20 ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ, ಯುಕೆಜಿ

KannadaprabhaNewsNetwork |  
Published : May 15, 2026, 02:15 AM IST
14ಕೆಕೆಆರ್1:ಸಂಗ್ರಹ ಚಿತ್ರ, ಅಂಗನವಾಡಿಯಲ್ಲಿ ಎಲ್.ಕೆ.ಜಿ. ಯು.ಕೆಜಿ ಆರಂಭ.  | Kannada Prabha

ಸಾರಾಂಶ

ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಶಿಕ್ಷಣಕ್ಕೆ ಪಾಲಕರು ಮೊರೆ ಹೋಗುತ್ತಿದ್ದರು. ಆದರೆ ಬಡ ವರ್ಗದವರ ಮಕ್ಕಳಿಗೆ ಖಾಸಗಿ ಶಾಲೆಯ ಶುಲ್ಕ ಹೊರೆಯಾಗುತ್ತಿತ್ತು,

ಅಮರೇಶ್ವರಸ್ವಾಮಿ ಕಂದಗಲ್ಲಮಠ ಕುಕನೂರು

ಕುಕನೂರು ಮತ್ತು ಯಲಬುರ್ಗಾ ತಾಲೂಕಿನಲ್ಲಿ 20 ಅಂಗನವಾಡಿ ಕೇಂದ್ರದಲ್ಲಿ ಈ ವರ್ಷದಿಂದ ಎಲ್‌ಕೆಜಿ, ಯುಕೆಜಿ ಆರಂಭದ ಸಿದ್ಧತೆ ನಡೆದಿದೆ.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಗಣತಿ ಹೆಚ್ಚಳ ಹಾಗೂ ಉತ್ತಮ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪೂರ್ವ ಪ್ರಾಥಮಿಕ ಶಿಕ್ಷಣ ಬಲಪಡಿಸುವ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ (ಲೋವರ್ ಕಿಂಡರ್‌ ಗಾರ್ಟನ್) ಮತ್ತು ಯುಕೆಜಿ (ಅಪ್ಪರ್ ಕಿಂಡರ್‌ ಗಾರ್ಟನ್) ತರಗತಿ ಆರಂಭಿಸಲಾಗುತ್ತಿದೆ. ಕುಕನೂರು ಮತ್ತು ಯಲಬುರ್ಗಾ ತಾಲೂಕಿನಲ್ಲಿ ಈ ವರ್ಷ ಆಯ್ದ 20 ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ ಮಾಡಲಾಗುತ್ತಿದೆ.

ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಶಿಕ್ಷಣಕ್ಕೆ ಪಾಲಕರು ಮೊರೆ ಹೋಗುತ್ತಿದ್ದರು. ಆದರೆ ಬಡ ವರ್ಗದವರ ಮಕ್ಕಳಿಗೆ ಖಾಸಗಿ ಶಾಲೆಯ ಶುಲ್ಕ ಹೊರೆಯಾಗುತ್ತಿತ್ತು, ಸದ್ಯ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭವಾಗುತ್ತಿರುವುದರಿಂದ ಬಡ ವರ್ಗದವರ ಮಕ್ಕಳಿಗೆ ಅನುಕೂಲ ಆಗಲಿದೆ.

ಸದ್ಯ ಅವಳಿ ತಾಲೂಕಿನ 20 ಅಂಗನವಾಡಿ ಕೇಂದ್ರಗಳಲ್ಲಿ ಈ ವರ್ಷದಿಂದ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭವಾಗುತ್ತಿದ್ದು, ಪದವಿ ಮತ್ತು ಸ್ನಾತಕೋತ್ತರ ಪದವೀಧರರಾದ ಅಂಗನವಾಡಿ ಕಾರ್ಯಕರ್ತೆಯರಿರುವ ಹಾಗೂ ಸೌಲಭ್ಯವುಳ್ಳ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ಸಿದ್ಧತೆ ನಡೆದಿದೆ.

