ಯಲಬುರ್ಗಾ: ತಾಲೂಕಿನ ಲಿಂಗನಬಂಡಿ ಗುಡ್ಡದ ಮೇಲಿರುವ ಆರಾಧ್ಯ ದೇವತೆ ಶ್ರೀಹುಲಿಗೆಮ್ಮದೇವಿ ಜಾತ್ರೆ ಸಂಭ್ರಮ ಸಡಗರದಿಂದ ನಡೆಯಿತು.
ಹುಲಗಿಯಲ್ಲಿ ನಡೆಯುವ ಪ್ರಸಿದ್ಧ ಹುಲಿಗೆಮ್ಮದೇವಿ ಜಾತ್ರೆ ಮಾದರಿಯಲ್ಲಿಯೇ ಇಲ್ಲಿ ಜಾತ್ರೆ ನಡೆಯುವುದು ಈ ಭಾಗದ ವಿಶೇಷ. ಈ ಕ್ಷೇತ್ರದ ಮಹಿಮೆ ಕುರಿತು ಭಕ್ತರಲ್ಲಿ ಅಪಾರ ಭಕ್ತಿ ಇದೆ.ಆರಾಧ್ಯ ದೇವತೆ ಶ್ರೀಹುಲಿಗೆಮ್ಮದೇವಿಯ ದರ್ಶನಕ್ಕಾಗಿ ಸಾವಿರಾರು ಭಕ್ತರು ವಿವಿಧ ಜಿಲ್ಲೆಗಳಿಂದ ಆಗಮಿಸಿ ಶ್ರೀದೇವಿಗೆ ಹರಕೆ, ದೀರ್ಘದಂಡ ನಮಸ್ಕಾರ ಸಲ್ಲಿಸಿ ಪುನೀತರಾದರು.
ಮೇ ೧೨ರಂದು ಅಗ್ನಿಕೊಂಡ, ಅಕ್ಕಿ ಪಾಯಸ ಸೇರಿದಂತೆ ವಿಶೇಷ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಮೇ ೧೩ರಂದು ಸಮಾರೋಪ ಸಮಾರಂಭ ಮಹಾಮಂಗಳಾರತಿ ಹಾಗೂ ವಿವಿಧ ಪೂಜಾ ಕೈಂಕರ್ಯ ವಿಜೃಂಭಣೆಯಿಂದ ನೆರವೇರಲಿದೆ.ದೇವಿಯ ಆರಾಧಕ ಗ್ರಾಮದ ದಿ. ಮಳಿಯಪ್ಪ ಹೊಳಿಯಪ್ಪ ಚೌಡ್ಕಿ ಕುಟುಂಬದಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆಯ ಸೇವೆ ಸಲ್ಲಿಸಿದರು.