ಹೆತ್ತವರ ಘನತೆ, ಗೌರವಕ್ಕೆ ಚ್ಯುತಿ ಬಾರದಂತೆ ಬದುಕಿ: ದಾಮೋದರ ಶರ್ಮಾ

KannadaprabhaNewsNetwork |  
Published : Jan 06, 2025, 01:00 AM IST
ಫೋಟೋ : ೪ಕೆಎಂಟಿ_ಜೆಎಎನ್_ಕೆಪಿ೩  : ಸರಸ್ವತಿ ಪಿ.ಯು ಕಾಲೇಜಿನಲ್ಲಿ ಸಂಸ್ಕಾರಧಾರೆ ಕಾರ್ಯಕ್ರಮಕ್ಕೆ ದಾಮೋದರ ಶರ್ಮಾ ಉದ್ಘಾಟಿಸಿದರು. ಗುರುರಾಜ ಶೆಟ್ಟಿ, ಕಿರಣ ಭಟ್, ರಮೇಶ ಪ್ರಭು, ಡಿ.ಡಿ.ಕಾಮತ ಇದ್ದರು.  | Kannada Prabha

ಸಾರಾಂಶ

ಹೆತ್ತವರ ತ್ಯಾಗ ಮತ್ತು ನಾವು ಏಕೆ ದಾರಿ ತಪ್ಪುತ್ತಿದ್ದೇವೆ ಎನ್ನುವ ಆತ್ಮಾವಲೋಕನವೇ ನಮ್ಮನ್ನು ಸರಿದಾರಿಗೆ ತರುವುದು.

ಕುಮಟಾ: ಹೆತ್ತವರ ಘನತೆ, ಗೌರವಕ್ಕೆ ಚ್ಯುತಿ ಬಾರದಂತೆ ಬದುಕಿ, ಸಾಧನೆಯಿಂದ ಅವರನ್ನು ಪೂಜಿಸಿದರೆ ಮತ್ತು ಹೆತ್ತವರನ್ನು ಎಂದಿಗೂ ನೋಯಿಸದಂತೆ ಬದುಕಿದರೆ ಜೀವನ ಸಾರ್ಥಕ ಎಂದು ವಾಗ್ಮಿ ಎನ್.ಆರ್. ದಾಮೋದರ ಶರ್ಮಾ ತಿಳಿಸಿದರು.

ಮಂಗಳೂರಿನ ವಿಧಾತ್ರಿ ಅಕಾಡೆಮಿ ಸಹಯೋಗದೊಂದಿಗೆ ಕೊಂಕಣ ಎಜುಕೇಶನ್ ಟ್ರಸ್ಟ್‌ನ ಬಿ.ಕೆ. ಭಂಡಾರಕರ್ಸ್‌ ಸರಸ್ವತಿ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ಶನಿವಾರ ಹಮ್ಮಿಕೊಂಡಿದ್ದ ಸಂಸ್ಕಾರಧಾರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾತಿನಲ್ಲಿ ಅರ್ಥ ಬೆರೆತಿರುವಂತೆ ಮಕ್ಕಳ ಭವಿಷ್ಯದಲ್ಲಿ ಹೆತ್ತವರ ಸಮರ್ಪಣೆ ಮಿಳಿತವಾಗಿರುತ್ತದೆ. ಹೆತ್ತವರ ತ್ಯಾಗ ಮತ್ತು ನಾವು ಏಕೆ ದಾರಿ ತಪ್ಪುತ್ತಿದ್ದೇವೆ ಎನ್ನುವ ಆತ್ಮಾವಲೋಕನವೇ ನಮ್ಮನ್ನು ಸರಿದಾರಿಗೆ ತರುವುದು. ವಿದ್ಯಾರ್ಥಿಗಳಲ್ಲಿ ಸಂಸ್ಕಾರಯುತ ವ್ಯಕ್ತಿತ್ವ ಮೈಗೂಡಿಸುವ, ದೇಶದ ಸಂಸ್ಕೃತಿಯನ್ನು ಬಿತ್ತರಿಸುವಂತಹ ಕಾರ್ಯಕ್ರಮದ ಮೂಲಕ ಭವ್ಯ ಭಾರತಕ್ಕೆ ವಿಧಾತ್ರಿ ಅಕಾಡೆಮಿ, ಕೊಂಕಣ ಎಜುಕೇಶನ್ ವಿದ್ಯಾಸಂಸ್ಥೆ ಮಹತ್ತರವಾದ ಕೊಡುಗೆ ನೀಡುತ್ತಿದೆ ಎಂದರು.

