ನದಿಗಳ ಜೋಡಣೆಯಿಂದ ದೇಶ ಸಂಪತ್ಭರಿತವಾಗಲು ಸಾಧ್ಯ: ರಾಜಶೇಖರ

KannadaprabhaNewsNetwork |  
Published : Nov 16, 2026, 02:15 AM IST
ಪೋಟೊಹುಲಿಗಿ ಗ್ರಾಮದಲ್ಲಿ ಸ್ವಯಂಸೇವಕರ ಪಥ ಸಂಚಲನ ನಡೆಯಿತು. | Kannada Prabha

ಸಾರಾಂಶ

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಒಂದು ವರ್ಷದ ಆನಂತರ ಇಸ್ರೇಲ್‌ಗೆ ಸ್ವಾತಂತ್ರ್ಯ ಸಿಕ್ಕಿದೆ. ಆ ದೇಶದಲ್ಲಿ ಒಂದು ನದಿ ಸಹ ಇಲ್ಲ, ಮಳೆಯಂತೂ ಆಗುವುದಿಲ್ಲ, ಕೃಷಿಗಾಗಿ ಫಲವತ್ತಾದ ಮಣ್ಣು ಸಹ ಇಲ್ಲ.

ಮುನಿರಾಬಾದ್: ನದಿಗಳ ಜೋಡಣೆಯಿಂದ ನಮ್ಮ ದೇಶವು ಸಂಪತ್ಭರಿತವಾಗಿ ಹೊರಹೊಮ್ಮಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾದ ರಾಜಶೇಖರ ಹೇಳಿದರು.

ಹುಲಿಗಿ ಗ್ರಾಮದಲ್ಲಿ ಶನಿವಾರ ಸ್ವಯಂಸೇವಕರ ಪಥ ಸಂಚಲನದ ನಂತರ ಸ್ವಯಂಸೇವಕರು ಹಾಗೂ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಒಂದು ವರ್ಷದ ಆನಂತರ ಇಸ್ರೇಲ್‌ಗೆ ಸ್ವಾತಂತ್ರ್ಯ ಸಿಕ್ಕಿದೆ. ಆ ದೇಶದಲ್ಲಿ ಒಂದು ನದಿ ಸಹ ಇಲ್ಲ, ಮಳೆಯಂತೂ ಆಗುವುದಿಲ್ಲ, ಕೃಷಿಗಾಗಿ ಫಲವತ್ತಾದ ಮಣ್ಣು ಸಹ ಇಲ್ಲ. ಆ ದೇಶದ ಸುತ್ತಮುತ್ತ ಶತ್ರುಗಳೇ ಇದ್ದಾರೆ. ಇಷ್ಟೊಂದು ಸವಾಲುಗಳ ನಡುವೆ ಇಸ್ರೇಲ್ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಕಾರಣ ಆ ದೇಶದ ಜನರಲ್ಲಿರುವ ಅಪಾರ ದೇಶಭಕ್ತಿ ಎಂದರು.

ನಮ್ಮ ದೇಶದ ಮಣ್ಣು ಅತ್ಯಂತ ಫಲಕಾರಿಯಾಗಿದೆ. ನಮ್ಮ ದೇಶದ ರೈತರು ಅತ್ಯಂತ ಶ್ರಮಜೀವಿಗಳು. ನಮ್ಮ ದೇಶದಲ್ಲಿ ಅನೇಕ ನದಿಗಳು ಹರಿಯುತ್ತಿವೆ. ಆದರೆ ದೇಶದ ಒಂದು ಪ್ರದೇಶದಲ್ಲಿ ನೀರು ಸಮೃದ್ಧವಾಗಿದ್ದರೆ, ಇನ್ನೊಂದು ಕಡೆ ನೀರಿನ ಕೊರತೆ ಇದೆ. ಇದನ್ನು ಗಮನಿಸಿದ ಹಿಂದಿನ ಪ್ರಧಾನಿ ಡಾ. ಅಟಲ್ ಬಿಹಾರಿ ವಾಜಪೇಯಿ ನದಿ ಜೋಡಣೆ ಕಾರ್ಯಕ್ಕೆ ಮುಂದಾದರು. ನದಿ ಜೋಡಣೆ ಕಾರ್ಯದಿಂದ ನಮ್ಮ ದೇಶದ ಶೇ. 80 ಭೂಮಿ ಕೃಷಿಗೆ ಯೋಗ್ಯವಾಗುತ್ತದೆ ಎಂದರು.

ಸಂಕಷ್ಟದಲ್ಲಿರುವ ಜನರ ಕಷ್ಟಕ್ಕೆ ಸ್ಪಂದಿಸುವುದು ಸಂಘ ಪರಿವಾರದ ಆದ್ಯತೆಯಾಗಿದೆ ಎಂದು ಸಂಘ ಪ್ರಚಾರಕ ರಾಜಶೇಖರ್ ಹೇಳಿದರು.

ಮಾತಂಗಪ್ಪ ದೊಡ್ಮನಿ, ಡಾ. ಬಸವರಾಜ ಕ್ಯಾವಟರ್, ರಮೇಶ್ ವೈದ್ಯ, ಪ್ರಭುರಾಜ್ ಪಾಟೀಲ್, ಮಾರ್ಕಂಡಪ್ಪ ಉಪಸ್ಥಿತರಿದ್ದರು.

ಪ್ರಸಿದ್ಧ ಹುಲಿಗೆಮ್ಮ ದೇವಸ್ಥಾನದಿಂದ ಪ್ರಾರಂಭವಾದ ಪಥ ಸಂಚಲನ ಹುಲಿಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ತೆರಳುತ್ತಿದ್ದಂತೆ ಗ್ರಾಮಸ್ಥರು ಸ್ವಯಂಸೇವಕರ ಮೇಲೆ ಪುಷ್ಪ ಮಳೆ ಸುರಿಸುವ ಮೂಲಕ ಅಭಿಮಾನ ತೋರಿಸಿದರು. ಗ್ರಾಮದ ಮನೆಗಳನ್ನು ರಂಗೋಲಿ ಹಾಗೂ ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು.

200ಕ್ಕೂ ಅಧಿಕ ಜನ ಸ್ವಯಂ ಸೇವಕರು ಪಥ ಸಂಚಲನದಲ್ಲಿ ಭಾಗವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವಕರಲ್ಲಿ ದೇಶಪ್ರೇಮ, ಸಾಮಾಜಿಕ ಹೊಣೆ ಮೇಳೈಸಲಿ
ಹಿಂದೂ ಅಲ್ಪ ಸಂಖ್ಯಾತರಾದರೆ ಅಪಾಯ ಕಟ್ಟಿಟ್ಟ ಬುತ್ತಿ: ಕೃಷ್ಣಾನಂದ ಕಾಮತ್‌