ಸಾಹಿತ್ಯ ಬಾಡಲಾರದ ಹೂವು ಇದ್ದಂತೆ

KannadaprabhaNewsNetwork |  
Published : Sep 03, 2025, 01:02 AM IST
ಅಥಣಿಯ ಕವಿ, ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಸಾಹಿತಿ ಅಪ್ಪಾಸಾಹೇಬ ಅಲಿಬಾದಿ  ರಚಿಸಿದ ಪ್ರೇಮೋಲ್ಲಾಸ ಮತ್ತು ಹೈಕು ಹಂದರ ಗ್ರಂಥ ಲೋಕಾರ್ಪಣೆ ಮಾಡಲಾಯಿತು.  | Kannada Prabha

ಸಾರಾಂಶ

ಸಾಹಿತ್ಯ ಬಾಡಲಾರದ ಹೂವು ಇದ್ದಂತೆ. ಸಾಹಿತಿಗಳು ಎಲ್ಲರ ಪ್ರೀತಿಗೆ ಪಾತ್ರರಾಗಬೇಕು ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಸಾಹಿತ್ಯ ಬಾಡಲಾರದ ಹೂವು ಇದ್ದಂತೆ. ಸಾಹಿತಿಗಳು ಎಲ್ಲರ ಪ್ರೀತಿಗೆ ಪಾತ್ರರಾಗಬೇಕು ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಹೇಳಿದರು.ಪಟ್ಟಣದ ಗುಜರಾತ ಮಂಗಲ ಕಾರ್ಯಾಲಯದಲ್ಲಿ ಅಲಿಬಾದಿ ಫೌಂಡೇಶನ್‌, ವಿನೂತನ ಪ್ರಕಾಶನ, ವಿನೂತನ ವಿಚಾರ ವೇದಿಕೆ, ಅಥಣಿ ಹಿರಿಯ ನಾಗರಿಕರ ವೇದಿಕೆ ಸಂಯುಕ್ತಾಶ್ರಯದಲ್ಲಿ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭದ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಸಾಹಿತಿ ಅಪ್ಪಾಸಾಹೇಬ ಅಲಿಬಾದಿಯವರ 65ನೇ ಹುಟ್ಟು ಹಬ್ಬದ ನಿಮಿತ್ತ ಅಲಿಬಾದಿ ರಚಿಸಿದ ಪ್ರಮೋಲ್ಲಾಸ ಮತ್ತು ಹೈಕು ಹಂದರ ಹಾಗೂ ಕವಿ ನೀರಾ ಗೋಣಿಯವರ ಹನಿ ಹನಿ ದನಿ ಮತ್ತು ಭಾವ ನಾವೆ ಗ್ರಂಥಗಳನ್ನು ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತಿಯಾದವರು ಮೊದಲು ಎಲ್ಲರನ್ನು ಪ್ರೀತಿಸುವುದನ್ನು ಕಲಿಯಬೇಕು. ಸಾಮೂಹಿಕ ಹೊಣೆಗಾರಿಕೆ ನಮ್ಮೆಲ್ಲರಿಗೆ ಆದರ್ಶವಾಗಬೇಕು. ಮಾನವೀಯ ಮೌಲ್ಯಗಳನ್ನು ಹಂಬಲಿಸಿ ಸಾಹಿತ್ಯ ಮತ್ತು ಕವಿತೆಗಳನ್ನು ರಚಿಸಬೇಕು ಎಂದು ಸಲಹೆ ನೀಡಿದರು.ಧಾರವಾಡದ ಹಿರಿಯ ಸಾಹಿತಿ ಡಾ.ವೈ.ಎಂ.ಯಾಕೊಳ್ಳಿ ಮಾತನಾಡಿ, ಕವಿ ಅಪ್ಪಾಸಾಹೇಬ ಅಲಿಬಾದಿ ಅವರು 26ಕ್ಕೂ ಅಧಿಕ ಚುಟುಕು ಕವನ ಸಂಕಲನಗಳನ್ನು ರಚಿಸಿದ್ದಾರೆ. 456 ಹೈಕುಗಳನ್ನು ಇಂದು ಗ್ರಂಥ ರೂಪದಲ್ಲಿ ನಮಗೆ ಒದಗಿಸಿದ್ದಾರೆ. ಅವರ ಕಾವ್ಯಗಳಲ್ಲಿ ಪ್ರೀತಿ, ಮಾನವೀಯ ಮೌಲ್ಯಗಳು ಎದ್ದು ಕಾಣುತ್ತವೆ. ಅವರು ತಮ್ಮ ಪ್ರೇಮೋಲ್ಲಾಸ ಗ್ರಂಥದಲ್ಲಿ ದಾಂಪತ್ಯದ ಕುರಿತು-ಸ್ವರ್ಗ ಸಿದ್ಧಿ ಪಡೆಯಲು ದಾಂಪತ್ಯ ಸಿದ್ದಿಯೇ ಸೋಪಾನ, ಕಾರಣ ಕಣ್ಣಿಟ್ಟು ಕಾಪಾಡಬೇಕು ದಾಂಪತ್ಯ ಸಂಬಂಧ ಜೋಪಾನ ಎಂಬ ಚುಟುಕು ಸಾಹಿತ್ಯ ಪ್ರೀತಿ ಪ್ರೇಮವನ್ನು ಅಭಿವ್ಯಕ್ತಪಡಿಸುತ್ತದೆ. ಅವರಿಂದ ಇನ್ನಷ್ಟು ಇಂತಹ ಪ್ರೇಮಮಯ ಕಾವ್ಯಗಳು ಹೊರಹೊಮ್ಮಲಿ ಎಂದು ಶುಭಹಾರೈಸಿದರು.