ಕನ್ನಡಪ್ರಭ ವಾರ್ತೆ, ವಿಧಾನ ಪರಿಷತ್ತು
ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ ಪ್ರಶ್ನೆಗೆ ಉತ್ತರಿಸಿದ ಅವರು, ಸಾರಾಯಿ ನಿಷೇಧ ಸಂದರ್ಭದಲ್ಲಿ 45 ಸಾವಿರಕ್ಕೂ ಹೆಚ್ಚು ಜನರು ನಿರುದ್ಯೋಗಿಗಳಾದರು. ಸುವರ್ಣ ಕಾಯಕ ಯೋಜನೆಯಡಿಯಲ್ಲಿ ಆಗ ಪುನರ್ವಸತಿ ಕಲ್ಪಿಸುವ ಯೋಜನೆ ರೂಪಿಸಿದರೂ ಪ್ರಯೋಜನವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅವಲಂಬಿತ ಮಕ್ಕಳಿಗಾದರೂ ಎಂಎಸ್‌ಐಎಲ್ ಘಟಕಗಳ ಹಂಚಿಕೆಯಲ್ಲಿ ಆದ್ಯತೆ ನೀಡುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸುವೆ ಎಂದರು.
1946-47ರಿಂದ 2023ರ ಮಾರ್ಚ್ 31ರವರೆಗೆ 608 ಕೋಟಿ ರು. ಅಬಕಾರಿ ಕಂದಾಯ ಬಾಕಿ ಇದೆ. ಇದರಲ್ಲಿ ಅಸಲು 169.53 ಕೋಟಿ ರು., ಬಡ್ಡಿ 438.35 ಕೋಟಿ ರು. ಬಾಕಿ ಇದೆ. ಬಾಕಿದಾರರು ಮತ್ತು ಅವರ ವಾರಸುದಾರರ ಚರ ಮತ್ತು ಸ್ಥಿರಾಸ್ತಿಗಳನ್ನು ಪತ್ತೆ ಹಚ್ಚಿ ಭೂ ಕಂದಾಯ ಕಾಯ್ದೆಯಂತೆ ಕ್ರಮಕೈಗೊಳ್ಳಲಾಗಿದೆ. ಇದನ್ನು ಪ್ರಶ್ನಿಸಿ ಕೆಲವು ಬಾಕಿದಾರರು ಮತ್ತು ಅವರ ವಾರಸುದಾರರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದು, ಸದರಿ ಪ್ರಕರಣಗಳಲ್ಲಿ ಬಾಕಿ ವಸೂಲಾತಿಯು ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಿದೆ. ಸರ್ಕಾರ ಈ ಹಿಂದೆ ನಾಲ್ಕು ಬಾರಿ ಕರಸಮಾಧಾನ ಯೋಜನೆ ಜಾರಿಗೆ ತಂದಿದ್ದು, ಈ ಅವಧಿಯಲ್ಲಿ 107.05 ಕೋಟಿ ರು. ವಸೂಲಾಗಿದೆ ಎಂದು ಸಚಿವರು ವಿವರಿಸಿದರು.