ಕಾಳುಮೆಣಸು ರೋಗಕ್ಕೆ ಸುಣ್ಣ ಬಳಕೆ ಅಗತ್ಯ: ಸತ್ಯಪ್ರಕಾಶ್

KannadaprabhaNewsNetwork |  
Published : Nov 10, 2025, 12:15 AM IST
೦೯ಬಿಎಚ್‌ಆರ್ ೧: ಬಾಳೆಹೊನ್ನೂರು ಸಮೀಪದ ಕೆಳಕೊಡಿಗೆ ಶ್ರೀನಿವಾಸ್‌ರಾವ್ ಅವರ ಕೃಷಿ ಕ್ಷೇತ್ರದಲ್ಲಿ ಕಾಳುಮೆಣಸು ಬೆಳೆ ಕಾರ್ಯಾಗಾರ ನಡೆಯಿತು. | Kannada Prabha

ಸಾರಾಂಶ

ಬಾಳೆಹೊನ್ನೂರು, ರೈತರಿಗೆ ಕಾಳುಮೆಣಸು ಬಳ್ಳಿಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದ್ದು, ಎಲ್ಲೆಡೆ ಕಾಣಿಸಿಕೊಳ್ಳುವ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಬಳ್ಳಿ ಸಾಯುವ (ವಿಲ್ಟ್) ರೋಗವನ್ನು ನಿಗದಿತ ಪ್ರಮಾಣದಲ್ಲಿ ಸುಣ್ಣ ಬಳಸುವ ಮೂಲಕ ನಿಯಂತ್ರಿಸಬಹುದು ಎಂದು ಇಂಡಿಯನ್ ಪೆಪ್ಪರ್ ಲೀಗ್ (ಐಪಿಎಲ್) ಉಪಾಧ್ಯಕ್ಷ ಸತ್ಯಪ್ರಕಾಶ್ ಹೇಳಿದರು.

ಕೆಳಕೊಡಿಗೆ ಶ್ರೀನಿವಾಸ್‌ರಾವ್ ಕೃಷಿ ಕ್ಷೇತ್ರದಲ್ಲಿ ತರಬೇತಿ ಕಾರ್ಯಾ ಗಾರ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ರೈತರಿಗೆ ಕಾಳುಮೆಣಸು ಬಳ್ಳಿಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದ್ದು, ಎಲ್ಲೆಡೆ ಕಾಣಿಸಿಕೊಳ್ಳುವ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಬಳ್ಳಿ ಸಾಯುವ (ವಿಲ್ಟ್) ರೋಗವನ್ನು ನಿಗದಿತ ಪ್ರಮಾಣದಲ್ಲಿ ಸುಣ್ಣ ಬಳಸುವ ಮೂಲಕ ನಿಯಂತ್ರಿಸಬಹುದು ಎಂದು ಇಂಡಿಯನ್ ಪೆಪ್ಪರ್ ಲೀಗ್ (ಐಪಿಎಲ್) ಉಪಾಧ್ಯಕ್ಷ ಸತ್ಯಪ್ರಕಾಶ್ ಹೇಳಿದರು. ಕೆಳಕೊಡಿಗೆ ಶ್ರೀನಿವಾಸ್‌ರಾವ್ ಅವರ ಕೃಷಿ ಕ್ಷೇತ್ರದಲ್ಲಿ ಇಂಡಿಯನ್ ಪೆಪ್ಪರ್ ಲೀಗ್ ಆಯೋಜಿಸಿದ್ದ ತರಬೇತಿ ಕಾರ್ಯಾ ಗಾರದಲ್ಲಿ ಮಾತನಾಡಿದರು. ಕಾಳುಮೆಣಸು ಬಳ್ಳಿಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗುವ ಸೂಚನೆ ಲಭಿಸುತ್ತಿದ್ದಂತೆ ಸುಮಾರು ನಾಲ್ಕು ಅಡಿ ದೂರದಲ್ಲಿ ವೃತ್ತಾಕಾರವಾಗಿ ಅಗತ್ಯಕ್ಕೆ ತಕ್ಕಂತೆ ಅರ್ಧ ಕೆಜಿಯಷ್ಟು ಸುಣ್ಣ ಹಾಕಬೇಕು. ಸುಣ್ಣ ಪಂಗಿಸೈಡ್ ಆಗಿ ಕೆಲಸ ಮಾಡುವ ಕಾರಣ ರೋಗ ಹತೋಟಿಗೆ ಬಂದು ಬಳ್ಳಿ ಬದುಕುಳಿಯುತ್ತದೆ. ಅಡಕೆಗೆ ಹಳದಿ ಎಲೆ ರೋಗ ಬಂದು ಸಂಪೂರ್ಣ ಬೆಳೆ ಕೈಕೊಟ್ಟಾಗ ಕೈ ಹಿಡಿದಿದ್ದು ಕಾಳುಮೆಣಸು. ಗಿಡದಲ್ಲಿ ಗರಿಷ್ಠ 64 ಕೆಜಿ ಹಸಿ ಕಾಳುಮೆಣಸು ಬಂದಿದೆ. ಉತ್ತಮ ಕೃಷಿ ವಿಧಾನದಿಂದ 500 ಬಳ್ಳಿಗೆ 3.5 ಟನ್ ಒಣ ಮೆಣಸು ಪಡೆದಿದ್ದೇವೆ ಎಂದರು.