ಕವಲಗುಡ್ಡ ಅಮರೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿ, ಕನ್ನಡ ನಾಡಿನ ಗಡಿಭಾಗದಲ್ಲಿ ಕನ್ನಡ ಸಾಹಿತ್ಯ ಗಟ್ಟಿಗೊಳಿಸುತ್ತಿರುವ ಕಾಯಕದಲ್ಲಿ ಅಪ್ಪಾಸಾಹೇಬ ಅಲಿಬಾದಿ ದಂಪತಿ ಸೇವೆ ದೊಡ್ಡದು. ಅಲಿಬಾದಿ ದಂಪತಿಯಿಂದ ಸಾಹಿತ್ಯ ಲೋಕಕ್ಕೆ ಇನ್ನೂ ನೂರಾರು ಕೃತಿಗಳು ಬೆಳಕು ಕಾಣಲಿ ಎಂದು ಆಶೀರ್ವದಿಸಿದರು.ಕವಿ ಅಪ್ಪಾಸಾಹೇಬ ಅಲಿಬಾದಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿನೂತನ ಪ್ರಕಾಶನ ಮತ್ತು ವಿನೂತನ ವಿಚಾರ ವೇದಿಕೆಯ ಮೂಲಕ ಕಳೆದ 33 ವರ್ಷಗಳಿಂದ ನಾಡಿನ ವಿವಿಧ ಲೇಖಕರ 38 ಕೃತಿ ಕುಸುಮಗಳನ್ನು ಪ್ರಕಟಿಸಿದ್ದೇವೆ. ಅನೇಕ ಚಿಂತನ ಗೋಷ್ಠಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದೇವೆ ಎಂದರು.ಈ ಸಂದರ್ಭದಲ್ಲಿ ಕವಿ ನೀರಾ ಗೋಣಿ, ಸಾಹಿತಿ ದೇವೇಂದ್ರ ಬಿಸ್ವಾಗರ, ಭರತ್ ಸೋಮಯ್ಯ, ಸಾಹಿತಿ ಭಾರತಿ ಅಲಿಬಾದಿ ಮಾತನಾಡಿದರು. ಈ ಸಂದರ್ಭದಲ್ಲಿ 65ನೇ ವಸಂತಕ್ಕೆ ಕಾಲಿರಿಸಿದ ಕವಿ ಅಪ್ಪಾಸಾಹೇಬ ಅಲಿಬಾದಿ ದಂಪತಿಯನ್ನು ಅಭಿಮಾನಿ ಸಾಹಿತಿಗಳು ಸನ್ಮಾನಿಸಿ, ಅಭಿನಂದಿಸಿದರು. ಕನ್ನಡಪ್ರಭದಲ್ಲಿ ಪ್ರಕಟಗೊಂಡ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಸಾಹಿತಿ ಅಪ್ಪಾಸಾಹೇಬ ಮತ್ತು ಭಾರತಿ ಅಲಿಬಾದಿ ಕುರಿತು ಪ್ರಕಟಗೊಂಡ ವಿಶೇಷ ಲೇಖನದ ಪುಟವನ್ನು ವೇದಿಕೆಯಲ್ಲಿ ಬಿಡುಗಡೆಗೊಳಿಸಲಾಯಿತು.ಈ ವೇಳೆ ಎಂ.ಎನ್.ಚಿಂಚೋಳಿ, ಬಿ.ಎಂ.ಮುಜಾವರ, ಎಸ್.ಎಸ್.ಹೂಟಿ, ಎಸ್.ಎಸ್.ಗೊರಜನಾಳ, ಜಯಶ್ರೀ ಪೂಜಾರಿ, ವಿದ್ಯಾ ಹಿರೇಮಠ, ಶಶಿಕಲಾ ಹರತಿ, ಜಯಶ್ರೀ ತೊದಲಬಾಗಿ, ಎಸ್.ಕೆ.ಹೊಳೆಪ್ಪನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಪ್ಪಾಸಾಹೇಬ ಅಲಿಬಾದಿ ಸ್ವಾಗತಿಸಿದರು. ಡಾ.ಕುಮಾರ ತಳವಾರ ನಿರೂಪಿಸಿದರು. ಭಾರತಿ ಅಲಿಬಾದಿ ವಂದಿಸಿದರು.ಸತಿ-ಪತಿಗಳಿಬ್ಬರೂ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿರುವುದು ಒಳ್ಳೆಯ ಬೆಳವಣಿಗೆ. ವೃತ್ತಿಯಲ್ಲಿ ವಿಮಾ ಕಂಪನಿಯ ಅಧಿಕಾರಿಯಾಗಿ, ಪ್ರವೃತ್ತಿಯಲ್ಲಿ ಕವಿಯಾಗಿ ಸಾಹಿತಿಯಾಗಿ ಕೆಲಸ ಮಾಡುತ್ತಿದ್ದಾರೆ.

