ಕೊಪ್ಪಳ:
ತಾಲೂಕಿನ ಡೊಂಬರಳ್ಳಿ ಗ್ರಾಮದಲ್ಲಿ ಶ್ರೀಶಂಕರಲಿಂಗಜ್ಜನ 41ನೇ ಪುಣ್ಯತಿಥಿ ನಿಮಿತ್ತ ಹಮ್ಮಿಕೊಂಡಿದ್ದ ಪುರಾಣಮಹಾಮಂಗಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅವರಿವರ ಸಾಧನೆ ನೋಡಿ, ನಾವು ಅವರ ಸಾಧನೆಯ ಹಾದಿ ತುಳಿಯಬೇಕು. ಆದರೆ, ನಾವು ಕೊರಗುತ್ತಾ ಕುಳಿತುಕೊಳ್ಳುತ್ತೇವೆ. ಇದರಿಂದ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಅವರವರ ಬದುಕು ಅವರಿಗೆ, ನಮ್ಮ ಬದುಕು ನಾವು ಎಂದು ನೆಮ್ಮದಿಯ ಜೀವನ ನಡೆಸಬೇಕು ಎಂದರು.ದೇವರು ನಮಗೆ ಏನು ಕರುಣಿಸಿದ್ದಾನೆ, ಅದನ್ನು ಆನಂದಿಸಬೇಕು. ಅನುಭವಿಸಬೇಕು. ಅದು ಬಿಟ್ಟು ಬೇರೆಯವರ ಬದುಕನ್ನು ನೋಡುತ್ತಾ ಕುಳಿತರೇ ಅದರಿಂದ ಏನು ಪ್ರಯೋಜನವಾಗವುದಿಲ್ಲ ಎಂದರು.ಪ್ರತಿಯೊಬ್ಬರಿಗೂ ದೇವರು ಸಮಯವನ್ನು ಅಷ್ಟೇ ನೀಡಿದ್ದಾರೆ. ಹೀಗಾಗಿ, ಸಮಯ ಅಮೂಲ್ಯವಾಗಿದ್ದು, ಅದನ್ನು ವ್ಯರ್ಥ ಮಾಡದೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಡೊಂಬರಳ್ಳಿ ಗ್ರಾಮದಲ್ಲಿ ಬಂದು ನೆಲೆಸಿದ್ದ ಶಂಕರಲಿಂಗಜ್ಜನ ಅವರ 41ನೇ ಪುಣ್ಯಸ್ಮರಣೆ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣ ಎಂದರು.
ಪುರಾಣ ಮಹಾಮಂಗಲ ನಿಮಿತ್ತ ಶಂಕರಲಿಂಗಜ್ಜನ ಭಾವಚಿತ್ರ ಮೆರವಣಿಗೆ ಶನಿವಾರ ವಿಜೃಂಭಣೆಯಿಂದ ನೆರವೇರಿತು. ವಾದ್ಯ, ವೃಂದಗಳಿಂದ ಮೆರವಣಿಗೆಗೆ ಕಳೆ ಹೆಚ್ಚಾಗಿರುವುದು ಕಂಡು ಬಂದಿತು. ಬಿ.ಎಸ್. ಪಾಟೀಲ್ ಅವರು ಕಾರ್ಯಕ್ರಮ ನಿರೂಪಿಸಿದರು. ಗ್ರಾಮದ ಹಿರಿಯರು ಇದ್ದರು.