ಮೀನಿನಂತೆ ಬದುಕಾಗಲಿ: ಡಾ. ವೀರಪ್ಪ ಮೊಯ್ಲಿ

KannadaprabhaNewsNetwork | Published : Feb 20, 2024 1:46 AM

ಸಾರಾಂಶ

ಮೂಡುಬಿದಿರೆ ಪುರಾತನ ಶ್ರೀ ಆದಿಶಕ್ತಿ ಮಹಾಕಾಳಿ ದೇವಸ್ಥಾನದಲ್ಲಿ ಸಾನ್ನಿಧ್ಯ ಬ್ರಹ್ಮಕಲಶಾಭಿಷೇಕದ ನಂತರದ ವಾರ್ಷಿಕ ರಾಶಿಪೂಜಾ ಮಹೋತ್ಸದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಮಾತನಾಡಿದರು. ಮೂಡುಬಿದಿರೆ ಪರಿಸರದಲ್ಲಾಗುತ್ತಿದ್ದ ಎಲ್ಲ ಜಾತ್ರೆ, ಕ್ರೀಡೆ, ಸಾಂಸ್ಕೃತಿಕ ಬದುಕನ್ನು ಅನುಭವಿಸಿದ ಕಾರಣ ಮಹಾಕಾವ್ಯಗಳನ್ನು ಬರೆಯಲು ಈ ಊರು ಪ್ರೇರಣೆ ಎಂದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಸಮುದ್ರವೇ ತನ್ನದೆಂದು ತಿಳಿದುಕೊಂಡು ಬಾಳುವಂತೆ ಮೀನಿನಂತೆ ನಮ್ಮ ಬದುಕಾಗಬೇಕೇ ಹೊರತು ಬರೀ ನದಿಗಳಂತೆ ಸಂಕುಚಿತವಾಗಿ ಅನ್ಯರ ಬೆಳವಣಿಗೆಯಿಂದ ಅಸೂಯೆಪಟ್ಟು ತಾವೇ ಬೂದಿಯಾಗುವ ಸ್ಥಿತಿ ಯಾರಿಗೂ ಬರಬಾರದು ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯ್ಲಿ ಹೇಳಿದರು.

ಮೂಡುಬಿದಿರೆ ಪುರಾತನ ಶ್ರೀ ಆದಿಶಕ್ತಿ ಮಹಾಕಾಳಿ ದೇವಸ್ಥಾನದಲ್ಲಿ ಸಾನ್ನಿಧ್ಯ ಬ್ರಹ್ಮಕಲಶಾಭಿಷೇಕದ ನಂತರದ ವಾರ್ಷಿಕ ರಾಶಿಪೂಜಾ ಮಹೋತ್ಸದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.ಮೂಡುಬಿದಿರೆ ಪರಿಸರದಲ್ಲಾಗುತ್ತಿದ್ದ ಎಲ್ಲ ಜಾತ್ರೆ, ಕ್ರೀಡೆ, ಸಾಂಸ್ಕೃತಿಕ ಬದುಕನ್ನು ಅನುಭವಿಸಿದ ಕಾರಣ ಮಹಾಕಾವ್ಯಗಳನ್ನು ಬರೆಯಲು ಈ ಊರು ಪ್ರೇರಣೆ, ಸ್ಫೂರ್ತಿ ನೀಡಿದೆ ಎಂದವರು ನೆನಪಿಸಿಕೊಂಡರು.ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಿ, ಬ್ರಹ್ಮಕಲಶ ಮತ್ತು ರಾಶಿಪೂಜೆಯಲ್ಲಿ ಸಹಕರಿಸಿದವರನ್ನು ಗೌರವಿಸಿದರು.

ಜಯಶ್ರೀ ಅಮರನಾಥ ಶೆಟ್ಟಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಶ್ರೀಪತಿ ಭಟ್, ಬಿಜೆಪಿ ಮುಖಂಡ ಸುದರ್ಶನ ಎಂ., ಡಾ.ಆಮರಶ್ರೀ ಅಮರನಾಥ ಶೆಟ್ಟಿ, ಎಂಸಿಎಸ್ ಸೊಸೈಟಿಯ ವಿಶೇಷ ಕರ್ತವ್ಯ ಅಧಿಕಾರಿ ಚಂದ್ರಶೇಖರ ಎಂ., ಕೆಎಂಎಫ್ ಜಿಲ್ಲಾಧ್ಯಕ್ಷ ಸುಚರಿತ ಶೆಟ್ಟಿ, ದೇವಿ ಪ್ರಸಾದ್ ಶೆಟ್ಟಿ, ಆಡಳಿತ ಮೊಕ್ತೇಸರ ರಾಜ್ ಮೋಹನ ಶೆಟ್ಟಿ ಕೊಡ್ವಡ್ಗ, ಕಲಾವತಿ ಆರ್. ಹೆಗ್ಡೆ, ಯಶೋದಾ ಪ್ರಭಾಕರ ರಾವ್ ಬೆರ್ಕೆ, ಸಂತೋಷ ಶೆಟ್ಟಿ ಪುತ್ತಿಗೆ, ವಿಶ್ವನಾಥ ಬೋವಿ, ಭರತ್ ಶೆಟ್ಟಿ, ಕೃಷ್ಣ ಶೆಟ್ಟಿ ಮೂಡುಬರ್ಕೆ, ಭಾಗ್ಯಶ್ರೀ ಸಹಿತ ವಿವಿಧ ಸಮಿತಿಗಳ ಪ್ರಮುಖರಿದ್ದರು.

ಪ್ರ. ಕಾರ್ಯದರ್ಶಿ ತೋಡಾರು ದಿವಾಕರ ಶೆಟ್ಟಿ ಪ್ರಸ್ತಾವನೆಗೈದರು. ಡಾ.ಮೋಹನ ಆಳ್ವ ಸ್ವಾಗತಿಸಿದರು. ರಾಜಾರಾಮ ನಾಗರಕಟ್ಟೆ ವಂದಿಸಿದರು. ಜಗನ್ನಾಥ ಸಪಲಿಗ ಸಭಾ ಕಲಾಪ, ಚೇತನಾ ಹೆಗ್ಡೆ ಸಾಂಸ್ಕೃತಿಕ ಕಲಾಪ ನಿರೂಪಿಸಿದರು. ಬಳಿಕ ಸಾಂಪ್ರದಾಯಿಕ ರಾಶಿಪೂಜೆ ಜರುಗಿತು.

Share this article