ಲಕ್ಷ್ಮೇಶ್ವರ: ಶ್ರಾವಣ ಮಾಸದ ಪರ್ಯಂತ ದೇವರ ನಾಮಸ್ಮರಣೆ ಮಾಡುವುದರಿಂದ ಹಾಗೂ ಪುರಾಣ ಪ್ರವಚನ ಆಲಿಸುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಮೈಸೂರ ಹಾಗೂ ಬನ್ನಿಕೊಪ್ಪದ ಜಪದಕಟ್ಟಿಮಠದ ಸುಜ್ಞಾನ ದೇವ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಶ್ರಾವಣ ಮಾಸವು ಹಿಂದೂಗಳ ಪಾಲಿಗೆ ಪವಿತ್ರ ಮಾಸವಾಗಿದೆ.ಶ್ರಾವಣ ಮಾಸದಲ್ಲಿ ಶರಣರ ಪುಣ್ಯ ಪುರುಷರ ಮಹಿಮೆ ಕೇಳುವು ಮೂಲಕ ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನಮ್ಮ ಜೀವನ ಪಾವನವಾಗುತ್ತದೆ. ತಾಯಿ ಪಾರ್ವತಿ ಮಕ್ಕಳ ಬಳಗದ ಸಂಸ್ಥೆ ಮಹಿಳೆಯರು ಕಟ್ಟಿ ಬೆಳೆಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಕಳೆದ ಹಲವು ದಶಕಗಳಿಂದ ಇಲ್ಲಿ ಪುರಾಣ ಪ್ರವಚನ ನಡೆಸುತ್ತಿದ್ದು ಈ ಮುಖಾಂತರ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ, ಇಲ್ಲಿ ಪಾಠದ ಜತೆಗೆ, ನೀತಿ ಶಿಕ್ಷಣ ಬೋಧನೆ ನಡೆಯುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷೆ ಸುವರ್ಣಬಾಯಿ ಬಹಾದ್ದೂರ ದೇಸಾಯಿ ವಹಿಸಿದ್ದರು.ಈ ಸಂದರ್ಭದಲ್ಲಿ ಜಯಲಕ್ಷ್ಮಿಮಹಾಂತಶೆಟ್ಟರ, ರೋಹಿಣಿ ಬಹಾದ್ದೂರ ದೇಸಾಯಿ, ಶಾರಕ್ಕ ಮಹಾಂತಶೆಟ್ಟರ, ಲಲಿತಕ್ಕ ಕೇರಿಮನಿ, ರೂಪಾ ನವಲೆ, ಜೆ.ಡಿ.ಲಮಾಣಿ, ಮೃತ್ಯುಂಜಯ ಹಿರೇಮಠ, ವಿಜಯಕುಮಾರ ಬಿಳಿಎಲಿ, ಶರಣಪ್ಪ ಅಣ್ಣಿಗೇರಿ, ಸೋಮಯ್ಯ ವೀರಕ್ತಮಠ, ಹನುಮಂತಪ್ಪ ಭಜಂತ್ರಿ, ಸ್ವಾತಿ ಪೈ, ವೀಣಾ ಜಾಮನೂರ, ಕಾವ್ಯ ದೇಸಾಯಿ ಇದ್ದರು.
ಜು. 30ರಿಂದ ಅಗಸ್ಟ 24ರವರೆಗೆ ದಿನನಿತ್ಯ ಮದ್ಯಾಹ್ನ3 ರಿಂದ 5 ಗಂಟೆ ವರೆಗೆ ಪುರಾಣ ಪ್ರವಚನ ನಡೆಯಲಿದ್ದು, ಪ್ರಭುಗೌಡ ಹ ಯಕ್ಕಿಕೊಪ್ಪ ಪುರಾಣ ಪ್ರವಚನ ಮಾಡಲಿದ್ದಾರೆ. ಈ ವೇಳೆ ಜ್ಯೋತಿ ಅರಳಿಕಟ್ಟಿ ಜಗದೀಶ ಶಿರಹಟ್ಟಿ ಕಾರ್ಯಕ್ರಮ ನಿರ್ವಹಿಸಿದರು.