ಧಾರವಾಡ:
ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಕಾರ್ಯಾಧ್ಯಕ್ಷ ರಾಜಶೇಖರ ಬೆಳ್ಳಕ್ಕಿ ಮಾತನಾಡಿ, ಪ್ರತ್ಯೇಕ ಪಾಲಿಕೆಯಿಂದ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗಲಿದೆ. ದಾಖಲಾತಿ ತಿದ್ದುಪಡಿ ಸೇರಿದಂತೆ ಪ್ರಮುಖ ಕೆಲಸ-ಕಾರ್ಯಗಳಿಗೆ ಹುಬ್ಬಳ್ಳಿಗೆ ಹೋಗುವುದು ತಪ್ಪಿ ಸ್ಥಳೀಯವಾಗಿ ಕೆಲಸಗಳು ಶೀಘ್ರ ಆಗಲಿವೆ. ಸಮಯ ಹಾಗೂ ಹಣದ ಉಳಿತಾಯ ಆಗಲಿದೆ ಎಂದರು. ಕನ್ನಡ ನಾಡು-ನುಡಿಯ, ನಗರದ ಅಭಿವೃದ್ಧಿ ವಿಷಯವಾಗಿ ಯಾವುದೇ ಹೋರಾಟಗಳಿದ್ದರೂ ಸಂಸ್ಥೆಯು ತನು, ಮನ, ಧನದಿಂದ ಪಾಲ್ಗೊಳಲಿದೆ ಎಂದರು.
ಆಡಳಿತ ಮಂಡಳಿಯ ಜಂಟಿ ಕಾರ್ಯದರ್ಶಿ ಎಸ್.ಎಂ. ಅಗಡಿ, ಸದಸ್ಯರಾದ ಬಿ.ಎಸ್. ತಾಳಿಕೋಟಿ, ಎಂ.ಆರ್. ಇಂಡಿ, ಎ.ಎಸ್. ಹಿರೇಮಠ, ಕಚೇರಿ ಅಧೀಕ್ಷಕ ಶಿವಲಿಂಗ ನೀಲಗುಂದ, ಪ್ರಾಚಾರ್ಯ ಎಸ್.ಎಂ. ಬಮ್ಮನಗೌಡರ, ಸವಿತಾ ಪಾಟೀಲ, ಭುವನೇಶ್ವರಿ ದಂಡಿನ, ಡಿ.ಬಿ. ಹೊಂಬಳ, ಪ್ರಾಧ್ಯಾಪಕ ಅಭಿಷೇಕ ಯಮನೂರ, ಅಭಿಷೇಕ ಜಹಗೀರದಾರ, ಟಿಪ್ಪುರಾಜ, ಮಹಾಂತೇಶ ಮೂಲ್ಕಿಪಾಟೀಲ, ನಾಗರಾಜ ಗೊಂದಿ, ಕಿರಣ ಬಣಕಾರ, ಎಸ್.ಎಂ. ಹೂಗಾರ, ಸಾವಿತ್ರಿ ಪಾಟೀಲ, ಸ್ನೇಹಾ ವಾಲಗಳ್ಳಿ, ಪ್ರಭಾವತಿ ಗದಗಕರ, ಎಲ್.ಎಸ್. ತಳ್ಳಿ, ಮಹಾಂತೇಶ ಕ್ವಾಟಿ, ಸೋಮಶೇಖರ ಕರಡಿಗುಡ್ಡ, ರಾಘವೇಂದ್ರ ಗುಡೆಣ್ಣವರ, ಮೃತ್ಯುಂಜಯ ಅಮರಗೋಳ ಇದ್ದರು.