ವಿಧಾತ್ರಿ ಸಹಸಂಸ್ಥಾಪಕ ಗುರುರಾಜ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ ಮೂಡಿಸುವ ಪ್ರಯತ್ನದಲ್ಲಿ ನಾವಿದ್ದೇವೆ. ಪ್ರತಿವರ್ಷ ಇಂತಹ ಕಾರ್ಯಕ್ರಮಗಳನ್ನು ಪ್ರಾರಂಭದಲ್ಲಿಯೇ ಹಮ್ಮಿಕೊಳ್ಳುವ ಯೋಜನೆ ಇದೆ. ಸಂಸ್ಕಾರಯುತ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುವುದು, ಸುಭದ್ರ ದೇಶ ಕಟ್ಟುವುದು ನಮ್ಮ ಕನಸು ಎಂದರು.

ಕೊಂಕಣ ಸಂಸ್ಥೆಯ ಟ್ರಸ್ಟಿ ರಮೇಶ ಪ್ರಭು, ಪ್ರಸ್ತುತ ಕುಸಿಯುತ್ತಿರುವ ಮಾನವೀಯ ಮೌಲ್ಯಗಳ ಕುರಿತು ಕಳವಳ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿಯನ್ನು ಪೂಜಿಸಿದರು.

ಪ್ರಾಚಾರ್ಯ ಕಿರಣ ಭಟ್ಟ ಹುತ್ಗಾರ ಸ್ವಾಗತಗೈದರು. ವಿಧಾತ್ರಿ ಅಕಾಡೆಮಿ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ, ಕೊಂಕಣದ ಟ್ರಸ್ಟಿ ಡಿ.ಡಿ. ಕಾಮತ್ ಉಪಸ್ಥಿತರಿದ್ದರು. ಉಪನ್ಯಾಸಕ ಕಾಗಾಲ ಚಿದಾನಂದ ಭಂಡಾರಿ ವಂದಿಸಿದರು. ಗಣೇಶ ಜೋಶಿ ಸಂಕೊಳ್ಳಿ ಕಾರ್ಯಕ್ರಮ ನಿರೂಪಿಸಿದರು.ರಾಘವೇಂದ್ರ ಪ್ರಸಾದಗೆ ಹವ್ಯಕ ಕೃಷಿ ರತ್ನ ಪ್ರಶಸ್ತಿ

ಯಲ್ಲಾಪುರ: ಬೆಂಗಳೂರಿನಲ್ಲಿ ನಡೆದ ೩ನೇ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭೆಯು ನೀಡುವ ಹವ್ಯಕ ಕೃಷಿ ರತ್ನ ಪ್ರಶಸ್ತಿಯನ್ನು ರಾಘವೇಂದ್ರ ಪ್ರಸಾದ ಎಸ್. ಭಟ್ಟ ಹಳವಳ್ಳಿ ಅವರ ಕೃಷಿ ಸಾಧನೆಯನ್ನು ಗುರುತಿಸಿ, ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಲಾಯಿತು.ತಾಲೂಕಿನ ಕಲ್ಲೇಶ್ವರ ಕೆಳಗಿನಕೇರಿಯ ಸದಾನಂದ ಭಟ್ಟ ಮತ್ತು ವೀಣಾ ಭಟ್ಟ ದಂಪತಿಗಳ ಪುತ್ರನಾದ ಇವರು ಈ ಹಿಂದೆ ಅಂಕೋಲಾ ಕೃಷಿ ಇಲಾಖೆಯು ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಮತ್ತು ಟಿಎಸ್ಎಸ್ ಸಂಸ್ಥೆಯು ಉತ್ತಮ ತೋಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು.ಇವರು ಉತ್ತಮ ಕೃಷಿಕರಾಗಿದ್ದು, ಅಡಕೆ, ಬಾಳೆ, ತೆಂಗು, ಕಾಳುಮೆಣಸು, ಜಾಯಿಕಾಯಿಗಳನ್ನು ಗಣನೀಯ ಪ್ರಮಾಣದಲ್ಲಿ ಬೆಳೆದು ದಾಖಲಿಸಿದ್ದಾರೆ. ಇವರು ಉತ್ತಮ ಸಾಮಾಜಿಕ ಸಂಘಟಕರು, ದಾನಿಗಳು, ಜನಪ್ರಿಯರೂ ಆಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

.ರಾಜ್ಯದ ಕಾಂಗ್ರೆಸ್‌ ಗ್ಯಾರಂಟಿಗಳು ಇಡೀ ದೇಶಕ್ಕೆ ಮಾದರಿ
ಪೂರ್ಣಾವಧಿ ಸಿಎಂ ಆಗುವ ವಿಶ್ವಾಸ ಇದೆ : ಸಿಎಂ ಸಿದ್ದರಾಮಯ್ಯ