ಸ್ತ್ರೀಗೆ ಧಾರ್ಮಿಕ ಸ್ವಾತಂತ್ರ್ಯ ಕೊಡುವಲ್ಲಿ ಲಿಂಗಾಯತ ಪ್ರಥಮ

KannadaprabhaNewsNetwork |  
Published : Dec 25, 2023, 01:30 AM ISTUpdated : Dec 25, 2023, 01:31 AM IST
ಕಾರ್ಯಕ್ರಮದಲ್ಲಿ ಡಾ. ಶಿವಾನಂದ ಜಾಮದಾರ ಮಾತನಾಡಿದರು. | Kannada Prabha

ಸಾರಾಂಶ

ಎಲ್ಲ ಮಹಿಳೆಯರು ಸೇರಿ ಲಿಂಗಾಯತ ಧರ್ಮವನ್ನು ಗಟ್ಟಿಗಾಳಿಸಬೇಕು. ಲಿಂಗಾಯತ ಧರ್ಮದ ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಬೇರೆಯವರು ನೀವು ಲಿಂಗಾಯತರು ಎಂದು ಗುರುತಿಸುವಂತೆ ಜೀವನ ಸಾಗಿಸಬೇಕು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ ಹೇಳಿದರು.

- ಧಾರವಾಡ ಜಿಲ್ಲಾ ಮಹಿಳಾ ಘಟಕ ಉದ್ಘಾಟಿಸಿದ ಡಾ. ಜಾಮದಾರಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ಕೊಡುವಲ್ಲಿ ಲಿಂಗಾಯತ ಧರ್ಮ ಪ್ರಥಮವಾದುದು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ ಹೇಳಿದರು.

ಇಲ್ಲಿನ ಬಸ್‌ ನಿಲ್ದಾಣದ ಬಳಿ ಇರುವ ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾ ಧಾರವಾಡ ಜಿಲ್ಲಾ ಮಹಿಳಾ ಘಟಕ ಉದ್ಘಾಟಿಸಿ ಮಾತನಾಡಿದರು.

ಪೂಜೆ ಮಾಡಲು ಪುರುಷನಷ್ಟೆ ಸಮಾನ ಅವಕಾಶ ಮಾಡಿಕೊಟ್ಟವರು ಲಿಂಗಾಯತ ಧರ್ಮ ಸ್ಥಾಪಕ ವಿಶ್ವಗುರು ಬಸವಣ್ಣನವರು. ಅದಕ್ಕಾಗಿ ಮಹಿಳೆಯರು ಜಾಗೃತರಾಗಿ ಲಿಂಗಾಯತ ಧರ್ಮದ ಆಚರಣೆಗಳನ್ನು ಪಾಲಿಸಬೇಕು. ಮಹಿಳೆಯರು ಸ್ವಾಭಿಮಾನದಿಂದ ಲಿಂಗಾಯತರೆಂದು ಹೇಳಿಕೊಳ್ಳಬೇಕು ಎಂದರು.

ಎಲ್ಲ ಮಹಿಳೆಯರು ಸೇರಿ ಲಿಂಗಾಯತ ಧರ್ಮವನ್ನು ಗಟ್ಟಿಗಾಳಿಸಬೇಕು. ಲಿಂಗಾಯತ ಧರ್ಮದ ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಬೇರೆಯವರು ನೀವು ಲಿಂಗಾಯತರು ಎಂದು ಗುರುತಿಸುವಂತೆ ಜೀವನ ಸಾಗಿಸಬೇಕು ಎಂದರು.

ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತಾಜಿ, ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ, ಮಹಾಸಭಾದ ಧಾರವಾಡ ಜಿಲ್ಲಾಧ್ಯಕ್ಷ ಎಂ.ವಿ. ಗೊಂಗಡಶೆಟ್ಟಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ನಡಕಟ್ಟಿ ಮಾತನಾಡಿದರು.

ಬಿ.ಎಲ್. ಲಿಂಗಶೆಟ್ಟರ, ಎಸ್.ವಿ. ಕೊಟಗಿ, ಗ್ರಂಥಪಾಲಕ ಡಾ. ಸುರೇಶ ಹೊರಕೇರಿ, ಪ್ರೊ. ಜಿ.ಬಿ. ಹಳ್ಳಾಳ, ನೀಲಕಂಠ ಅಸೂಟಿ, ಬಸವಂತಪ್ಪ ತೋಟದ, ಶಂಕರ ಕೋಳಿವಾಡ, ಚೆನ್ನಪ್ಪಗೌಡರ, ಶಿವರುದ್ರಗೌಡರ, ಕಲ್ಲಪ್ಪ, ನೀಲಗಂಗಾ ಹಳ್ಳಾಳ, ರತ್ನಾ ಅಸೂಟಿ, ಸುನೀತಾ ಜೋಡಳ್ಳಿ, ನೀಲಮ್ಮ ಇನಾಮತಿ, ಶಾರದಾ ಮುರ್ಖಂಡೆ, ಶಾರದಾ ಪಾಟೀಲ, ದಾನಮ್ಮ ಕೇಂಧೂಳಿ, ಸುನಂಧ ಶಾಗೋಟಿ, ಉಮ ಹುಲಿಕಂತಿಮಠ ಸೇರಿದಂತೆ ಹಲವರಿದ್ದರು. ಡಾ. ಸ್ನೇಹಾ ಭೂಸನೂರ ಸ್ವಾಗತಿಸಿದರು. ದಾಕ್ಷಾಯಣಿ ಕೋಳಿವಾಡ ನಿರೂಪಿಸಿದರು. ಲಕ್ಷ್ಮೀ ಲಿಂಗಶೆಟ್ಟರ ವಂದಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