ಕಹಿ ಘಟನೆಗಳ ಮರೆತರೆ ಬದುಕು ಸಿಹಿ: ನಟರಾಜ ರಾಯ್ಕರ್‌

KannadaprabhaNewsNetwork |  
Published : Jan 02, 2025, 12:32 AM IST
2025ರ ನೂತನ ವರ್ಷದ ಸ್ವಾಗತ ಕೋರುವ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ಕನ್ನಡನಾಡು ಹಿತರಕ್ಷಣಾ ಸಮಿತಿಯ ನಗರ ಘಟಕದ ಅಧ್ಯಕ್ಷ ನಟರಾಜರಾಯ್ಕರ್ | Kannada Prabha

ಸಾರಾಂಶ

ಪ್ರತಿಯೊಬ್ಬರ ಜೀವನದಲ್ಲೂ ಸಿಹಿ-ಕಹಿ ಘಟನೆಗಳು ನಡೆಯುತ್ತವೆ. ಆದರೂ, ಸಿಹಿ ಘಟನೆಗಳನ್ನು ನೆನೆದು, ಕಹಿ ಘಟನೆಗಳು ಮತ್ತೆ ಆಗದಂತೆ ಜೀವಿಸುವ ಕಲೆಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಆಗ ಸಮಾಧಾನ ಚಿತ್ತದಿಂದ ಇರಲು ಸಾಧ್ಯ ಎಂದು ಕನ್ನಡನಾಡು ಹಿತರಕ್ಷಣಾ ಸಮಿತಿಯ ನಗರ ಘಟಕ ಅಧ್ಯಕ್ಷ ನಟರಾಜ ರಾಯ್ಕರ್ ಚನ್ನಗಿರಿಯಲ್ಲಿ ಹೇಳಿದ್ದಾರೆ.

- 2025ರ ನೂತನ ವರ್ಷ ಸ್ವಾಗತ ಸಮಾರಂಭ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಪ್ರತಿಯೊಬ್ಬರ ಜೀವನದಲ್ಲೂ ಸಿಹಿ-ಕಹಿ ಘಟನೆಗಳು ನಡೆಯುತ್ತವೆ. ಆದರೂ, ಸಿಹಿ ಘಟನೆಗಳನ್ನು ನೆನೆದು, ಕಹಿ ಘಟನೆಗಳು ಮತ್ತೆ ಆಗದಂತೆ ಜೀವಿಸುವ ಕಲೆಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಆಗ ಸಮಾಧಾನ ಚಿತ್ತದಿಂದ ಇರಲು ಸಾಧ್ಯ ಎಂದು ಕನ್ನಡನಾಡು ಹಿತರಕ್ಷಣಾ ಸಮಿತಿಯ ನಗರ ಘಟಕ ಅಧ್ಯಕ್ಷ ನಟರಾಜ ರಾಯ್ಕರ್ ಹೇಳಿದರು.

ಮಂಗಳವಾರ ರಾತ್ರಿ ತಮ್ಮ ನಿವಾಸದ ಸಭಾಂಗಣದಲ್ಲಿ 2025ರ ನೂತನ ವರ್ಷದ ಸ್ವಾಗತ ಕೋರುವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. 2024ರ ವರ್ಷ ಈಗ ಕಳೆದು, 2025ನೇ ಹೊಸ ವರುಷದಲ್ಲಿ ಹೊಸ ಹೊಸ ಆಲೋಚನೆಗಳೊಂದಿಗೆ ಪ್ರಗತಿದಾಯಕವಾಗಿ ಮುನ್ನಡೆಯಬೇಕಿದೆ ಎಂದರು.

ದುರಭ್ಯಾಸಗಳನ್ನು ತೊರೆದು, ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಆರೋಗ್ಯವಂತರಾಗಬೇಕು. ವಿಚಾರವಂತ ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯಗಳನ್ನು ಹೊಂದಿ, ವಿಚಾರವಂತರಾಗಿ ಬದುಕಬೇಕಾಗಿದೆ ಎಂದರು.

ಸಮಿತಿ ತಾಲೂಕು ಅಧ್ಯಕ್ಷ ಎಂ.ಅಣ್ಣೋಜಿರಾವ್ ಪವಾರ್ ಮಾತನಾಡಿ, ನೂತನ ವರ್ಷದ ಆಗಮನದ ಸಂಭ್ರಮವನ್ನು ಪ್ರತಿವರ್ಷ ಅಪ್ತಸ್ನೇಹಿತರು ಮತ್ತು ಸಹೋದರಿಯರ ಪುಟಾಣಿ ಮಕ್ಕಳ ಸಮ್ಮುಖ ಆಚರಿಸುತ್ತಾ ನಟರಾಜ್ ಅವರು ನವೋಲ್ಲಾಸವನ್ನು ತುಂಬುತ್ತಿದ್ದಾರೆ. ಹೊಸ ವರ್ಷದ ಸಂಭ್ರಮ ಆಚರಣೆ ಎಲ್ಲರಿಗೂ ಉತ್ಸಾಹ ಮೂಡಿಸಿದೆ ಎಂದರು.

ಪುಟಾಣಿ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಸಂಗೀತ ಕುರ್ಚಿ ಸ್ಪರ್ಧೆ ನಡೆಸಲಾಯಿತು, ದೀಪಾ ರಾಯ್ಕರ್ ತೀರ್ಪುಗಾರರಾಗಿದ್ದರು. ಮಂಗಳವಾರ ರಾತ್ರಿ 12 ಗಂಟೆ ಆಗುತ್ತಿದ್ದಂತೆಯೇ ಪಟಾಕಿ ಸಿಡಿಸಿ, ಸಿಹಿ ಹಂಚುತ್ತಾ 2025ರ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು.

ಮುಖ್ಯ ಅತಿಥಿಗಳಾಗಿ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಸತೀಶ್ ಎಂ. ಪವಾರ್, ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಉಪಾಧ್ಯಕ್ಷ ಬುಳ್ಳಿ ನಾಗರಾಜ್, ಎಂ.ಪ್ರಸನ್ನ, ಶ್ರೀನಿವಾಸ್, ನಾಗರತ್ನಮ್ಮ, ಅಕ್ಷತಾ, ಅಮೃತಾ, ಅಖಿಲೇಶ್, ರುದ್ರೇಶ್, ಸೋಮಶೇಖರ್, ಪುರಸಭೆ ಮಾಜಿ ಸದಸ್ಯ ಸಿ.ಬಿ.ಜಗದೀಶ್, ಸ್ನೇಹಿತರು ಭಾಗಿಯಾಗಿದ್ದರು.

- - - -1ಕೆಸಿಎನ್‌ಜಿ1:

2025 ಸ್ವಾಗತ ಕೋರುವ ಸಮಾರಂಭದ ಉದ್ಘಾಟನೆಯನ್ನು ಕನ್ನಡನಾಡು ಹಿತರಕ್ಷಣಾ ಸಮಿತಿ ನಗರ ಘಟಕದ ಅಧ್ಯಕ್ಷ ನಟರಾಜ ರಾಯ್ಕರ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!