ಲಿವರ್‌ ಕ್ಯಾನ್ಸರ್‌: ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿ ದಾಖಲೆ ನಿರ್ಮಿಸಿದ ವೈದ್ಯರು

KannadaprabhaNewsNetwork |  
Published : Sep 02, 2025, 01:00 AM IST
ಕ್ಯಾಪ್ಷನ1ಕೆಡಿವಿಜಿ32 ದಾವಣಗೆರೆಯಲ್ಲಿ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನೀಡಿದ ಎಸ್‌ಎಸ್‌ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ ವೈದ್ಯರು, ಸಿಬ್ಬಂದಿ. | Kannada Prabha

ಸಾರಾಂಶ

ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ನಗರದ ಎಸ್.ಎಸ್. ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್‌ನ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ (ಲಿವರ್ ಸರ್ಜರಿ)ಯ ಮೂಲಕ ಜೀವವನ್ನು ಉಳಿಸಿ ಮಹತ್ವದ ಸಾಧನೆ ಮಾಡಿದ್ದಾರೆ. ವಿಶೇಷವೆಂದರೆ, ಈ ರೀತಿಯ ಸಂಕೀರ್ಣ ಶಸ್ತ್ರಚಿಕಿತ್ಸೆ ದಾವಣಗೆರೆಯಲ್ಲಿ ಇದೇ ಮೊದಲ ಬಾರಿ ನಡೆದಿದೆ.

- ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್‌ನಲ್ಲಿ ಶಸ್ತ್ರಚಿಕಿತ್ಸೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ನಗರದ ಎಸ್.ಎಸ್. ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್‌ನ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ (ಲಿವರ್ ಸರ್ಜರಿ)ಯ ಮೂಲಕ ಜೀವವನ್ನು ಉಳಿಸಿ ಮಹತ್ವದ ಸಾಧನೆ ಮಾಡಿದ್ದಾರೆ. ವಿಶೇಷವೆಂದರೆ, ಈ ರೀತಿಯ ಸಂಕೀರ್ಣ ಶಸ್ತ್ರಚಿಕಿತ್ಸೆ ದಾವಣಗೆರೆಯಲ್ಲಿ ಇದೇ ಮೊದಲ ಬಾರಿ ನಡೆದಿದೆ.

ವೈದ್ಯರು 72 ವರ್ಷದ ಹಿರಿಯರೊಬ್ಬರಿಗೆ ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಡಾ. ಆರ್.ಕೆ. ಹನುಮಂತ್ ನಾಯ್ಕ್ ನೇತೃತ್ವದ ತಂಡ ಸುಮಾರು 7 ಗಂಟೆಗಳ ಕಾಲ ಪೋಸ್ಟೀರಿಯರ್ ಸೆಕ್ಷನೆಕ್ಟಮಿ (ಲಿವರ್‌ಗೆ ಸಂಬಂಧಿಸಿದ) ಶಸ್ತ್ರಚಿಕಿತ್ಸೆ ನಡೆಸಿ, ರೋಗಿಗೆ ಜೀವದಾನ ನೀಡಿದೆ.

ಇದು ಸಂಕೀರ್ಣ ಶಸ್ತ್ರಚಿಕಿತ್ಸೆಯಾಗಿದ್ದು, ಲಿವರ್‌ನ ರೋಗಪೀಡಿತ ಭಾಗವನ್ನು ಮಾತ್ರ ತೆಗೆದು, ಉಳಿದ ಆರೋಗ್ಯಯುತ ಭಾಗವನ್ನು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ವೈದ್ಯರು ಯಶಸ್ಸು ಸಾಧಿಸಿದ್ದಾರೆ.

2ನೇ ಹಂತದ ಕ್ಯಾನ್ಸರ್‌:

ಶಸ್ತ್ರಚಿಕಿತ್ಸೆ ಬಗ್ಗೆ ಮಾತನಾಡಿದ ಡಾ. ಹನುಮಂತ ನಾಯ್ಕ್ ಅವರು, 72 ವರ್ಷದ ವ್ಯಕ್ತಿಯೊಬ್ಬ ಹಲವು ದಿನಗಳಿಂದ ಹೊಟ್ಟೆನೋವು, ಹಸಿವು ಆಗದಿರುವುದು ಹಾಗೂ ತೂಕ ಕಳೆದುಕೊಳ್ಳುವ ಸಮಸ್ಯೆಯಿಂದ ಬಳಲುತ್ತಿದ್ದರು. ಆದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ವ್ಯಕ್ತಿಯನ್ನು ಪರೀಕ್ಷಿಸಿದಾಗ ಯಕೃತ್‌ನಲ್ಲಿ 6 ಸೆಂ.ಮೀ. ಗಾತ್ರದ ಹೆಪಟೋಸೆಲ್ಯುಲರ್ ಕ್ಯಾನ್ಸರ್ ಗಡ್ಡೆಗಳು ಇರುವುದು ದೃಢಪಟ್ಟಿತು. ವೈದ್ಯಕೀಯ ಪರಿಭಾಷೆಯಲ್ಲಿ ಈ ಸ್ಥಿತಿಯನ್ನು ಗ್ರೇಡ್ ಬಿ, ಎರಡನೇಯ ಹಂತದ ಕ್ಯಾನ್ಸರ್ ಎಂದು ಗುರುತಿಸಲಾಗುತ್ತದೆ ಎಂದರು.

