ಪರವಾನಗಿ ಇದ್ದರೂ ಲಾರಿ ಬಿಟ್ಟು ಓಡಿದ ಲೋಡರ್ಸ್‌

KannadaprabhaNewsNetwork |  
Published : Mar 31, 2026, 01:45 AM IST
30ಎಚ್ಎಸ್ಎನ್11 : ಅರ್ಫದ್ ಹುಸೇನ್ ಕಿಂಗ್ ಟಿಂಬರ್ಸ್ ಅಂಡ್ ಟ್ರೇಡರ್ಸ್ ಗೋದಾಮಿಗೆ ಬಂದ ಲಾರಿಯಿಂದ ಮರವನ್ನು ಇಳಿಸುತ್ತಿರುವುದು. | Kannada Prabha

ಸಾರಾಂಶ

ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಕೇಳಿದಾಗ ಇದನ್ನು ಬೀದರ್‌ನಿಂದ ತಂದಿದ್ದಾರೆ. ಇದಕ್ಕೆ ಪರವಾನಗಿ ಇದೆ ಎಂದು ತಿಳಿಸಿದ್ದಾರೆ. ಕೈಗಾರಿಕಾ ಪ್ರದೇಶದ ಕೆಲವರು ಬೀದರ್‌ನಿಂದ ಇಲ್ಲಿಗೆ ತರಲು ಕಾರಣ ಏನು. ಈ ಬೆಲೆಬಾಳುವ ಅಕೇಶಿಯಾ ಇಲ್ಲಿಂದ ಎಲ್ಲಿಗೆ ಹೋಗುತ್ತದೆ. ಇಲ್ಲಿಂದ ಈ ಬೆಲೆಬಾಳುವ ಮರ ಹೊರಹೋಗಲು ಪರವಾನಗಿ ನೀಡಲು ಇಲ್ಲಿನ ಅರಣ್ಯ ಇಲಾಖೆಯವರಿಗೆ ಅಧಿಕಾರ ಇದೆಯೇ ಎಂದರೆ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ಇಲ್ಲ ಎಂದು ತಿಳಿಸಿದ್ದಾರೆ. ಇಂತಹ ಮರದ ಲಾರಿಗಳು ಇದುವರೆವಿಗೂ ಅನೇಕ ಬಾರಿ ಇಲ್ಲಿಂದ ಹೋಗಿದ್ದು ಈ ಬೆಲೆಬಾಳುವ ಮರಕ್ಕೆ ಕಾಡುಮರ ಎಂದು ಪರವಾನಗಿ ಕೊಟ್ಟು ಕಳುಹಿಸುತ್ತಿದ್ದಾರೆ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪಟ್ಟಣದ ಕೈಗಾರಿಕಾ ಪ್ರದೇಶದ ಅರ್ಫದ್ ಹುಸೇನ್ ಕಿಂಗ್ ಟಿಂಬರ್ಸ್‌ ಅಂಡ್ ಟ್ರೇಡರ್ಸ್‌ ಗೋದಾಮಿಗೆ ೧೬ ಚಕ್ರಗಳಿರುವ ಲಾರಿಯಲ್ಲಿ ೨೫ ಟನ್ ಅಕೇಶಿಯಾ ಮರದ ತುಂಡುಗಳನ್ನು ತುಂಬಿಕೊಂಡು ಬಂದು ಇಳಿಸುತ್ತಿದ್ದ ವೇಳೆ ಕೆಲವರು ಮೊಬೈಲ್‌ನಲ್ಲಿ ಫೋಟೋ ತೆಗೆಯಲು ಯತ್ನಿಸಿದಾಗ ಮರವನ್ನು ಇಳಿಸುತ್ತಿದ್ದವರೆಲ್ಲಾ ಲಾರಿಬಿಟ್ಟು ಓಡಿಹೋಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಕೇಳಿದಾಗ ಇದನ್ನು ಬೀದರ್‌ನಿಂದ ತಂದಿದ್ದಾರೆ. ಇದಕ್ಕೆ ಪರವಾನಗಿ ಇದೆ ಎಂದು ತಿಳಿಸಿದ್ದಾರೆ. ಕೈಗಾರಿಕಾ ಪ್ರದೇಶದ ಕೆಲವರು ಬೀದರ್‌ನಿಂದ ಇಲ್ಲಿಗೆ ತರಲು ಕಾರಣ ಏನು. ಈ ಬೆಲೆಬಾಳುವ ಅಕೇಶಿಯಾ ಇಲ್ಲಿಂದ ಎಲ್ಲಿಗೆ ಹೋಗುತ್ತದೆ. ಇಲ್ಲಿಂದ ಈ ಬೆಲೆಬಾಳುವ ಮರ ಹೊರಹೋಗಲು ಪರವಾನಗಿ ನೀಡಲು ಇಲ್ಲಿನ ಅರಣ್ಯ ಇಲಾಖೆಯವರಿಗೆ ಅಧಿಕಾರ ಇದೆಯೇ ಎಂದರೆ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ಇಲ್ಲ ಎಂದು ತಿಳಿಸಿದ್ದಾರೆ. ಇಂತಹ ಮರದ ಲಾರಿಗಳು ಇದುವರೆವಿಗೂ ಅನೇಕ ಬಾರಿ ಇಲ್ಲಿಂದ ಹೋಗಿದ್ದು ಈ ಬೆಲೆಬಾಳುವ ಮರಕ್ಕೆ ಕಾಡುಮರ ಎಂದು ಪರವಾನಗಿ ಕೊಟ್ಟು ಕಳುಹಿಸುತ್ತಿದ್ದಾರೆ ಎಂದಿದ್ದಾರೆ.

ಇಲ್ಲಿನ ಅರಣ್ಯ ಇಲಾಖೆಯವರು ಈ ಕೈಗಾರಿಕಾ ಬಡಾವಣೆಯ ಗೋದಾಮಿನಿಂದ ಕಾಡುಮರ ಎಂದು ಪರವಾನಗಿಗಿಗೆ ಪಡೆದು ಹೋಗಿರುವ ಮರಗಳೆಲ್ಲಾ ಇಂತಹ ಬೆಲೆಬಾಳುವ ಮರಗಳೇ ಎನ್ನುವ ಶಂಕೆ ವ್ಯಕ್ತವಾಗಿದೆ. ಬೆಲೆಬಾಳುವ ಮರವನ್ನು ಸಾಗಿಸಲು ಕಾಡುಮರ ಎಂದು ಪರವಾನಿಗೆ ನೀಡಲು ಲಕ್ಷ ಲಕ್ಷ ಹಣ ಪಡೆದಿರುಬಹುದು ಎಂಬ ಅನುಮಾನ ದಟ್ಟವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇದನ್ನು ಕೂಲಂಕಷವಾಗಿ ತನಿಖೆ ನಡೆಸಿ ಅಕ್ರಮ ಎಸಗಿದ್ದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಅರಣ್ಯಾಧಿಕಾರಿಗಳು ಪ್ರತಿಕ್ರಿಯಿಸಿ ಈ ಬಗ್ಗೆ ತನಿಖೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚನ್ನರಾಯಪಟ್ಟಣದಲ್ಲಿ ಬೇಸಿಗೆ ಶಿಬಿರಕ್ಕೆ ಚಾಲನೆ
ಸಬ್ಬಮ್ಮ ದೇವಿ ದರ್ಶನಕ್ಕೆ ಸದಾನಂದ ಗೌಡರ ಕುಟುಂಬ