ಸಂತಾಪ । ಪ್ರಗತಿಪರ ಸಂಘಟನೆಗಳ ಒಕ್ಕೂಟ-ಕೆಆರ್‌ಎಸ್ ಪಕ್ಷದಿಂದ ಶ್ರದ್ಧಾಂಜಲಿ
ನಗರದ ಚನ್ನಬಸಪ್ಪ ಸರ್ಕಲ್ ಬಳಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಕೆಆರ್‌ಎಸ್ ಪಕ್ಷದ ಸಹಯೋಗದಲ್ಲಿ ಕೆಆರ್‌ಎಸ್ ಪಕ್ಷದ ಕಾರ್ಯಾಧ್ಯಕ್ಷ ಎಚ್.ಎಸ್.ಲಿಂಗೇಗೌಡರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಉನ್ನತ ಸರ್ಕಾರಿ ಹುದ್ದೆಯನ್ನೆ ತೊರೆದು ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕಿಳಿದ ಲಿಂಗೇಗೌಡರಂತಹ ವ್ಯಕ್ತಿಗಳು ಅಪರೂಪ. ಭ್ರಷ್ಟಾಚಾರ ಮುಕ್ತ ಕರ್ನಾಟಕದ ಕನಸು ಕಟ್ಟಿ, ಅದಕ್ಕಾಗಿ ಮನಸು ಕೊಟ್ಟು ಹೋರಾಡಿದವರು. ಆದರೆ ಇತರರ ಒಳಿತಿಗಾಗಿ ಜೀವನವನ್ನೇ ಮುಡುಪಾಗಿಟ್ಟ ಲಿಂಗೇಗೌಡರ ದುರಂತ ಸಾವು ನೋವಿನ ಸಂಗತಿ ಎಂದರು.
ಕಸಾಪ ಅಧ್ಯಕ್ಷ ಶಿವಲಿಂಗಯ್ಯ ಚೀಲೂರು ಮುನಿರಾಜು, ಕಬ್ಬಾಳೇಗೌಡ, PWD ಇಂಜಿನಿಯರ್ ಶಶಿಧರ್, ವೀರೇಶ್ ಕೂ.ಗಿ.ಗಿರಿಯಪ್ಪ, ನೀಲಿ ರಮೇಶ್, ಸ್ಟುಡಿಯೋ ಚಂದ್ರು, ಕನ್ನಡ ಭಾಸ್ಕರ್, ನಟರಾಜ್, ಜೀವನ್ ಕೆಆರ್‌ಎಸ್ ಪಕ್ಷದ ಶಿವಮ್ಮ. ತಾಮಸಂದ್ರ ಕಿರಣ್, ಶೋಭಾ, ಅಸ್ಗರ್ ಖಾನ್, ಚೀರಣಗುಪ್ಪೆ ರಾಜೇಶ್, ಮಿಲ್ಟ್ರಿ ರಾಮಣ್ಣ, ಮಿಲ್ಟ್ರಿ ದೇವರಾಜು, ಪುಟ್ಟಲಿಂಗಯ್ಯ, ಸಾಸಲಾಪುರ ಜಗದೀಶ್ ಇತರರಿದ್ದರು.