ಅತ್ಯಂತ ಎಚ್ಚರಿಕೆ ಅಗತ್ಯ:

ಪೋಸ್ಟೀರಿಯರ್ ಸೆಕ್ಷನೆಕ್ಟಮಿ ಶಸ್ತ್ರಚಿಕಿತ್ಸೆಯು ಅತ್ಯಂತ ಸವಾಲಿನದ್ದಾಗಿದೆ. ಏಕೆಂದರೆ ಯಕೃತ್ತಿನ ಹಾನಿಗೊಳಗಾದ ಭಾಗವು (ಸೆಗ್ಮೆಂಟ್ 6 ಮತ್ತು 7) ಪ್ರಮುಖ ರಕ್ತನಾಳಗಳ ಹತ್ತಿರ, ಬಲಭಾಗದ ಆಳದಲ್ಲಿದೆ. ಹೀಗಾಗಿ, ಈ ಭಾಗವನ್ನು ತೆಗೆದುಹಾಕುವಾಗ ಅತ್ಯಂತ ಎಚ್ಚರಿಕೆ ಅಗತ್ಯ ಇರುತ್ತದೆ. ರೋಗಪೀಡಿತ ಭಾಗವನ್ನು ಮಾತ್ರ ಕತ್ತರಿಸಿ, ಉಳಿದ ಭಾಗವು ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಈ ಶಸ್ತ್ರಚಿಕಿತ್ಸೆಗೆ ಪ್ರಾವೀಣ್ಯ ಮತ್ತು ನಿಖರತೆ ಅವಶ್ಯಕ ಎಂದರು.

ಈ ರೀತಿಯ ಶಸ್ತ್ರಚಿಕಿತ್ಸೆಯು ವೃದ್ಧ ರೋಗಿಗಳಲ್ಲಿ ಅಪಾಯಕಾರಿ. ಆದರೆ, ನಮ್ಮ ತಂಡ ಶಸ್ತ್ರಚಿಕಿತ್ಸೆಯನ್ನು ಸುಗಮವಾಗಿ ನಡೆಸಿದೆ ಮತ್ತು ರೋಗಿಯು ಸಂಪೂರ್ಣವಾಗಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿಸಿದರು.

ಎಸ್‌.ಎಸ್. ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕ ಸುನೀಲ್ ಭಂಡಾರಿಗಲ್ ಮಾತನಾಡಿ, ನಮ್ಮ ವೈದ್ಯರು ದಾವಣಗೆರೆಯಲ್ಲಿಯೇ ಮೊದಲ ಬಾರಿಗೆ ಈ ಸಂಕೀರ್ಣ ಯಕೃತ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿರುವುದು ನಮಗೆ ಸಂತಸ ತಂದಿದೆ. ನಾನು ಶಸ್ತ್ರಚಿಕಿತ್ಸಾ ತಂಡವನ್ನು ಅಭಿನಂದಿಸುತ್ತೇನೆ. ಮಧ್ಯ ಕರ್ನಾಟಕದ ಜನತೆಗೆ ವಿಶ್ವ ದರ್ಜೆಯ ಆರೋಗ್ಯ ಸೇವೆಯನ್ನು ಇನ್ನಷ್ಟು ಹತ್ತಿರ ತರಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

- - -

-1ಕೆಡಿವಿಜಿ32.ಜೆಪಿಜಿ:

ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಗೆ ದಾವಣಗೆರೆಯ ಎಸ್‌ಎಸ್‌ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್‌ನ ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಡಾ. ಆರ್.ಕೆ. ಹನುಮಂತ್ ನಾಯ್ಕ್ ನೇತೃತ್ವದ ತಂಡ ಪೋಸ್ಟೀರಿಯರ್ ಸೆಕ್ಷನೆಕ್ಟಮಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿ, ದಾಖಲೆ ನಿರ್ಮಿಸಿತು.

PREV

Recommended Stories

ದಕ್ಷಿಣ ಭಾರತದ ಮೊದಲ ಆ್ಯಪಲ್ ಸ್ಟೋರ್ ಬೆಂಗಳೂರಲ್ಲಿ ಆರಂಭ
ಜೈಲಲ್ಲಿರುವ ಸಿಎಂ, ಸಚಿವರ ಆಗಬೇಕು. ಏಕೆ ಗೊತ್ತಾ?