ಸಿದ್ಧಾರೂಢರ ಸದ್ವಿಚಾರ ಅರಿತುಕೊಂಡು ಬಾಳಿ: ಶಿವಕುಮಾರ ಶಾಸ್ತ್ರಿ

KannadaprabhaNewsNetwork |  
Published : Aug 16, 2026, 03:45 AM IST
ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಸದ್ಗುರು ಶ್ರೀಸಿದ್ಧಾರೂಢ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಸಿದ್ಧಾರೂಢ ಕಲ್ಪದ್ರುಮ ಪುರಾಣ ಪ್ರವಚನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಭಕ್ತರು ಸಿದ್ಧಾರೂಢ ಸ್ವಾಮೀಜಿಯವರ ಜೀವನದ ಉತ್ತಮ ವಿಚಾರಗಳನ್ನು ಅರಿತು, ಅವರ ಮೇಲೆ ನಂಬಿಕೆ ಮತ್ತು ಭಕ್ತಿ ಬೆಳೆಸಿಕೊಳ್ಳಬೇಕು.

ಹುಬ್ಬಳ್ಳಿ:

ಭಕ್ತರು ಸದ್ಗುರು ಸಿದ್ಧಾರೂಢರ ಸದ್ವಿಚಾರ ಅರಿತುಕೊಂಡು ಬಾಳುವಂತೆ ಬೀರವಳಿಯ ಪ್ರವಚನಕಾರ ಶ್ರೀಶಿವಕುಮಾರ ಶಾಸ್ತ್ರಿ ಕರೆ ನೀಡಿದರು.

ತಾಲೂಕಿನ ಛಬ್ಬಿ ಗ್ರಾಮದಲ್ಲಿ ಸದ್ಗುರು ಶ್ರೀಸಿದ್ಧಾರೂಢ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಿದ್ಧಾರೂಢ ಕಲ್ಪದ್ರುಮ ಪುರಾಣ ಪ್ರವಚನದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.

ಸಿದ್ಧಾರೂಢರು ಎಲ್ಲರನ್ನೂ ಸಮಾನವಾಗಿ ಆಶೀರ್ವದಿಸುತ್ತಿದ್ದರು. ಅವರ ಜೀವನದಲ್ಲಿ ಒಳ್ಳೆಯದನ್ನು ಮಾಡಿದವರ ಜತೆಗೆ ನೋವು ನೀಡಿದವರೂ ಇದ್ದರು. ಆದರೂ ಅವರು ಎಲ್ಲರನ್ನೂ ಸಮಾನ ದೃಷ್ಟಿಯಿಂದ ಕಂಡರು. ಹೀಗಾಗಿ ಭಕ್ತರು ಸಿದ್ಧಾರೂಢ ಸ್ವಾಮೀಜಿಯವರ ಜೀವನದ ಉತ್ತಮ ವಿಚಾರಗಳನ್ನು ಅರಿತು, ಅವರ ಮೇಲೆ ನಂಬಿಕೆ ಮತ್ತು ಭಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಸಿದ್ಧಾರೂಢ ಶ್ರೀಗಳು ಗದ್ದುಗೆಯಲ್ಲಿ ಸದಾಕಾಲ ನೆಲೆಸಿದ್ದು, ‘ಓಂ ನಮಃ ಶಿವಾಯ’ ಎಂಬ ನಾಮಸ್ಮರಣೆ ನಿರಂತರವಾಗಿ ಮೊಳಗುತ್ತಿರುತ್ತದೆ. ಸಿದ್ಧಾರೂಢ ಅಜ್ಜನನ್ನು ನಂಬಿ ನಡೆದ ಭಕ್ತರನ್ನು ಅವರು ಕೈಹಿಡಿದು ಮುಕ್ತಿಯ ಮಾರ್ಗದತ್ತ ಕರೆದೊಯ್ಯುತ್ತಾರೆ. ಆದ್ದರಿಂದ ಅವರ ಜ್ಞಾನ, ತತ್ವ ಹಾಗೂ ಆದರ್ಶಗಳನ್ನು ಎಂದಿಗೂ ಮರೆಯಬಾರದು ಎಂದರು.

ಕುಂದಗೋಳ ಕಲ್ಯಾಣಪುರ ಮಠದ ಬಸವಣ್ಣಜ್ಜನವರು ಸಾನ್ನಿಧ್ಯ ವಹಿಸಿದ್ದರು. ಅರ್ಚಕ ಸಂಗಯ್ಯಸ್ವಾಮಿ ಹಿರೇಮಠ, ಬಸವಣ್ಣಪ್ಪ ನಾಗರಳ್ಳಿ, ಗಂಗಪ್ಪ ಕಡಪಟ್ಟಿ, ಬಸವಣ್ಣಪ್ಪ ನಾಗರಳ್ಳಿ, ದೇವೇಂದ್ರಪ್ಪ ಕಾಗೇನವರ, ರವಿ ಹುಲಂಬಿ, ಭಗವಂತ ಬಸಾಪುರ, ಬಸನಗೌಡ ಪಾಟೀಲ, ಗದಿಗೆಪ್ಪ ಬಂಡಿವಾಡ, ಮಲ್ಲಿಕಾರ್ಜುನ ಕಾಳಿ, ಚಂದ್ರಪ್ಪ ಹುಣಸಿಮರ, ಮಂಜುನಾಥ ಹನುಮಕ್ಕನವರ, ಕರಿಯಪ್ಪ ಕೋಳಿ, ಶಾಂತನಗೌಡ ಪಾಟೀಲ ಸೇರಿದಂತೆ ಹಲವರಿದ್ದರು. ಮಲ್ಲಿಕಾರ್ಜುನ ವಣ್ಣೂರ ನಿರೂಪಿಸಿದರು. ಬಸವರಾಜ ಬೆಣ್ಣಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯ ಪರಿಕಲ್ಪನೆಗೆ ಒತ್ತು ನೀಡೋಣ: ಕೃಷ್ಣಕುಮಾರ್ ಶೆಟ್ಟಿ
ಸ್ವಾತಂತ್ರ್ಯ ಹಿರಿಯರ ತ್ಯಾಗದ ಫಲ: ಸ್ಟೆಲ್ಲಾ ವರ್ಗೀಸ್