ಕೃಷಿ ತಾಂತ್ರಿಕ ಸಲಹೆಗಾರ ಸುನೀಲ್ ತಮಗಾಳೆ ಮಾತನಾಡಿ, ವೈಜ್ಞಾನಿಕವಾಗಿ ಕಾಂಪೋಸ್ಟ್ ತಯಾರಿಸಿ ಸಕಾಲದಲ್ಲಿ ಗಿಡ ಗಳಿಗೆ ಗೊಬ್ಬರ ನೀಡಿದಲ್ಲಿ ಉತ್ತಮ ಫಸಲು ನಿರೀಕ್ಷಿಸಬಹುದು. ಆಯಾ ಭಾಗಕ್ಕೆ ಹೊಂದಿಕೊಳ್ಳುವ ಗಿಡಗಳನ್ನು ಆಯ್ಕೆ ಮಾಡಿ ನಾಟಿ ಮಾಡಬೇಕು. ಸಾವಯವ ವಿಧಾನದಲ್ಲಿ ಬೆಳೆದಲ್ಲಿ ವಿದೇಶಗಳಲ್ಲಿ ಬೇಡಿಕೆ ಜಾಸ್ತಿ ಇದೆ. ರೈತರು ಸಮಸ್ಯೆ ಇರುವ ತೋಟ ಗಳಿಗೆ ಹೆಚ್ಚು ಭೇಟಿ ನೀಡಿ ಅದನ್ನು ಪರಿಹರಿಸುವ ವಿಧಾನ ಕಲಿಯಬೇಕು ಎಂದರು.ರಾಷ್ಟ್ರೀಯ ಕಾಳುಮೆಣಸು ಬೆಳೆಗಾರ ಪ್ರಶಸ್ತಿ (ಐಪಿಸಿ) ವಿಜೇತ ಬೇಲೂರಿನ ಸಾಲ್ವರ ಎಸ್ಟೇಟ್ ಮಾಲೀಕ ಕೃಷ್ಣಕುಮಾರ್ ಮಾತನಾಡಿ, ಕರ್ನಾಟಕದಲ್ಲಿ ಕಾಳುಮೆಣಸು ಉತ್ತೇಜನಕ್ಕೆ ಪೆಪ್ಪರ್ ಬೋರ್ಡ್ ಸ್ಥಾಪಿಸಬೇಕು. ಕಳೆದ ಹತ್ತು ವರ್ಷಗಳಲ್ಲಿ ಎಂಟು ಟನ್ ಕಾಳುಮೆಣಸಿನಿಂದ ಆರಂಭಗೊಂಡ ಕೃಷಿ ಇಂದು 100 ಟನ್ ಬೆಳೆಯುವ ಹಂತಕ್ಕೆ ತಲುಪಿದ್ದೇನೆ. ಕಾಳುಮೆಣಸು ಯಾವತ್ತೂ ರೈತರ ಕೈ ಬಿಡೋಲ್ಲ. ಕೃಷಿಕರಿಗೆ ಕೃಷಿಯೇ ನಮ್ಮ ಸಂಸ್ಕೃತಿಯಾಗಬೇಕು ಎಂದರು.ಕೃಷ್ಣಕುಮಾರ್ ಮತ್ತು ದೊಡ್ಡಕುಳ ಎಸ್ಟೇಟ್ ಮಾಲೀಕ ನ್ಯೂಮನ್ ಆದಿಲ್ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭ ದಲ್ಲಿ ಕೃಷಿ ಯಂತ್ರಗಳ ಪ್ರಾತ್ಯಕ್ಷಿತೆ ನಡೆಯಿತು.ಐಪಿಎಲ್ ಅಧ್ಯಕ್ಷ ಎಚ್.ವಿ.ಪ್ರದೀಪ್ ಕುಮಾರ್, ಉಪಾಧ್ಯಕ್ಷ ಚಂದ್ರಶೇಖರ್ ಹೆಗ್ಡೆ, ಖಜಾಂಚಿ ಎಚ್.ಎಸ್.ಕುಮಾರಸ್ವಾಮಿ, ಕಾರ್ಯದರ್ಶಿ ಕೆ.ಪಿ.ವಿಶ್ವನಾಥ್ ನಿರ್ದೇಶಕ ಎಚ್.ಎಂ.ಚನ್ನಕೇಶವ್, ಪ್ರದೀಪ್ ಜಯಪುರ, ಕೆ.ಸಿ.ಮಧುಕುಮಾರ್, ಎಸ್.ಆರ್. ಆದರ್ಶ್, ಶ್ರೀರಂಕ್ ಹೆಗ್ಡೆ, ಸಮೀರ್ ಆದಿಲ್ ಮತ್ತಿತರರು ಹಾಜರಿದ್ದರು. - (ಬಾಕ್ಸ್)--

