ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ
ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರಾಜ್ಯದ ಐದು ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆಜಿ, ಯುಕೆಜಿ ಶಿಕ್ಷಣ ಆರಂಭಿಸಿದೆ, ಅದರಂತೆ ಕುಷ್ಟಗಿ ತಾಲೂಕಿನ 26 ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸುವಂತೆ ಆದೇಶ ಹೊರಡಿಸಿದೆ.
ತಾಲೂಕಿನಾದ್ಯಂತ ಇರುವ 403 ಅಂಗನವಾಡಿ ಕೇಂದ್ರಗಳ ಪೈಕಿ ಮೂಲಭೂತ ಸೌಕರ್ಯ ಹೊಂದಿರುವ ಮೊದಲ ಹಂತದಲ್ಲಿ 26 ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದು ಕಾರ್ಯಕರ್ತೆಯರು ತರಬೇತಿಗಾಗಿ ಕಾಯುತ್ತಿದ್ದಾರೆ.ಯೋಜನೆಯ ಉದ್ದೇಶ:
ಖಾಸಗಿ ಕಾನ್ವೆಂಟ್‌ಗಳಂತೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಅಂಗನವಾಡಿಗಳಿಗೆ ಪಠ್ಯ ಪುಸ್ತಕ, ಎಲ್ಇಡಿ ಟಿವಿ, ಪೂರ್ವ ಪ್ರಾಥಮಿಕ ಹಂತದ ಪುಸ್ತಕ, ಅಡ್ಡ ಗೆರೆಗಳ ಪುಸ್ತಕ, ನೀತಿ ಕಥೆಯ ಪುಸ್ತಕ, ಬಣ್ಣ ತುಂಬುವ ಪುಸ್ತಕ, ರೈಮ್ಸ್ ಪುಸ್ತಕ, ಮಕ್ಕಳಿಗೆ ಸಮವಸ್ತ್ರ ನೀಡಲು ಯೋಜನೆ ಹಾಕಿಕೊಳ್ಳಲಾಗಿದ್ದು ಆಟ ಪಾಠ ಹೀಗೆ ಎಲ್ಲವನ್ನೂ ಮಕ್ಕಳಿಗೆ ಇಲ್ಲಿ ಹೇಳಿಕೊಡಲಾಗುತ್ತಿದ್ದು ಎಲ್‌ಕೆಜಿ, ಯುಕೆಜಿ ಆರಂಭದ ಬೆನ್ನಲ್ಲೇ ಮಕ್ಕಳ ಆಗಮನದ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.
ತಳುವಗೇರಾ ಕೇಂದ್ರ 1, ತಳುವಗೇರಾ-2, ಮುದೇನೂರು-1, ಮುದೇನೂರು-2, ಪುರ-1, ಪುರ-2, ಹಿರೇಮನ್ನಾಪೂರ-3, ಹಿರೇಮನ್ನಾಪೂರ-4, ಗುಮಗೇರಾ-1, ಗುಮಗೇರಾ-3, ಕೋರಡಕೇರಾ-3, ಕೋರಡಕೇರಾ-2, ನಿಲೋಗಲ್-4, ನಿಲೋಗಲ್ -3, ತಾವರಗೇರಾ-16, ತಾವರಗೇರಾ-10, ಕಂದಕೂರು-2, ಕಂದಕೂರು-4, ಕಾಟಾಪೂರ-3, ಕಾಟಾಪೂರು-2, ಕುಷ್ಟಗಿ-14, ಕುಷ್ಟಗಿ-30, ಕುಷ್ಟಗಿ-32, ಕುಷ್ಟಗಿ-16, ಗೋತಗಿ-1, ಗೋತಗಿ-3,