ಪಠ್ಯಕ್ರಮ ಸಿದ್ಧ:

ಹೊಸದಾಗಿ ಅಂಗನವಾಡಿ ಕೇಂದ್ರದಲ್ಲಿ ಆರಂಭವಾಗುವ ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಈಗಾಗಲೇ ಪಠ್ಯಕ್ರಮ ಸಹ ಸಿದ್ದವಾಗಿ ಪುಸ್ತಕಗಳು ಸಹ ಬಂದಿವೆ. ಆಂಗ್ಲ ಹಾಗೂ ಕನ್ನಡ ಮಾಧ್ಯಮ ಎರಡನ್ನು ಸಹ ಪಠ್ಯದಲ್ಲಿ ಇವೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಈ ಹೊಸ ಪೂರ್ವ ಪ್ರಾಥಮಿಕ ಪಠ್ಯಕ್ರಮ ಬೋಧಿಸಲು ವಿಶೇಷ ತರಬೇತಿ ನೀಡಲಾಗುತ್ತಿದೆ.

20 ಕಡೆ ಎಲ್‌ಕೆಜಿ, ಯುಕೆಜಿ: ಕುಕನೂರು ಮತ್ತು ಯಲಬುರ್ಗಾ ತಾಲೂಕಿನ 20 ಕಡೆ ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭವಾಗುತ್ತಿವೆ. ಕುಕನೂರು ತಾಲೂಕಿನ ಸಿದ್ನೆಕೊಪ್ಪ, ರ್ಯಾವಣಕಿ, ಹಿರೇಬೀಡಿನಾಳ, ಹೊನ್ನೂಣಸಿ, ಕುದರಿಮೋತಿಯಲ್ಲಿ ಎರಡು ಕಡೆ, ಮಸಬಹಂಚಿನಾಳ, ವಟಪರವಿ, ತಳಕಲ್ಲ, ಆಡೂರು ಗ್ರಾಮದ ಅಂಗನವಾಡಿ ಕೇಂದ್ರ, ಯಲಬುರ್ಗಾ ತಾಲೂಕಿನ ಮ್ಯಾದನೇರಿ, ಗುನ್ನಾಳ, ಕಡಬಲಕಟ್ಟಿ, ಬಳೂಟಗಿ, ಬಸಾಪೂರ, ಕಟಗಿಹಳ್ಳಿ, ಬುಕನಕಟ್ಟಿ, ಹಿರೇಮ್ಯಾಗೇರಿ, ಚಿಕ್ಕಮ್ಯಾಗೇರಿ, ಯಲಬುರ್ಗಾದಲ್ಲಿ ಆರಂಭವಾಗಲಿವೆ.

ಅಂಗನವಾಡಿ ಕೇಂದ್ರದಲ್ಲಿ ಈ ವರ್ಷದಿಂದ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಕ್ಕೆ ಸಿದ್ದತೆ ನಡೆದಿದೆ. ಈಗಾಗಲೇ ಪುಸ್ತಕಗಳು ಸಹ ಬಂದಿವೆ. ಕುಕನೂರು ಮತ್ತು ಯಲಬುರ್ಗಾ ತಾಲುಕಿನಲ್ಲಿ 20 ಅಂಗನವಾಡಿ ಕೇಂದ್ರದಲ್ಲಿ ಈ ಬಾರಿ ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ಸಿದ್ಧತೆ ಜರುಗುತ್ತಿವೆ. ಇದರಿಂದ ಬಡವರ್ಗದವರ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಯಲಬುರ್ಗಾ ಸಿಡಿಪಿ ಬೆಟದಪ್ಪ ಮಾಳೆಕೊಪ್ಪ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಪ್ರಾಪ್ತರ ಮದುವೆ ತಡೆಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚನೆ
ಬಸ್, ರಸ್ತೆ ಸಮಸ್ಯೆ ಪರಿಹಾರಕ್ಕೆ ಒತ್ತಾಯ