ಮಿಡ್ಲ್‌ ಕೆಳಗೆ.. ವ್ಯಸನಮುಕ್ತ ಬದುಕಿಗಾಗಿ ವಚನ ಶ್ರವಣ ಇಂದಿನಿಂದ

KannadaprabhaNewsNetwork |  
Published : Aug 13, 2026, 01:30 AM IST
12ಕೆಪಿಎಸ್ಎನ್ಡಿ1: ಕರೇಗೌಡ ಕುರುಕುಂದಿ | Kannada Prabha

ಸಾರಾಂಶ

Karegowda Kurukundi, President of the Basava Kendra, announced that a month-long program titled ‘Vachana Shravana for an Addiction-Free Life’ (Vachana Shravana-2026) has been organized from October 13 to September 13 under the joint auspices of the local Basava Kendra, Mahila Basava Kendra, Basava Charitable Trust, and various Basava-oriented organizations.

-ಅ.13ರಿಂದ ಸೆ.13ರ ವರೆಗೆ ‘ವ್ಯಸನ ಮುಕ್ತ ಬದುಕಿಗಾಗಿ ವಚನ ಶ್ರವಣ’-2026 ಕಾರ್ಯಕ್ರಮ

--

ಕನ್ನಡಪ್ರಭ ವಾರ್ತೆ ಸಿಂಧನೂರು

ಸ್ಥಳೀಯ ಬಸವಕೇಂದ್ರ, ಮಹಿಳಾ ಬಸವ ಕೇಂದ್ರ, ಬಸವ ಚಾರಿಟೇಬಲ್ ಟ್ರಸ್ಟ್ ಮತ್ತು ವಿವಿಧ ಬಸವಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಅ.13ರಿಂದ ಸೆ.13ರ ವರೆಗೆ ಒಂದು ತಿಂಗಳ ಕಾಲ ‘ವ್ಯಸನ ಮುಕ್ತ ಬದುಕಿಗಾಗಿ ವಚನ ಶ್ರವಣ’-2026 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಸವಕೇಂದ್ರದ ಅಧ್ಯಕ್ಷ ಕರೇಗೌಡ ಕುರುಕುಂದಿ ಹೇಳಿದರು.

ಅವರು ಬುಧವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದರು. ಯುವ ಸಮುದಾಯ ಹಲವು ಬಗೆಯ ವ್ಯಸನಗಳಿಂದ ಬದುಕನ್ನ ಹಾಳು ಮಾಡಿಕೊಳ್ಳುತ್ತಿರುವ ಸಂಗತಿಗಳು ಪ್ರತಿನಿತ್ಯ ನಡೆಯುತ್ತಿವೆ. ಇದರ ದುಷ್ಪರಿಣಾಮದಿಂದ ಸಮಾಜದಲ್ಲಿ ಸಂಕಟಗಳು ತಲೆದೋರುತ್ತಿವೆ.

ಕುಟುಂಬದ ಮುಖ್ಯಸ್ಥ ವ್ಯಸನಕ್ಕೆ ಬಲಿಯಾಗಿ ಮೃತಪಟ್ಟರೆ ಅವರಿಂದ ಇಡೀ ಕುಟುಂಬ ಕಷ್ಟಕೋಟಲೆಯಲ್ಲಿ ಮುಳುಗುತ್ತದೆ. ಕೆಟ್ಟ ಹವ್ಯಾಸಗಳು ಒಂದು ಕಡೆಯಾದರೆ, ಸಮಾಜದಲ್ಲಿ ಮೌಢ್ಯತೆ, ಶ್ರೀಮಂತಿಕೆಯ ವ್ಯಾಮೋಹ, ಅಸಹಾಯಕರ ಮೇಲೆ ದಬ್ಬಾಳಿಕೆಗಳು ನಡೆಯುತ್ತಿವೆ. ಇಂತಹ ಅಮಾನವೀಯ ವರ್ತನೆಗಳನ್ನು ದೂರ ಮಾಡಿ ಸದ್ಭಾವದ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ವಚನ ಶ್ರವಣ ಕಾರ್ಯಕ್ರಮ ಮಾಡುತ್ತಿರುವುದಾಗಿ ವಿವರಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಪ್ಪ ಕುರುಕುಂದಿ ಮಾತನಾಡಿ ಅಂತರAಗದ ಪ್ರಜ್ಞೆಯನ್ನು ವಿಸ್ತರಿಸುವುದರಿಂದ ದೇವ ಸ್ವರೂಪವಾಗಿ ಸೂಕ್ತವಾಗಿ ಅಡಗಿರುವ ಆತ್ಮಭಾವ ಅನಾವರಣಗೊಳ್ಳುತ್ತದೆ. ಆ ಮೂಲಕ ಸಹೋದರತೆ, ಭಾತೃತ್ವ ಮತ್ತು ಸೌಹಾರ್ದತೆಯನ್ನು ಬೆಳೆಸಲು ವಚನ ಶ್ರವಣ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಹೇಳಿದರು.

ಏಕ ದೋವೋಪಾಸನೆ, ಕಾಯಕ ನಿಷ್ಠೆ, ದಾಸೋಹ ಮತ್ತು ಅಷ್ಟಾವರಣಗಳ ಕುರಿತು ಒಂದು ತಿಂಗಳು ನಡೆಯುವ ವಚನ ಶ್ರವಣದಲ್ಲಿ ಚಿಂತನ-ಮಂತನ ಮಾಡುವುದಾಗಿ’ ಮುಖಂಡ ಬಸವಲಿಂಗಪ್ಪ ಬಾದರ್ಲಿ ಹೇಳಿದರು.

ಬಸವ ಕೇಂದ್ರ ಮುಖಂಡರಾದ ಹೆಚ್.ಜಿ.ಹಂಪಣ್ಣ, ಗುಂಡಪ್ಪ ಬಳಿಗಾರ, ಚಂದ್ರೇಗೌಡ ಹರೇಟನೂರು, ಅಮರೇಶ ಪಗಡದಿನ್ನಿ, ಚಂದ್ರುಗೌಡ ಚನ್ನಳ್ಳಿ ಉಪಸ್ಥಿತರಿದ್ದರು.

--------

12ಕೆಪಿಎಸ್ಎನ್ಡಿ1: ಕರೇಗೌಡ ಕುರುಕುಂದಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೀಮನ ಅಮಾವಾಸ್ಯೆ: ಶಕ್ತಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ
ಸ್ತ್ರೀಯರಿಂದ ದೇಶಕ್ಕೆ ಕೊಡುಗೆ: ಶಿವಯೋಗೀಶ್ವರ ಶ್ರೀ