ಕನ್ನಡಪ್ರಭ ವಾರ್ತೆ ಇಂಡಿ
ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಸೇರಿ ಇತರರು ಶಾಸಕ ಯಶವಂತರಾಯಗೌಡ ಅವರ ನಡೆಯನ್ನು ಖಂಡಿಸಿದರು. ಜಿಗಜಿಣಗಿ 40 ವರ್ಷ ರಾಜಕಾರಣದಲ್ಲಿ ಕಪ್ಪುಚುಕ್ಕೆ ಇಲ್ಲದೆ ರಾಜಕೀಯ ಮಾಡಿದವರು. ಜಾತ್ಯಾತೀತ ಮನೋಭಾವ ಹೊಂದಿರುವ ಅವರನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದು ಖಂಡನೀಯ. ಜಿಲ್ಲೆಯಲ್ಲಿ ಅನೇಕ ಅಭಿವೃದ್ದಿ ಯೋಜನೆಗಳು ತರುವುದರ ಮೂಲಕ ಜಿಲ್ಲೆ ಅಭಿವೃದ್ದಿಪಡಿಸಿದ್ದಾರೆ. ಕೇಂದ್ರ ಸರ್ಕಾರದ ಸಾವಿರ ಕೋಟಿ ಯೋಜನೆಯ ಕಾರ್ಯಕ್ರಮ ಇಂಡಿಯಲ್ಲಿ ಮಾಡಿದ್ದು ಸಹಿಸಿಕೊಳ್ಳಲು ಆಗದೆ ಹೊಟ್ಟೆ ಉರಿಯಿಂದ ಶಾಸಕರು ಹತಾಸೆಗೊಂಡು ಸಂಸದ ಬಗ್ಗೆ ಮಾತನಾಡಿದ್ದಾರೆ. ಇದು ತಮ್ಮ ಘನತೆಗೆ ಶೋಭೆಯಲ್ಲ ಎಂದು ವಾಗ್ದಾಳಿ ನಡೆಸಿದರು.
ನಿಂದಿಸಿ ರಾಜಕೀಯ ಮಾಡಬೇಡಿಹಿರಿಯರನ್ನು ಗೌರವಿಸುವ ಗುಣ ಇರಬೇಕೆ ವಿನಃ ಅಧಿಕಾರದಲ್ಲಿದ್ದೇನೆ ಎಂದು ಅಗೌರವದಿಂದ ಮಾತನಾಡುವುದು ಸರಿಯಲ್ಲ. ರಾಜಕಾರಣ ಮಾಡುವುದಾದರೆ ಮಾಡಿ, ಆದರೆ ಒಬ್ಬರಿಗೆ ನಿಂದಿಸಿ ರಾಜಕಾರಣ ಮಾಡಬಾರದು ಎಂದರು.
ಕೇಂದ್ರ ಸಚಿವ ನೀತಿನ ಗಡ್ಕರಿ ಅವರು ಬೆಳಗಾವಿಯಲ್ಲಿ ರಾಜ್ಯದ ಹೆದ್ದಾರಿಗಳಿಗೆ ಸಾಮೂಹಿಕ ಚಾಲನೆ ನೀಡಿದ್ದಾರೆ ವಿನಃ ಭೂಮಿಪೂಜೆ ಮಾಡಿಲ್ಲ. ಆದರೆ, ಇಂಡಿಯಲ್ಲಿ ನಡೆದಿದ್ದು ಭೂಮಿ ಪೂಜೆ ಕಾರ್ಯಕ್ರಮ. ಈ ಹಿಂದೆ ಬಿಜೆಪಿ ಸರಕಾರದ ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿಯವರ ಕಾಲದಲ್ಲಿ ಮಂಜೂರು ಮಾಡಿದ ಅನೇಕ ಕಾಮಗಾರಿಗಳಿಗೆ ಶಾಸಕರಾದ ಮೇಲೆ ಭೂಮಿ ಪೂಜೆ ಮಾಡಿದ್ದೀರಿ. ಆದರೆ, ಒಮ್ಮೇಯೂ ಅವರ ಹೆಸರು ಹೇಳಲಿಲ್ಲ. ಮಾಡಿದವರ ಹೆಸರು ಹೇಳಬೇಕು ಎನ್ನುವ ನೀವು ಮಿನಿ ವಿಧಾನಸೌಧ, ಬಸ್ ನಿಲ್ದಾಣ ಉದ್ಘಾಟನೆ ಸಮಾರಂಭದಲ್ಲಿ ಅವರ ಹೆಸರು ಹೇಳಬಹುದಿತ್ತು ಎಂದರು.
ಕೂಡಗಿ ವಿದ್ಯುತ್ ಸ್ಥಾವರ ಕೇಂದ್ರ ಇಂಧನ ಸಚಿವ ಸುಶೀಲಕುಮಾರ ಸಿಂಧೆ ಅವರು ಹಾಗೂ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಕಾಂಗ್ರೆಸ್ ಸರ್ಕಾರದ ಅಂದಿನ ಪ್ರಧಾನಮಂತ್ರಿ ಮನಮೋಹನ್‌ಸಿಂಗ್ ಅವರ ಕಾಲು ಹಿಡಿದು ಮಂಜೂರು ಮಾಡಿಸಿದ್ದೆ ಎಂದು ಹಲವು ಭಾರಿ ಸಂಸದರು ವೇದಿಕೆ ಮೇಲೆಯೇ ಹೇಳಿದ್ದಾರೆ. ಈ ಮೂಲಕ ಅವರು ಘನತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಹಿರಿಯರಿಗೆ ಅಗೌರವ ತೋರುವ ಕಾರ್ಯ ನಡೆಯಬಾರದು ಎಂದು ಎಚ್ಚರಿಸಿದರು.
ಕೋಟ್
ಕಾಸುಗೌಡ ಬಿರಾದಾರ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