ಮರ ಕಾಫಿಗೆ ಬೇಡಿಕೆ ತೋಟದ ಬೇಲಿಗಳಲ್ಲಿ ಬೆಳೆಯುತ್ತಿದ್ದ ಮರ ಕಾಫಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಬಹುತೇಕ ತೋಟಗಳಲ್ಲಿ ಮರ ಕಾಫಿ ಹಣ್ಣುಗಳನ್ನು ಕೊಯಿಲು ಮಾಡದೆ ಬಿಡುವ ಕಾರಣ ಬಿದ್ದು ಹಾಳಾಗುತ್ತಿದೆ. ಆದರೆ ಅದು ಸ್ವಲ್ಪ ಕಹಿಯಾಗಿದ್ದರೂ ಕುಡಿದ ನಂತರ ನಾಲಿಗೆಯಲ್ಲಿ ರುಚಿ ಉಳಿಯುತ್ತದೆ. ಆದ್ದರಿಂದ ಮಾರುಕಟ್ಟೆಯಲ್ಲಿ ಬಹುತೇಕ ಅರೇಬಿಕಾ ಕಾಫಿಗೆ ದೊರೆಯುವ ದರವೇ ಇದಕ್ಕೂ ಸಿಗುತ್ತಿದೆ. ವಿದೇಶಗಳಲ್ಲೂ ಸಾಕಷ್ಟು ಬೇಡಿಕೆ ಇದ್ದು ಅದಕ್ಕೆ ತಕ್ಕಂತೆ ಪೂರೈಕೆ ಸಾಧ್ಯವಾಗುತ್ತಿಲ್ಲ- ಕೃಷ್ಣೇಗೌಡ,

ಕಾಫಿ ಬೆಳೆಗಾರ, ಬೇಲೂರು೦೯ಬಿಎಚ್‌ಆರ್ ೧:

ಬಾಳೆಹೊನ್ನೂರು ಸಮೀಪದ ಕೆಳಕೊಡಿಗೆ ಶ್ರೀನಿವಾಸ್‌ರಾವ್ ಅವರ ಕೃಷಿ ಕ್ಷೇತ್ರದಲ್ಲಿ ಕಾಳುಮೆಣಸು ಬೆಳೆ ಕಾರ್ಯಾಗಾರ ನಡೆಯಿತು.

PREV

Recommended Stories

ಕುಸಿದ ಮೆಕ್ಕೆಜೋಳ ಬೆಲೆ, ಆರಂಭವಾಗದ ಖರೀದಿ ಕೇಂದ್ರ
2028ಕ್ಕೆ ಪುನಃ ನಮ್ಮದೇ ಸರ್ಕಾರ: ಡಿಸಿಎಂ ಡಿ.ಕೆ. ಶಿವಕುಮಾರ್