿತ್ರವನ್ನು ಇಟ್ಟು ಎಲ್ಲರೂ ಭಕ್ತಿ ಭಾವದಿಂದ ನಮಿಸುತ್ತಾರೆ. ನಂಬಿಕೆಗಳ ಪ್ರಕಾರ ಉತ್ತರ ದಿಕ್ಕು ಶಿವ ದೇವರಿಗೆ ಬಲು ಪ್ರಿಯ. ಕೈಲಾಸ ಪರ್ವತ ಕೂಡಾ ಇರುವುದು ಉತ್ತರ ದಿಕ್ಕಿನಲ್ಲಿಯೇ. ಹೀಗಾಗಿ ನಿತ್ಯ ಶಿವನ ದ್ಯಾನದಲ್ಲಿ ತೊಡಗಿದರೆ ನೆಮ್ಮದಿ ದೊರಕಲು ಸಾಧ್ಯ ಎಂದರು.

 ಶಾಸಕ ಡಾ. ಚಂದ್ರು ಲಮಾಣಿ, ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಸದಸ್ಯ ಫಕ್ಕೀರೇಶ ರಟ್ಟಿಹಳ್ಳಿ ಮಾತನಾಡಿದರು. ಸಂಚಾಲಕಿ ದೇವಕಿ ಅಕ್ಕನವರು ಪ್ರಾಸ್ತಾವಿಕ ಮಾತನಾಡಿದರು. ರ್ಮನೇಶ ಜಿಣಗಿ, ಸೋಮರಡ್ಡಿ ಶೆಟರಡ್ಡಿ, ಎಸ್.ಸಿ. ಕೊಡ್ಲಿಯವರ, ಶೈಲಕ್ಕ ಅಕ್ಕನವರು ಕಾರ್ಯಕ್ರಮದಲ್ಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