ಮೌಲ್ಯಗಳ ಕೊರತೆಯಿಂದ ಬದಲಾದ ಜೀವನ ಶೈಲಿ: ಡಾ.ಸಾಗರ ತೆಕ್ಕೆನ್ನವರ

KannadaprabhaNewsNetwork | Published : Feb 22, 2025 12:47 AM

ಸಾರಾಂಶ

ಇಂದಿನ ಶಿಕ್ಷಣದಲ್ಲಿ ಸಾಕಷ್ಟು ತಂತ್ರಜ್ಞಾನವಿದ್ದರೂ ಯಾವ ಸಂಸ್ಕಾರಯುತ ಶಿಕ್ಷಣ ಸಿಗುತ್ತಿಲ್ಲ. ಆದರೆ, ಪ್ರಾಚೀನ ಕಾಲದಲ್ಲಿ ಶಿಕ್ಷಣದಲ್ಲಿ ಜನರ ಜೀವನದಲ್ಲಿ ಮೌಲ್ಯ, ನಡತೆಯಲ್ಲಿ ಸಂಸ್ಕಾರವಿತ್ತು. ಇಂದು ಮೌಲ್ಯಗಳ ಶಿಕ್ಷಣ ಕೊರತೆಯಿಂದ ಎಲ್ಲವೂ ಬದಲಾವಣೆಯಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಡಾ.ಸಾಗರ ತೆಕ್ಕೆನ್ನವರ ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಸ್ಥಳೀಯ ಮಾತೃಭೂಮಿ ವಿದ್ಯಾಸಂಸ್ಥೆಯ ಬಾಪೂಜಿ ವಿದ್ಯಾಲಯ, ಬಾಪೂಜಿ ಪಬ್ಲಿಕ್ ಪೂರ್ವ ಪ್ರಾಥಮಿಕ, ಬಾಪೂಜಿ ಕನ್ನಡ, ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 22ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸಾಂಸ್ಕೃತಿಕ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಾಲಕರು ಮಕ್ಕಳನ್ನು ಟಿವಿ ಹಾಗೂ ಮೊಬೈಲ್ ನಿಂದ ದೂರವಿರಿಸಬೇಕು.ಈ ಎರಡು ಮಾಧ್ಯಮಗಳು ಮಕ್ಕಳ ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರುತ್ತಿವೆ. ಮಕ್ಕಳ ಭವಿಷ್ಯ ಹಾಳು ಮಾಡುವ ಸಮೂಹ ಮಾಧ್ಯಮಗಳಿಂದ ಮಕ್ಕಳನ್ನು ರಕ್ಷಣೆ ಮಾಡಬೇಕು ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಕ್ಕಳು ಓದಬೇಕಾದರೆ ಪಾಲಕರು ಬದಲಾಗಬೇಕಿದೆ. ಮಕ್ಕಳಿಗೆ ಬೇಕಿರುವ ಸಂಸ್ಕಾರ, ಸಂಪ್ರದಾಯ ತಿಳಿಸುವ ಕೆಲಸವಾಗಬೇಕು. ಬದಲಾದ ದಿನಗಳಲ್ಲಿ ತಂದೆ-ತಾಯಿಗಳ ರಕ್ಷಣೆಯಲ್ಲಿ ಸೋತಿದ್ದೇವೆ ಎಂದು ಅಭಿಪ್ರಾಯಪಟ್ಟರು.

ಮಾತೃಭೂಮಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮತ್ತು ವಸ್ತ್ರದ ಮಾತನಾಡಿ ಪಾಲಕರು ವಿದ್ಯಾರ್ಥಿಗಳ ಸಾಂಸ್ಕೃತಿಕ ಕ್ಷೇತ್ರಕ್ಕೆ ಮಾತ್ರ ಗಮನ ನೀಡದೆ ಮಗುವಿನ ಸರ್ವಾಂಗೀನ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂದರು.

ಶಿಕ್ಷಣ ಸಂಯೋಜಕ ಜಗದೀಶ ಖೋತ ಹಾಗೂ ಚಂದ್ರಶೇಖರಯ್ಯ ಗಣಕುಮಾರ, ಪಾಲಕರ ಪ್ರತಿನಿಧಿ ಸಾವಿತ್ರಿ ಸಣಕಲ್ಲ ಮಾತನಾಡಿದರು.

ಬೀಳಗಿ ಹುಚ್ಚಪ್ಪಯ್ಯನ ಮಠದ ಸಿದ್ದಯ್ಯ ಸ್ವಾಮೀಜಿ, ಪಪಂ ಅಧ್ಯಕ್ಷ ಮುತ್ತು ಬೊರ್ಜಿ, ಶಿವಾನಂದ ನಾಗೋಡ, ಬಸವರಾಜ ಉಮಚಗಿಮಠ, ಬಿ.ಎಸ್. ಕಠಾಣಿ, ಆಡಳಿತಾಧಿಕಾರಿ ಎಸ್.ಎಚ್. ಯಾಳವಾರಮಠ ಇದ್ದರು.

Share this article