-ಕವಲಗುಡ್ಡ ಅಮರೇಶ್ವರ ಮಹಾರಾಜರು.

ಕಾವ್ಯ ರಚನೆಯಲ್ಲಿ ಅಪ್ಪಾಸಾಹೇಬ ಅಲಿಬಾದಿ ಅವರು ದೊಡ್ಡ ಹೆಸರು ಮಾಡಿದ್ದಾರೆ. ಅವರಿಂದ ಇನ್ನಷ್ಟು ಉತ್ಕೃಷ್ಟವಾದ ಕಾವ್ಯಗಳು, ಚುಟುಕು ಸಾಹಿತ್ಯ ಹೊರಬರಲಿ.

-ಡಾ.ಬಾಳಾಸಾಹೇಬ ಲೋಕಾಪುರ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ.ಕನ್ನಡ ನಾಡಿನ ಶ್ರೇಷ್ಠ ಚುಟುಕು ಸಾಹಿತ್ಯ ಮತ್ತು ಕಾವ್ಯಗಳನ್ನು ರಚಿಸುವ ಬಹುದೊಡ್ಡ ಕವಿಗಳಲ್ಲಿ ಅಪ್ಪಾಸಾಹೇಬ ಅಲಿಬಾದಿ ಒಬ್ಬರು. ನಾಡಿನ ಸಾಹಿತ್ಯ ಲೋಕಕ್ಕೆ ಅನೇಕ ಚುಟುಕು, ಕವನ ಸಂಕಲನಗಳನ್ನು ಕೊಡುಗೆ ನೀಡಿದ್ದಾರೆ. ಇಂದು ಪ್ರೇಮೊಲ್ಲಾಸ ಕವನ ಸಂಕಲನ ರಚಿಸುವ ಮೂಲಕ ನಮ್ಮ ನಿಮ್ಮೆಲ್ಲರ ಪ್ರೇಮಕವಿ ಎನಿಸಿಕೊಂಡಿದ್ದಾರೆ.

-ಡಾ.ವೈ.ಎಂ.ಯಾಕೊಳ್ಳಿ, ಧಾರವಾಡದ ಹಿರಿಯ ಸಾಹಿತಿ.ಬೆಂಕಿ ನಂದಿಸಲು ನೀರು ಬೇಕು, ವೈರಿಯನ್ನು ಗೆಲ್ಲಲು ಪ್ರೀತಿಗೆ ಸಾಕು ಎಂಬಂತೆ ಇಂದು ನನ್ನ ಹುಟ್ಟು ಹಬ್ಬದ ಸಂದರ್ಭದಲ್ಲಿ ಪ್ರೇಮೋಲ್ಲಾಸ ಮತ್ತು ಹೈಕು ಹಂದರ ಗ್ರಂಥ ಲೋಕಾರ್ಪಣೆ ಆಗಿರುವುದು ನನಗೆ ಸಂತಸ ತಂದಿದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲ ಅತಿಥಿಗಳಿಗೆ ಮತ್ತು ಅಭಿಮಾನಿಗಳಿಗೆ ಅಭಿನಂದಿಸುತ್ತೇನೆ.

-ಅಪ್ಪಾಸಾಹೇಬ ಅಲಿಬಾದಿ,

ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭದ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತರು.

1ಅಥಣಿ01

ಅಥಣಿಯ ಕವಿ, ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಸಾಹಿತಿ ಅಪ್ಪಾಸಾಹೇಬ ಅಲಿಬಾದಿ ರಚಿಸಿದ ಪ್ರೇಮೋಲ್ಲಾಸ ಮತ್ತು ಹೈಕು ಹಂದರ ಗ್ರಂಥ ಲೋಕಾರ್ಪಣೆ ಮಾಡಲಾಯಿತು.

PREV

Recommended Stories

ಜಾಗತಿಕ ಮಟ್ಟದಲ್ಲಿ ಸಾಧನೆ ನಾರಿ ಶಕ್ತಿಗೆ ಸಾಕ್ಷಿ
ಮಕ್ಕಳ ಕಲಿಕೆಯನ್ನು ಸೃಜನಾತ್ಮಕವಾಗಿಸಲು ನಲಿ-ಕಲಿ