ಹಾನಗಲ್ಲ: ಹಾನಗಲ್ಲ ತಾಲೂಕಿನ ಮಂತಗಿ ಗ್ರಾಮದಲ್ಲಿ 2 ತುಂಬಿದ ಟ್ರಾಲಿ ಭಾರ ಎಳೆಯುವ ಟ್ರ್ಯಾಕ್ಟರ್ ಓಟದ ಸ್ಪರ್ಧೆಯಲ್ಲಿ ಕಿರಣ ಸಾಗರವಳ್ಳಿ 600 ಫೂಟ್ ದೂರ ಎಳೆಯುವ ಮೂಲಕ ಪ್ರಥಮ ಸ್ಥಾನ ಪಡೆದರು.
ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಗೆ ಯಂತ್ರಗಳ ಬಳಕೆ ಅಧಿಕವಾಗಿದೆ. ಟ್ರ್ಯಾಕ್ಟರ್ ಇಲ್ಲದೆ ಕೃಷಿಯೇ ಇಲ್ಲ ಎನ್ನುವಂತಾಗಿದೆ. ಹೀಗಾಗಿ ಗಜಾನನೋತ್ಸವ ಹಾಗೂ ಈದ್ ಮಿಲಾದ್ ಅಂಗವಾಗಿ ನಡೆಸಿದ ಟ್ರ್ಯಾಕ್ಟರ್ ಟ್ರಾಲಿ ಜಗ್ಗುವ ಸ್ಪರ್ಧೆಯಲ್ಲಿ ಸುಮಾರು 35 ಟ್ರ್ಯಾಕ್ಟರ್‌ಗಳು ಭಾಗವಹಿಸಿದ್ದವು. ಒಂದು ನಿಮಿಷದಲ್ಲಿ ಇಡೀ ಭಾರ ಎಳೆಯುವ ಸ್ಪರ್ಧೆ ಇದಾಗಿತ್ತು. ಎರಡನೇ ಬಹುಮಾನ 550 ಫೂಟ್ ಎಳೆದ ಪ್ರವೀಣ ಚಿಕ್ಕೇರಿಹೊಸಳ್ಳಿ ಹಾಗೂ ಮೂರನೇ ಬಹುಮಾನ 530 ಫೂಟ್ ಎಳೆದ ದಸ್ತಗೀರ ಮಂತಗಿ ಅವರ ಪಾಲಾಯಿತು.ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ ರಾಮುನಗೌಡ ಪಾಟೀಲ, ಅನ್ನದಾತನ ಬೆಂಬಲಕ್ಕೆ ಸರ್ಕಾರ ನಿಲ್ಲಲೇಬೇಕು. ಇಲ್ಲದಿದ್ದರೆ ರೈತನೆ ಕೃಷಿಯಿಂದ ವಿಮುಕ್ತನಾಗುವ ಕಾಲ ದೂರವಿಲ್ಲ ಎಂದರು.
ಮಹ್ಮದಸಲೀಂ ಸಮನಳ್ಳಿ, ಹನುಮಂತಪ್ಪ ಕೋಣನಕೊಪ್ಪ, ಗದಿಗೆಪ್ಪ ತಳವಾರ, ಮಲ್ಲಿಕಾರ್ಜುನ ನೀರಲಗಿ, ಯಲ್ಲಪ್ಪ ಕಳ್ಳಿಮನಿ, ಕುಶಾಲ ಜಾಧವ, ದಸ್ತಗೀರ ಹೀರೂರ, ಮನ್ಸೂರ ಯಳವಟ್ಟಿ, ಅಣ್ಣಪ್ಪ ಈರಕ್ಕನವರ, ವಿಜಯ ತಳವಾರ, ಫರ್ದಿನ್ ಅಹ್ಮದ ಹೀರೂರ, ಮಂಜುನಾಥ ಹಳ್ಳಿಗೊಂಡರ, ಮಂಜಪ್ಪ ನಾಗರೊಳ್ಳಿ, ಸೈಯದಸಾಬ ಹುಲ್ಲಾಳ ಮೊದಲಾದವರು ಈ ಸಂದರ್ಭದಲ್ಲಿದ್ದರು. ಬ್ರಹ್ಮರ್ಷಿ ನಾರಾಯಣ ಗುರುಗಳ ಜಯಂತಿಹಿರೇಕೆರೂರು: ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕು ಆಡಳಿತದ ವತಿಯಿಂದ ಬ್ರಹ್ಮರ್ಷಿ ನಾರಾಯಣ ಗುರುಗಳ ಜಯಂತಿ ಆಚರಿಸಲಾಯಿತು.
ಉಪನ್ಯಾಸ ನೀಡಿದ ಪಿಎಂ ಪೋಷಣ್ ಅಭಿಯಾನದ ಸಹಾಯಕ ನಿರ್ದೇಶಕ ಎಚ್.ಎಚ್. ಜಾಡರ ಅವರು, ಬ್ರಹ್ಮರ್ಷಿ ನಾರಾಯಣ ಗುರುಗಳು ಒಂದು ಜಾತಿಯ ಗುರುವಾಗದೇ, ಓರ್ವ ಸಮಾಜ ಸುಧಾರಕರಾಗಿ ಒಂದೇ ಜಾತಿ, ಮತ, ದೇವರು ಎನ್ನುವುದು ಮನುಷ್ಯ ಧರ್ಮದ ಸಾರವನ್ನು ತಿಳಿಸಿ ಅದನ್ನು ಜನಮನಕ್ಕೆ ಹರಡಿದ್ದಾರೆ. ಅವರ ಆದರ್ಶಗಳನ್ನು ಪಾಲನೆ ಮಾಡಿ ಸದೃಢ ಸಮಾಜ ನಿರ್ಮಾಣ ಮಾಡಬೇಕು ಎಂದರು.ಬಿಇಒ ಎನ್. ಶ್ರೀಧರ, ಸಮಾಜದ ಅಧ್ಯಕ್ಷ ಅಡಿವಪ್ಪ ದಾಸನಕೊಪ್ಪ, ಈಳಿಗೇರ, ನಾಗರಾಜ ಕಟ್ಟಿಮನಿ ಸೇರಿದಂತೆ ಸಮಾಜದ ಮುಖಂಡರು, ಅಧಿಕಾರಿಗಳು ಇದ್ದರು.