ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಸಾವು

KannadaprabhaNewsNetwork |  
Published : Nov 26, 2023, 01:15 AM IST
ಫೋಟೋ: 25 ಹೆಚ್‌ಎಸ್‌ಕೆ 3ಮೃತ ಲೈನ್ ಮ್ಯಾನ್ ಸಿದ್ದರಾಜು ಭಾವಚಿತ್ರ. | Kannada Prabha

ಸಾರಾಂಶ

ಹೊಸಕೋಟೆ: ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಒಬ್ಬ ಮೃತಪಟ್ಟಿರುವ ಘಟನೆ ಆವಲಹಳ್ಳಿ ಬೆಸ್ಕಾಂ ವ್ಯಾಪ್ತಿಯ ಚೀಮಸಂದ್ರ ಗ್ರಾಮದಲ್ಲಿ ನಡೆದಿದೆ.

ಹೊಸಕೋಟೆ: ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಒಬ್ಬ ಮೃತಪಟ್ಟಿರುವ ಘಟನೆ ಆವಲಹಳ್ಳಿ ಬೆಸ್ಕಾಂ ವ್ಯಾಪ್ತಿಯ ಚೀಮಸಂದ್ರ ಗ್ರಾಮದಲ್ಲಿ ನಡೆದಿದೆ. ಲೈನ್ ಮ್ಯಾನ್ ಸಿದ್ದರಾಜು(40) ಮೃತಪಟ್ಟ ಬೆಸ್ಕಾಂ ನೌಕರ. ಚೀಮಸಂದ್ರ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ ಸಮಸ್ಯೆ ಇದ್ದ ಕಾರಣ ಗ್ರಾಮಸ್ಥರು ಬೆಸ್ಕಾಂ ಕಚೇರಿಗೆ ದೂರು ಸಲ್ಲಿಸಿದ್ದರು. ದೂರಿನನ್ವಯ ಲೈನ್ ಮ್ಯಾನ್ ಸಿದ್ದರಾಜ್ ಬೆಳಿಗ್ಗೆ 9 ಗಂಟೆಯಲ್ಲಿ ಗ್ರಾಮಕ್ಕೆ ತೆರಳಿ ಪರಿವರ್ತಕ ಸರಿಪಡಿಸಲು ಹೋದಾಗ ವಿದ್ಯುತ್ ಶಾಕ್ ಆಗಿ ಕೆಳಗೆ ಬಿದ್ದಿದ್ದು, ರಕ್ತಸ್ರಾವವಾಗಿ ಸ್ಥಳದಲ್ಲೆ ಸಾವನಪ್ಪಿದ್ದಾನೆ. ಇನ್ನು ಮೃತದೇಹವನ್ನು ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ರವಾನಿಸಲಾಗಿದ್ದು ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ಮಗ್‌ಶಾಟ್‌ ಫೋಟೋ ಮಾತ್ರ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಸಿಆರ್‌ಇ ಎಸ್ಪಿ, ಡಿವೈಎಸ್ಪಿ ವಿರುದ್ಧ ದಲಿತ ಇನ್ಸ್‌ಪೆಕ್ಟರ್ ಕಿರುಕುಳ ಆರೋಪ
ಈ ಬಾರಿ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಶೇ. 30-35ರಷ್ಟು ಇಳಿಮುಖ