ತಾಳಿಕೋಟೆ ತಾಲೂಕಿನ ೨೧ನೇ ರಾಷ್ಟ್ರೀಯ ಜಾನುವಾರ ಗಣತಿ ಆರಂಭಗೊಂಡಿದ್ದು, ಎಲ್ಲ ರೀತಿಯ ಸಕಲ ಸಿದ್ಧತೆಯೊಂದಿಗೆ ತಂಡಗಳ ರಚನೆ ಮಾಡಿ, ಅವರಿಗೆ ತರಬೇತಿ ನೀಡಿ, ಗಣತಿ ಸಂಬಂಧಿತ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಾಳಿಕೋಟೆಯ ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಧರ್ಮಪ್ಪ ರಾಠೋಡ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ತಾಳಿಕೋಟೆ
ತಾಲೂಕಿನ ೨೧ನೇ ರಾಷ್ಟ್ರೀಯ ಜಾನುವಾರ ಗಣತಿ ಆರಂಭಗೊಂಡಿದ್ದು, ಎಲ್ಲ ರೀತಿಯ ಸಕಲ ಸಿದ್ಧತೆಯೊಂದಿಗೆ ತಂಡಗಳ ರಚನೆ ಮಾಡಿ, ಅವರಿಗೆ ತರಬೇತಿ ನೀಡಿ, ಗಣತಿ ಸಂಬಂಧಿತ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಾಳಿಕೋಟೆಯ ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಧರ್ಮಪ್ಪ ರಾಠೋಡ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಪಶು ಆಸ್ಪತ್ರೆ ೧, ಪಶು ಚಿಕಿತ್ಸಾಲಯಗಳು ೭, ಪ್ರಾಥಮಿಕ ಪಶು ಚಿಕಿತ್ಸಾಲಯಗಳು ೩ ಇವೆ. ಗ್ರಾಮೀಣ ಪ್ರದೇಶದಲ್ಲಿ ಒಬ್ಬರನ್ನು ಮೇಲ್ವಿಚಾರಕರಾಗಿ ಡಾ.ಅಬ್ದುಲ್ ಮತೀನ ವಲ್ಲಿಬಾಯಿ ಅವರನ್ನು ಮತ್ತು ತಾಳಿಕೋಟೆ ಅರ್ಬನ್ ನಗರಕ್ಕೆ ಮೇಲ್ವಿಚಾರಕರಾಗಿ ಡಾ.ಮಲ್ಲಿಕಾರ್ಜುನ ಹತ್ತರಕಿಹಾಳ ಅವರನ್ನು ನೇಮಿಸಲಾಗಿದೆ ಹಾಗೂ ೬ ಜನ ಗಣತಿಯವರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು. ೨೧ನೇ ರಾಷ್ಟ್ರೀಯ ಜಾನುವಾರ ಗಣತಿಯ ಸಿದ್ಧತೆಗಳು ಮುಗಿದಿದ್ದು, ಈಗಾಗಲೇ ತಾಲೂಕಿನಲ್ಲಿ ಗಣತಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ತಾಲೂಕಿನಲ್ಲಿ ಹೈನುಗಾರಿಕೆ ಪಶುಪಾಲನೆ ಪ್ರಮುಖ ವೃತ್ತಿಯಾಗಿದೆ. ಪ್ರತಿ ವರ್ಷಕ್ಕೊಮ್ಮೆ ನಡೆಸಲಾಗುವ ಈ ಗಣತಿಯಲ್ಲಿ ಜಾನುವಾರುಗಳ ಪ್ರಮಾಣ, ವಯಸ್ಸು, ಲಿಂಗ ಸಂಯೋಜನೆ ಕೋಳಿ, ಕುರಿ, ಮೇಕೆ, ಸಾಕಾಣಿಕೆಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು ಗಣತಿಯು ಸೆ.೧ ರಿಂದ ಪ್ರಾರಂಭಗೊಂಡಿದ್ದು ಡಿ.೩೧ರವರೆಗೆ ಮನೆ ಮನೆಗೆ ತೆರಳಿ ಮಾಡಲಾಗುವುದು. ಸಾರ್ವಜನಿಕರು ಮತ್ತು ರೈತರು ಈ ಗಣತಿ ಕಾರ್ಯಕ್ಕೆ ಸಹಕರಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.