ಜಾನುವಾರುಗಳ ಸಂಖ್ಯೆ ಕ್ಷೀಣ, ಗ್ರಾಮೀಣ ಹಬ್ಬಗಳು ಕಣ್ಮರೆ: ವಿ.ಕೆ.ಜಗದೀಶ್ ಆತಂಕ

KannadaprabhaNewsNetwork |  
Published : Jan 16, 2026, 12:30 AM IST
15ಕೆಎಂಎನ್ ಡಿ23 | Kannada Prabha

ಸಾರಾಂಶ

ವಿಶ್ವಕ್ಕೆ ಬೆಳಕು ನೀಡುವ ಸೂರ್ಯದೇವನು ಸಂಕ್ರಾಂತಿಯ ದಿನದಂದು ತನ್ನ ಪಥವನ್ನು ಬದಲಿಸಿ ಸಂಚಾರ ಮಾಡಿ ವಿಶ್ವಕ್ಕೆ ಬೆಳಕು ನೀಡುವ ಕಾರ್ಯವನ್ನು ಮುಂದುವರೆಸುವ ಶುಭದಿನವೂ ಆಗಿದೆ. ರೈತರ ಸೌಹಾರ್ಧತೆ ಸಂಕೇತವಾದ ಸಂಕ್ರಾಂತಿ ಹಬ್ಬ ಸ್ನೇಹ ಸಾಮರಸ್ಯದಿಂದ ಆಚರಣೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಹಳ್ಳಿಗಾಡಿನಲ್ಲಿ ಜಾನುವಾರುಗಳ ಸಂಖ್ಯೆ ಕ್ಷೀಣಿಸುವ ಜೊತೆಗೆ ಗ್ರಾಮೀಣ ಹಬ್ಬಗಳು ಕಣ್ಮರೆಯಾಗುತ್ತಿರುವುದು ಆತಂಕಕಾರಿ ವಿಚಾರ ಎಂದು ಮಾನಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿ.ಕೆ.ಜಗದೀಶ್ ತಿಳಿಸಿದರು.

ತಾಲೂಕಿನ ಬೆಸಗರಹಳ್ಳಿ ಮಾನಸ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮ ಹಾಗೂ ರಾಶಿ ಮತ್ತು ಗೋಪೂಜೆ ನೆರವೇರಿಸಿ ಮಾತನಾಡಿ, ಇಂದಿನ ಯುವಜನತೆ ಪೂರ್ವಿಕರ ಸಂಪ್ರದಾಯಗಳನ್ನು ಪಾಲಿಸಬೇಕು ಎಂದರು.

ಸಂಕ್ರಾಂತಿ ರೈತರ ಬದುಕಿನಲ್ಲಿ ಸಂತೋಷ ಮತ್ತು ಸಮೃದ್ಧಿ ತರುವ ನೂತನ ವರ್ಷದ ಮೊದಲ ಹಬ್ಬ. ಗ್ರಾಮೀಣ ಹಬ್ಬಗಳನ್ನು ಮುಂದಿನ ಪೀಳಿಗೆಗೆ, ನಮ್ಮ ಸಂಸ್ಕೃತಿ ಪರಂಪರೆಯುಳ್ಳ ಹಾಗೂ ಹಬ್ಬ ಹರಿದಿನಗಳ ಮಹತ್ವದ ಬಗ್ಗೆ ಶಾಲೆ ಮಕ್ಕಳಿಗೆ ತಿಳಿಸಿಕೊಡುವ ಅಗತ್ಯವಿದೆ ಎಂದರು.

ವಿಶ್ವಕ್ಕೆ ಬೆಳಕು ನೀಡುವ ಸೂರ್ಯದೇವನು ಸಂಕ್ರಾಂತಿಯ ದಿನದಂದು ತನ್ನ ಪಥವನ್ನು ಬದಲಿಸಿ ಸಂಚಾರ ಮಾಡಿ ವಿಶ್ವಕ್ಕೆ ಬೆಳಕು ನೀಡುವ ಕಾರ್ಯವನ್ನು ಮುಂದುವರೆಸುವ ಶುಭದಿನವೂ ಆಗಿದೆ. ರೈತ ವಿಶ್ವದ ಜನರ ಹಸಿವು ನೀಗಿಸುವ ಶಕ್ತಿ ಹೊಂದಿದ್ದೇನೆ. ರೈತರ ಸೌಹಾರ್ಧತೆ ಸಂಕೇತವಾದ ಸಂಕ್ರಾಂತಿ ಹಬ್ಬ ಸ್ನೇಹ ಸಾಮರಸ್ಯದಿಂದ ಆಚರಣೆ ಮಾಡಬೇಕೆಂದರು.

ಈ ವೇಳೆ ಮಾನಸ ವಿದ್ಯಾ ಸಂಸ್ಥೆ ನಿರ್ದೇಶಕಿ ಮಂಜುಳಾ ಜಗದೀಶ್, ಪ್ರಾಂಶುಪಾಲರಾದ ಪ್ರವೀಣ್‌ಕುಮಾರ್, ರಮೇಶ್, ಬಸವರಾಜು, ಶರತ್, ಪಲ್ಲವಿ, ಮಮತ, ಕಲಾವತಿ ಇತರರಿದ್ದರು. ಶ್ರೀರಂಗಪಟ್ಟಣ ಸೇರಿ ಹಲವೆಡೆ ಮಕರ ಸಂಕ್ರಾಂತಿ ಹಬ್ಬ ಆಚರಣೆ

ಶ್ರೀರಂಗಪಟ್ಟಣ: ಉತ್ತರಾಯಣ ಪುಣ್ಯಕಾಲ ಮಕರ ಸಂಕ್ರಾಂತಿ ಹಬ್ಬವನ್ನು ಗುರವಾರ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಬೆಳ್ಳಂ ಬೆಳಗ್ಗೆ ಪ್ರತಿಯೊಬ್ಬರು ತಮ್ಮ ಮನೆ ಅಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರಗಳುಳ್ಳ ರಂಗೋಲಿಗಳನ್ನು ಮಕ್ಕಳು, ಯುವತಿಯರು, ಮಹಿಳೆಯರು ಬಿಡಿಸುವ ಮೂಲಕ ಹಬ್ಬಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ದೇವರಿಗೆ ವಿಶೇಷ ಪೂಜೆ, ನೈವೇದ್ಯ ಅರ್ಪಿಸಿ, ಭಕ್ಷ- ಭೋಜನಗಳನ್ನು ಸವಿದರು. ಎಳ್ಳು- ಬೆಲ್ಲ ತಿಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಸಂಜೆ ವೇಳೆ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ತಮ್ಮ ಬೀಯಲ್ಲಿನ ಪ್ರತಿ ಮನೆಗಳಿಗೆ ತೆರಳಿ ಎಳ್ಳು ಬೆಲ್ಲ, ಕಬ್ಬು ಹಂಚುತಿದುದ್ದು ಸಾಮಾನ್ಯವಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರ್‌ಸಿಯು ಧೂಳಿಗೆ ಕಮರಿದ ರೈತರ ಬದುಕು
ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಅಗತ್ಯ